ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ರಷ್ಯಾ ಬ್ಯಾನ್ ಆಗಿದ್ದೇಕೆ? ಬ್ಯಾನ್ ಆದರೂ ಕ್ರೀಡಾಪಟುಗಳು ಪ್ರವೇಶ ಪಡೆದಿದ್ದು ಹೇಗೆ?

Tokyo Olympics 2020: Why is Russia called ROC at the Tokyo Olympics?

ಕ್ರೀಡಾಭಿಮಾನಿಗಳು ಬಹಳ ನಿರೀಕ್ಷೆಯನ್ನು ಇಟ್ಟುಕೊಂಡು ಕಾಯುತ್ತಿದ್ದ ಟೋಕಿಯೋ ಒಲಿಂಪಿಕ್ಸ್‌ಗೆ ಶುಕ್ರವಾರ ಚಾಲನೆ ದೊರೆತಿದೆ. ವಿವಿಧ ದೇಶದ ಸಾವಿರಾರು ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು ಪದಕ ಮುಡಿಗೇರಿಸಿಕೊಳ್ಳಲು ಹಣಾಹಣಿಗಳನ್ನು ನಡೆಸುತ್ತಿದ್ದಾರೆ.

ಹೀಗೆ ಪ್ರಪಂಚದ ವಿವಿಧ ದೇಶಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದರೆ ರಷ್ಯಾ ಮಾತ್ರ ಒಲಿಂಪಿಕ್ಸ್‌ನಿಂದ ದೂರ ಉಳಿದಿದೆ. ರಷ್ಯಾ ರಾಷ್ಟ್ರವನ್ನು ಒಲಿಂಪಿಕ್ಸ್‌ನಿಂದ ನಿಷೇಧ ಮಾಡಲಾಗಿದೆ, ಹೌದು 2019ರಲ್ಲಿ ರಷ್ಯಾದ ವಿವಿಧ ಕ್ರೀಡಾಪಟುಗಳು ಡೋಪಿಂಗ್‍ಗೆ ಒಳಪಟ್ಟಿರುವುದು ಸಾಬೀತಾಗಿತ್ತು ಮತ್ತು ರಷ್ಯಾದ ಪ್ರಯೋಗಾಲಯದಲ್ಲಿ ಡೋಪಿಂಗ್ ಟೆಸ್ಟ್ ಡೇಟಾವನ್ನು ರಷ್ಯಾ ಕುಶಲತೆಯಿಂದ ನಿರ್ವಹಿಸುತ್ತದೆ ಎಂಬ ಆರೋಪದಡಿ ಡೋಪಿಂಗ್ ತಡೆ ಘಟಕ ರಷ್ಯಾವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ಗಳಿಂದ 4 ವರ್ಷ ನಿಷೇಧ ಮಾಡಿತ್ತು.

ಹೀಗಾಗಿ ರಷ್ಯಾ ದೇಶದ ಹೆಸರು ಮತ್ತು ಧ್ವಜವನ್ನು ಬಳಸಿ ಯಾವುದೇ ಆಟಗಾರರು ಸಹ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಂತಿಲ್ಲ. ಆದರೆ ಡೋಪಿಂಗ್‍ಗೆ ಒಳಗಾಗದ ಕ್ರೀಡಾಪಟುಗಳು ಮಾತ್ರ ರಷ್ಯಾ ದೇಶದ ಹೆಸರು ಮತ್ತು ಧ್ವಜ ಬಳಸದೆ ROC ( ರಷಿಯನ್ ಒಲಿಂಪಿಕ್ ಕಮಿಟಿ ) ಅಡಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿದೆ. ಹೀಗೆ ರಷಿಯನ್ ಒಲಿಂಪಿಕ್ ಕಮಿಟಿ ಅಡಿಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳ ಪೈಕಿ ಈಗಾಗಲೇ ಮೂವರು ಕ್ರೀಡಾಪಟುಗಳು ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

Story first published: Sunday, July 25, 2021, 10:55 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X