ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಅಮಿತ್ ಪಂಘಲ್, ಅತನು ದಾಸ್‌ಗೆ ಸೋಲು

Tokyo Olympics 2021: Amit Panghal, Atanu Das campaign ends with loss

ಟೋಕಿಯೋ: ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಂಘಲ್ ಅವರು 52 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸೋಲನುಭವಿಸಿದ್ದಾರೆ. ಶನಿವಾರ (ಜುಲೈ 31) ನಡೆದ ಪುರುಷರ ವಿಭಾಗದ ಫ್ಲೈವೇಟ್ ಬಾಕ್ಸಿಂಗ್ ಪ್ರಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಕೊಲಂಬಿಯಾದ ಯುಬರ್ಜೆನ್ ಮಾರ್ಟಿನೆಜ್ ವಿರುದ್ಧ ಅಮಿತ್ 1-4 ಸೋಲಿನೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದಾಸೆ ಕೈ ಚೆಲ್ಲಿದ್ದಾರೆ.

ಶ್ರೀಲಂಕಾ ಕ್ರಿಕೆಟರ್, ಆರ್‌ಸಿಬಿ ಪ್ಲೇಯರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಶ್ರೀಲಂಕಾ ಕ್ರಿಕೆಟರ್, ಆರ್‌ಸಿಬಿ ಪ್ಲೇಯರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪರ ಪದಕದ ನಿರೀಕ್ಷೆ ಮೂಡಿಸಿದ್ದ ಪ್ರಮುಖ ಸ್ಪರ್ಧಿಗಳಲ್ಲಿ ಅಮಿತ್ ಪಂಘಲ್ ಕೂಡ ಇದ್ದರು. ಆದರೆ 2016ರ ಬೆಳ್ಳಿ ಪದಕ ವಿಜೇತ ಯುಬರ್ಜೆನ್ ಮಾರ್ಟಿನೆಜ್ ಬಲಿಷ್ಠ ಗುದ್ದುಗಳೊಂದಿಗೆ ಫಲಿತಾಂಶವನ್ನು ತನ್ನೆಡೆಗೆ ಸೆಳೆದುಕೊಂಡಿದ್ದಾರೆ.

ಪಂಘಲ್‌ಗೆ ನಿರಾಸೆ
ಭಾರತಕ್ಕೆ ಪದಕ ಗೆಲ್ಲುವಾಸೆ ಮೂಡಿಸಿದ್ದ ಅಮಿತ್ ಪಂಘಲ್ ಎದುರಾಳಿ ಯುಬರ್ಜೆನ್ ಮಾರ್ಟಿನೆಜ್ ಎದುರು ತಕ್ಕ ಪೈಪೋಟಿ ನೀಡಿದರಾದರೂ ಪಾನ್-ಅಮೆರಿಕನ್ ಚಾಂಪಿಯನ್ ಮಾರ್ಟಿನೆಜ್ ದ್ವಿತೀಯ ಸುತ್ತಿನಲ್ಲಿ ಪಂಘಲ್ ದೇಹದ ಮೇಲೆ ಬಲಿಷ್ಠ ಗುದ್ದುಗಳನ್ನು ನೀಡಿದರು. ಇದಕ್ಕೆ ಉತ್ತರವಾಗಿ ಪಂಘಲ್ ಕೂಡ ತಕ್ಕ ಎದುರೇಟು ನೀಡಿದರಾದರೂ ಅಂತಿಮವಾಗಿ ಮಾರ್ಟಿನೆಜ್ ಹೆಚ್ಚು ಅಂಕಗಳನ್ನು ತನ್ನದಾಗಿಸಿಕೊಂಡರು. ಇಂದಿನ ಪಂದ್ಯದಲ್ಲಿ 25ರ ಹರೆಯದ ಅಮಿತ್ ಸೋತಿದ್ದಾರಾದರೂ ಇತ್ತೀಚಿನ ದಿನಗಳಲ್ಲಿ ಪಂಘಲ್ ಭಾರತದ ಅತ್ಯುತ್ತಮ ಬಾಕ್ಸರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ದೇಶಕ್ಕೆ ಬಂಗಾರದ ಮೆರಗು ತಂದಿದ್ದ ಅಮಿತ್, 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಪಾಕ್ ಆಟಗಾರ ಕಮ್ರನ್ ಅಕ್ಮಲ್!ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಪಾಕ್ ಆಟಗಾರ ಕಮ್ರನ್ ಅಕ್ಮಲ್!

ಆರ್ಚರಿಯಲ್ಲಿ ಭಾರತದ ಸ್ಪರ್ಧೆ ಕೊನೆ
ವಿಶ್ವ ನಂ.1 ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮತ್ತು ಅವರ ಪತಿ ಅತನು ದಾಸ್ ಆರ್ಚರಿಯಲ್ಲಿ ಸೋಲುವುದರೊಂದಿಗೆ ಆರ್ಚರಿ ವಿಭಾಗದಲ್ಲಿ ಭಾರತದ ಸ್ಪರ್ಧೆ ಕೊನೆಯಾಗಿದೆ. ಬಂಗಾರದ ಪದಕ ವಿಜೇತ ಕೊರಿಯನ್ ಆರ್ಚರ್ ಆ್ಯನ್ ಸನ್ ಎದುರು ಶುಕ್ರವಾರ (ಜುಲೈ 30) ದೀಪಿಕಾ ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ಶರಣಾದರೆ, ಅತನು ದಾಸ್ ಶನಿವಾರ (ಜುಲೈ 31) 2012ರ ಲಂಡನ್ ಒಲಿಂಪಿಕ್ಸ್ ಬಂಗಾರದ ಪದಕ ವಿಜೇತ ಜಿನ್ ಹೈಕ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ.

ಇಲ್ಲಿ ಎಲ್ಲವೂ ವಿಭಿನ್ನ
"ಈ ಒಲಿಂಪಿಕ್ಸ್‌ನಲ್ಲಿ ಪ್ರತಿಯೊಂದು ಪಂದ್ಯವೂ ವಿಭಿನ್ನವಾಗಿರುತ್ತದೆ, ಪರಿಸ್ಥಿತಿ, ಮನಸ್ಥಿತಿ, ಎಲ್ಲವೂ ವಿಭಿನ್ನವಾಗಿರುತ್ತದೆ. ಹಾಗಂತ ನಾನು ಬೇರೆ ಕ್ರೀಡಾಕೂಟಗಳಿಗೆ ಹೋಲಿಸಲು ಬಯಸುವುದಿಲ್ಲ (ಹೈಕ್ ವಿರುದ್ಧದ ಪಂದ್ಯದೊಂದಿಗೆ ಬೇರೆ ಪಂದ್ಯ). ನಾನು ಗೆಲುವಿನ ನೆಲೆಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ ಅದೃಷ್ಟ ನನ್ನ ಪರವಾಗಿ ಬರಲಿಲ್ಲ. ಬಹುಶಃ ನಾನು ಈ ಬಾರಿ ತುಂಬಾ ಒತ್ತಡವನ್ನು ತೆಗೆದುಕೊಂಡೆ ಅನ್ನಿಸುತ್ತೆ. ಇಂಥ ಪಂದ್ಯಗಳಲ್ಲಿ ನಾವು ಒತ್ತಡವನ್ನು ಬದಿಗಿಡಬೇಕು. ಮುಂದಿನ ಸಾರಿ ನಾನು ಇನ್ನೂ ಹೆಚ್ಚಿನ ಶ್ರಮವಹಿಸಿ ಅಭ್ಯಾಸ ನಡೆಸಿ ಬರುತ್ತೇನೆ," ಎಂದು ಸೋಲಿನ ಬಳಿಕ ಅತನು ಪ್ರತಿಕ್ರಿಯಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಪದಕದ ನಿರೀಕ್ಷೆ!ಟೋಕಿಯೋ ಒಲಿಂಪಿಕ್ಸ್: ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಪದಕದ ನಿರೀಕ್ಷೆ!

ಬಾಕ್ಸಿಂಗ್‌ನಲ್ಲಿ ಪದಕ ಖಾತರಿ
ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಈಗಾಗಲೇ ಒಂದು ಪದಕ ಖಾತ್ರಿಯಾಗಿದೆ. ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದಾರೆ. ಲವ್ಲಿನಾರ ಈ ಗೆಲುವಿನೊಂದಿಗೆ ಭಾರತಕ್ಕೆ ಕಂಚಿನ ಪದಕವಂತೂ ಗ್ಯಾರಂಟಿಯಾಗಿದೆ. ಸೆಮಿಫೈನಲ್‌ನಲ್ಲಿ ಫಲಿತಾಂಶ ಕಂಚು ಅಥವಾ ಬೆಳ್ಳಿ ಪದಕವನ್ನು ನಿರ್ಧರಿಸಲಿದೆ. ಭಾರತಕ್ಕೆ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಪದಕ ಗೆದ್ದ ಬಳಿಕ ಖಾತರಿಯಾಗಿರುವ ಎರಡನೇ ಪದಕವಿದು. ಅಥ್ಲೆಟಿಕ್ಸ್‌ನಲ್ಲಿ ಡಿಸ್ಕಸ್ ಥ್ರೋನಲ್ಲಿ ಕಮಲ್‌ಪ್ರೀತ್‌ ಕೌರ್ ಕೂಡ ಪದಕ ಗೆಲ್ಲುವ ನಿರೀಕ್ಷೆಯಿದೆ.

Story first published: Saturday, July 31, 2021, 14:17 [IST]
Other articles published on Jul 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X