ಟೋಕಿಯೋ ಒಲಿಂಪಿಕ್ಸ್‌ ಪದಕ ಗೆದ್ದವರಲ್ಲಿ ಯಾರಿಗೆ ಎಷ್ಟೆಷ್ಟು ಹಣ?: ಸಂಪೂರ್ಣ ಮಾಹಿತಿ

ನವದೆಹಲಿ: ಜಪಾನ್‌ನ ಟೋಕಿಯೋದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ 32ನೇ ಒಲಿಂಪಿಯಾಡ್ ಅಥವಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಇತಿಹಾಸ ನಿರ್ಮಿಸಿದೆ. ಇಷ್ಟು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ 7 ಪದಕಗಳು ಲಭಿಸಿದ್ದವು. ಇದರಲ್ಲಿ ಒಂದು ಚಿನ್ನದ ಪದಕ, 2 ಬೆಳ್ಳಿಯ ಪದಕ ಮತ್ತು ನಾಲ್ಕು ಕಂಚಿನ ಪದಕಗಳು ಸೇರಿದ್ದವು. ಅಷ್ಟೇ ಅಲ್ಲ, ಬಹಳ ವರ್ಷಗಳ ಬಳಿಕ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಪದಕ ಲಭಿಸಿತ್ತು. ಅದೂ ಚಿನ್ನದ ಪದಕ ಅನ್ನೋದು ವಿಶೇಷ.

ಚಿನ್ನ ವಿಜೇತ ನೀರಜ್‌ಗೆ ಕೋಚಿಂಗ್ ನೀಡಿದ್ದ ಕರ್ನಾಟಕದ ಕಾಶೀನಾಥ್ ಕುರಿತು ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು!ಚಿನ್ನ ವಿಜೇತ ನೀರಜ್‌ಗೆ ಕೋಚಿಂಗ್ ನೀಡಿದ್ದ ಕರ್ನಾಟಕದ ಕಾಶೀನಾಥ್ ಕುರಿತು ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು!

ಪುರುಷರ ಜಾವೆಲಿನ್ ಥ್ರೋನಲ್ಲಿ ಅಥ್ಲೀಟ್ ನೀರಜ್ ಚೋಪ್ರಾ ಭಾರತಕ್ಕೆ ಬಂಗಾರದ ಮೆರಗು ತಂದಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾರಿಂದ ಹಿಡಿದು ಪದಕ ಗೆದ್ದ ಎಲ್ಲಾ ಭಾರತೀಯರಿಗೆ ಹಣದ ಹೊಳೆಯೇ ಹರಿದು ಬಂದಿದೆ. ಈ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಘೋಷಣೆಯಾಗಿರುವ ಎಲ್ಲಾ ನಗದು ಪುರಸ್ಕಾರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ನೀರಜ್ ಚೋಪ್ರಾ

ನೀರಜ್ ಚೋಪ್ರಾ

(ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಬಂಗಾರದ ಪದಕ)

* ಹರ್ಯಾಣ ಮುಖ್ಯಮಂತ್ರಿಯಿಂದ 6 ಕೋಟಿ ರೂಪಾಯಿ ನಗದು ಪುರಸ್ಕಾರ, ಮುಂದೆ ಪಂಚಕುಲದಲ್ಲಿ ಆರಂಭಗೊಳ್ಳಲಿರುವ ಎಕ್ಸಲೆನ್ಸ್ ಫಾರ್ ಅಥ್ಲೆಟಿಕ್ಸ್‌ನ ಮುಖ್ಯಸ್ಥರಾಗಿ ಘೋಷಿಸಲಾಗಿದೆ.

* ಪಂಜಾಬ್ ಮುಖ್ಯಮಂತ್ರಿಯಿಂದ 2 ಕೋಟಿ ರೂಪಾಯಿ ನಗದು ಪುರಸ್ಕಾರ.

* ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ)ನಿಂದ 75 ಲಕ್ಷ ರೂ.

* ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ನಿಂದ 1 ಕೋಟಿ ರೂಪಾಯಿ.

* ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ)ಯಿಂದ 1 ಕೋಟಿ ರೂ.

* ಎಲನ್ ಗ್ರೂಪ್ (ಗುರುಗ್ರಾಮ ಮೂಲದ ರಿಯಲ್ ಎಸ್ಟೇಟ್ ಗ್ರೂಪ್) 25 ಲಕ್ಷ ರೂಪಾಯಿ.

* 'ಬೈಜೂಸ್'ನಿಂದ 2 ಕೋಟಿ ರೂ.

ಪಿವಿ ಸಿಂಧು

ಪಿವಿ ಸಿಂಧು

(ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ)

* ಆಂಧ್ರಪ್ರದೇಶ ಸರ್ಕಾರ: 30 ಲಕ್ಷ ರೂಪಾಯಿ

* ಬಿಸಿಸಿಐನಿಂದ: 25 ಲಕ್ಷ ರೂಪಾಯಿ

* ಐಒಎಯಿಂದ: 25 ಲಕ್ಷ ರೂಪಾಯಿ

* ಬೈಜೂಸ್‌ನಿಂದ: 1 ಕೋಟಿ ರೂಪಾಯಿ

ಭಾರತೀಯ ಪುರುಷರ ಹಾಕಿ ತಂಡ

ಭಾರತೀಯ ಪುರುಷರ ಹಾಕಿ ತಂಡ

(41 ವರ್ಷಗಳ ಬಳಿಕ ಒಲಿಂಪಿಕ್ಸ್ ಪುರುಷರ ಹಾಕಿಯಲ್ಲಿ ಕಂಚಿನ ಪದಕ)

* ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: ಸುರೇಂದರ್ ಕುಮಾರ್ ಮತ್ತು ಸುಮಿತ್ ಅವರಿಂದ ತಲಾ 2.5 ಕೋಟಿ ರೂಪಾಯಿ, ಸರ್ಕಾರಿ ಉದ್ಯೋಗಗಳು ಮತ್ತು ಹರಿಯಾಣ ಶಹರಿ ವಿಕಾಸ್ ಪ್ರಾಧಿಕಾರನ್ (HSVP) ಪ್ಲಾಟ್‌ಗಳಲ್ಲಿ ರಿಯಾಯಿತಿ ದರದಲ್ಲಿ ವಾಸಿಸಲು ಅವಕಾಶ.

* ಬಿಸಿಸಿಐನಿಂದ: ಸಂಪೂರ್ಣ ತಂಡಕ್ಕೆ 1.25 ಕೋಟಿ ರೂಪಾಯಿ

* BYJU'S ನಿಂದ: 1 ಕೋಟಿ ರೂಪಾಯಿ

* ಐಒಎಯಿಂದ: 25 ಲಕ್ಷ ರೂಪಾಯಿ

ಲವ್ಲಿನಾ ಬೊರ್ಗೊಹೈನ್

ಲವ್ಲಿನಾ ಬೊರ್ಗೊಹೈನ್

(ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ)

* ಬಿಸಿಸಿಐನಿಂದ: 25 ಲಕ್ಷ ರೂಪಾಯಿ

* ಐಒಎಯಿಂದ: 25 ಲಕ್ಷ ರೂಪಾಯಿ

* BYJU'S ನಿಂದ: 1 ಕೋಟಿ ರೂಪಾಯಿ

* ಅಸ್ಸಾಂ ಕಾಂಗ್ರೆಸ್: 3 ಲಕ್ಷ ರೂಪಾಯಿ

ರವಿ ಕುಮಾರ್ ದಹಿಯಾ

ರವಿ ಕುಮಾರ್ ದಹಿಯಾ

(ಪುರುಷರ ಸುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ)

* ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: 4 ಕೋಟಿ ರೂಪಾಯಿ, ಸರ್ಕಾರಿ ಉದ್ಯೋಗ, HSVP ಪ್ಲಾಟ್ ರಿಯಾಯಿತಿ ದರದಲ್ಲಿ

* ಬಿಸಿಸಿಐನಿಂದ: 50 ಲಕ್ಷ ರೂಪಾಯಿ

* ಐಒಎಯಿಂದ: 40 ಲಕ್ಷ ರೂಪಾಯಿ

* BYJU'S ನಿಂದ: 1 ಕೋಟಿ ರೂಪಾಯಿ

ಮೀರಾಬಾಯಿ ಚಾನು

ಮೀರಾಬಾಯಿ ಚಾನು

(ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ)

* ಅಶ್ವಿನಿ ವೈಷ್ಣವ್ ಅವರಿಂದ (ರೈಲ್ವೇ ಮಂತ್ರಿ): 2 ಕೋಟಿ ರೂಪಾಯಿ

* ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರಿಂದ: 1 ಕೋಟಿ ರೂಪಾಯಿ

* ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರಿಂದ: ಮೀರಾಬಾಯಿಯನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ ಮಾಡಲಾಗುತ್ತದೆ.

* ಬಿಸಿಸಿಐನಿಂದ: 50 ಲಕ್ಷ ರೂಪಾಯಿ

* ಐಒಎಯಿಂದ: 40 ಲಕ್ಷ ರೂಪಾಯಿ

* BYJU'S ನಿಂದ: 1 ಕೋಟಿ ರೂಪಾಯಿ

ಭಜರಂಗ್ ಪುನಿಯಾ

ಭಜರಂಗ್ ಪುನಿಯಾ

(ಕುಸ್ತಿಯಲ್ಲಿ ಕಂಚು ಗೆದ್ದರು)

* ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: 2.5 ಕೋಟಿ ರೂಪಾಯಿ, ಸರ್ಕಾರಿ ಉದ್ಯೋಗ, HSVP ಪ್ಲಾಟ್ ರಿಯಾಯಿತಿ ದರದಲ್ಲಿ

* ಬಿಸಿಸಿಐನಿಂದ: 25 ಲಕ್ಷ ರೂಪಾಯಿ

* BYJU'S ನಿಂದ: 1 ಕೋಟಿ ರೂಪಾಯಿ

* ಐಒಎಯಿಂದ: 25 ಲಕ್ಷ ರೂಪಾಯಿ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 10, 2021, 21:54 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X