ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪೆನ್ಸರ್ ಎನಿಸಿಕೊಂಡ ಭವಾನಿ ದೇವಿ

Tokyo Olympics 2021: Bhavani Devi Qualifies As First Indian Fencer For Games

ತಮಿಳುನಾಡಿನ ಭವಾನಿ ದೇವಿ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಸ್ಥಾನವನ್ನು ಪಡೆದುಕೊಂಡ ಮೊದಲ ಭಾರತೀಯ ಪೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕತ್ತಿ ವರಸೆ ಅಥವಾ ಪೆನ್ಸಿಂಗ್ ಎಂದು ಖ್ಯಾತವಾಗಿರುವ ಈ ಕ್ರೀಡೆಯಲ್ಲಿ 45ನೇ ಶ್ರೇಯಾಂಕಿತೆಯಾಗಿದ್ದಾರೆ.

ಅಧಿಕೃತ ಶ್ರೇಯಾಂಕ ವಿಧಾನದ ಮೂಲಕ ಭಾರತದ ಭವಾನಿದೇವಿ ಈ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಶ್ರೇಯಾಂಕವನ್ನು ಆಧರಿಸಿ ಏಷ್ಯಾ ಮತ್ತು ಒಷಿಯಾನಿಯಾ ಪ್ರದೇಶಗಳಿಗೆ ಎರಡು ವಯ್ಯಕ್ತಿಕ ಅವಕಾಶ ದೊರೆತಿದೆ. ಹೀಗಾಗಿ ಶ್ರೇಯಾಂಕಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಭವಾನಿದೇವಿಯವರ ಅರ್ಹತೆ ಖಚಿತವಾಗಿದೆ.

ಈ ಸಾಧನೆಗೆ ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. "ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಭಾರತದ ಪೆನ್ಸರ್ ಭವಾನಿದೇವಿ ಅವರಿಗೆ ಅಭಿನಂದನೆಗಳು. ಈ ಸಾಧನೆಯನ್ನು ಮಾಡಿದ ಭಾರತದ ಪ್ರಥಮ ಪೆನ್ಸರ್ ಆಗಿದ್ದಾರೆ ಭವಾನಿದೇವಿ. ಅವರಿಗೆ ನನ್ನ ಶುಭ ಹಾರೈಕೆಗಳು" ಎಂದು ಟ್ವೀಟ್‌ನಲ್ಲಿ ಹಾರೈಸಿದ್ದಾರೆ.

ಇನ್ನು 27ರ ಹರೆಯದ ಭವಾನಿದೇವಿ ಅವರ ಈ ಸಾಧನೆಗೆ "ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ" ಕೂಡ ಶುಭ ಹಾರೈಸಿದೆ. ಬುಡಾಪೆಸ್ಟ್‌ನಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ಕತ್ತಿವರಸೆ ವಿಶ್ವಕಪ್‌ನಲ್ಲಿ ಅಧಿಕೃತ ಶ್ರೇಯಾಂಕದ ಆಧಾರದ ಮೇಲೆ ಪೆನ್ಸಿಂಗ್‌ನಲ್ಲಿ ಅರ್ಹತೆಯನ್ನು ಪಡೆದ ಭಾರತದ ಮೊದಲ ಪೆನ್ಸರ್ ಎಂದು ಭವಾನಿದೇವಿ ಇತಿಹಾಸವನ್ನು ಬರೆದಿದ್ದಾರೆ. ಅವರಿಗೆ ಶುಭಾಶಯಗಳು" ಎಂದು ಟ್ವೀಟ್‌ನಲ್ಲಿ ಶುಭ ಹಾರೈಸಿದೆ.

Story first published: Monday, March 15, 2021, 15:03 [IST]
Other articles published on Mar 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X