ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಕೀನ್ಯಾದ ಎಲಿಯುಡ್ ಕಿಪ್ಚೋಗೆ ಮ್ಯಾರಥಾನ್ ಚಾಂಪಿಯನ್

Tokyo Olympics 2021: Eliud Kipchoge wins mens marathon title

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೀನ್ಯಾದ ಎಲಿಯುಡ್ ಕಿಪ್ಚೋಗೆ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಇದು ಕಿಪ್ಚೋಗೆ ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಸಿಗುತ್ತಿರುವ ಸತತ ಎರಡನೇ ಬಂಗಾರದ ಪದಕ 2:08:38 ಸೆಕೆಂಡ್ ಕಾಲಾವಧಿಯೊಂದಿಗೆ ಕಿಪ್ಚೋಗೆ ಬಂಗಾರದ ಪದಕ ಜಯಿಸಿದ್ದಾರೆ.

ಶಸ್ತ್ರಚಿಕಿತ್ಸೆಯಿಂದ ಚಿನ್ನದ ಪದಕ; ನೀರಜ್ ಚೋಪ್ರಾ ಸಾಹಸಗಾಥೆಶಸ್ತ್ರಚಿಕಿತ್ಸೆಯಿಂದ ಚಿನ್ನದ ಪದಕ; ನೀರಜ್ ಚೋಪ್ರಾ ಸಾಹಸಗಾಥೆ

2016ರ ರಿಯೋ ಒಲಿಂಪಿಕ್ಸ್‌ನಲ್ಲೂ ಎಲಿಯುಡ್ ಕಿಪ್ಚೋಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದರು. ಕಿಪ್ಟೋಗೆ, ಈ ಬಾರಿ ಬೆಳ್ಳಿ ಪದಕ ಗೆದ್ದ ದರ್‌ಲ್ಯಾಂಡ್ಸ್‌ನ ಅಬ್ದಿ ನಗೆಯೆ ಅವರಿಗಿಂತ 80 ಸೆಕೆಂಡ್ ಮುಂಚಿತವಾಗಿ ಓಟ ಮುಗಿಸಿದ್ದಾರೆ. ನಗೆಯೆ 2:09:58 ಸೆ. ಕಾಲಾವಧಿಯೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡರು.

ಈ ವಿಭಾಗದಲ್ಲಿ ತೃತೀಯ ಸ್ಥಾನ ಬೆಲ್ಜಿಯಂನ ಬಶೀರ್ ಅಬ್ದಿ (2:10:00 ಸೆ.) ಪಾಲಾಗಿದೆ. ಜಪಾನ್‌ನ ಸಪ್ಪೋರೋ ಭಾಗದಲ್ಲಿ ಮ್ಯಾರಥಾನ್ ಓಟ ನಡೆಯಿತು. ಆರಂಭಿಕ 17.5 ಮೈಲ್ ದೂರದವರೆಗೆ 2016ರ ರಿಯೋ ಡಿ ಜನೈರೋದಲ್ಲಿ ಕಂಚಿನ ಪದಕ ಗೆದ್ದಿದ್ದ ಗ್ಯಾಲೆನ್ ರುಪ್ ಮುನ್ನಡೆಯಲ್ಲಿದ್ದು. ಆದರೆ ಓಟ ಮುಂದುವರೆದಂತೆ ಕಿಪ್ಚೋಗೆ ಮುನ್ನಡೆ ಪಡೆದುಕೊಂಡರು.

ಟೋಕಿಯೋ ಬಂಗಾರ ವಿಜೇತ ನೀರಜ್ ಚೋಪ್ರಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು!ಟೋಕಿಯೋ ಬಂಗಾರ ವಿಜೇತ ನೀರಜ್ ಚೋಪ್ರಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು!

ಈ ಬಾರಿಯ ರೇಸ್‌ನಲ್ಲಿ ರುಪ್ 8ನೇ ಸ್ಥಾನದಲ್ಲಿ ಓಟ ಮುಗಿಸಿದ್ದಾರೆ. ಅವರ ಕಾಲಾವಧಿ 2:11:41 ಸೆಕೆಂಡ್ ಆಗಿತ್ತು. ಕಿಪ್ಟೋಗೆ ತನ್ನ ಹೆಸರಿನಲ್ಲಿರುವ ವಿಶ್ವದಾಖಲೆ ಕಾಲಾವಧಿ 2:01:39 ಸೆಕೆಂಡ್‌ನ ಸಮೀಪಕ್ಕೂ ಬರಲಿಲ್ಲ. ಯಾಕೆಂದರೆ ಓಟ ನಡೆದ ಜಾಗದಲ್ಲಿ ಅಷ್ಟರಮಟ್ಟಿಗೆ ತಾಪಮಾನ ಜಾಸ್ತಿಯಿತ್ತು. ಆದರೆ ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಎರಡು ಬಾರಿ ಬಂಗಾರ ಗೆದ್ದ ವಿಶ್ವದ ಮೂರನೇ ಓಟಗಾರನಾಗಿ ಕಿಪ್ಟೋಗೆ ಗುರುತಿಸಿಕೊಂಡಿದ್ದಾರೆ.

Story first published: Sunday, August 8, 2021, 7:26 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X