ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಬಂಗಾರ ವಿಜೇತ ನೀರಜ್ ಚೋಪ್ರಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು!

Tokyo Olympics 2021: Everything you need to know about gold medallist Neeraj Chopra

ಟೋಕಿಯೋ: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ರಾಷ್ಟ್ರಗೀತೆ ಕಡೇಯಸಾರಿ ಮೊಳಗಿದ್ದು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ. ಆವತ್ತು ಶೂಟರ್ ಅಭಿನವ ಬಿಂದ್ರಾ ಬಂಗಾರ ಗೆದ್ದು ಜಾಗತಿಕ ಕ್ರೀಡಾಕೂಟದಲ್ಲಿ ಭಾರತೀಯ ರಾಷ್ಟ್ರಗೀತೆ ಮೊಳಗುವಂತೆ ಮಾಡಿ ಇಡೀ ದೇಶಿಗರಿಗೆ ಹೆಮ್ಮೆ ಮೂಡಿಸಿದ್ದರು. ಅದಾಗಿ 13 ವರ್ಷಗಳ ಬಳಿಕ ಅಂದರೆ ಈಗ ಮತ್ತೆ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರಗೀತೆ ಕೇಳಿ ಬಂದಿದೆ. ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಪರ್ ಉಡುಗೊರೆ!ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಪರ್ ಉಡುಗೊರೆ!

ಆಗಸ್ಟ್ 7ರ ಶನಿವಾರ ನಡೆದ ಟೋಕಿಯೋ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಇದು ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಲಭಿಸುತ್ತಿರುವ ಚೊಚ್ಚಲ ಪದಕ ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸುತ್ತಿರುವ ಮೊದಲನೇ ಚಿನ್ನದ ಪದಕ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದು ನೀರಜ್ ಹಲವಾರು
ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ (ಈಟಿ ಎಸೆತ)ನಲ್ಲಿ ಬಂಗಾರ ಗೆಲ್ಲುವ ಮೂಲಕ ನೀರಜ್ ಅಪರೂಪದ ದಾಖಲೆಗಳಿಗೆ ಕಾರಣರಾಗಿದ್ದಾರೆ. ಅವರೆಂದರೆ ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7ನೇ ಪದಕ, ಮೊದಲನೇ ಚಿನ್ನದ ಪದಕ ಮತ್ತು ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಚೊಚ್ಚಲ ಪದಕವೆಂಬ ದಾಖಲೆ ನಿರ್ಮಿಸಿದ್ದಾರೆ. ಅದೂ ಪಾಲ್ಗೊಂಡ ಮೊದಲ ಒಲಿಂಪಿಕ್ಸ್‌ನಲ್ಲೇ ಬಂಗಾರಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 23ರ ಹರೆಯದ ಚೋಪ್ರಾ ಮೂರು ಪ್ರಯತ್ನಗಳಲ್ಲಿ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಚಿನ್ನದ ಪದಕದ ಎಸೆತದ ಸಾಧನೆ ತೋರಿದ್ದಾರೆ. ಆರಂಭದಲ್ಲಿ 87.03 ಮೀಟರ್, ಎರಡನೇ ಯತ್ನದಲ್ಲಿ 87.58 ಮೀಟರ್ ಮತ್ತು ಮೂರನೇ ಯತ್ನದಲ್ಲಿ 76.79 ಮೀಟರ್ ಸಾಧನೆ ತೋರಿದ್ದರು. ಇದರಲ್ಲಿ ಎರಡನೇ ಯತ್ನ ಪದಕ ತಂದಿದೆ.

ಅಗ್ರ ಐದು ಸ್ಥಾನ ಪಡೆದುಕೊಂಡವರ ಪಟ್ಟಿ
ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ (87.58 ಮೀಟರ್) ಪಡೆದುಕೊಂಡರೆ, ಝೆಕ್ ರಿಪಬ್ಲಿಕ್‌ನ ಜಾಕೂಬ್ ವಾಡ್ಲೆಜ್ಚ್ 86.67 ಮೀಟರ್ ಸಾಧನೆಯೊಂದಿಗೆ ಈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇನ್ನು ಕಂಚಿನ ಪದಕ ಝೆಕ್ ರಿಪಬ್ಲಿಕ್‌ನವರೇ ವೆಸೆಲಿ ವಿಟೆಜ್ಸ್ಲಾವ್ (85.44 ಮೀಟರ್) ಪಾಲಾಗಿದೆ. ನಾಲ್ಕನೇ ಸ್ಥಾನ ಜರ್ಮನಿಯ ಜೂಲಿಯನ್ ವೆಬ್ಬರ್, ಐದನೇ ಸ್ಥಾನ ಪಾಕಿಸ್ತಾನದ ಅರ್ಷದ್ ನದೀಮ್ ಪಡೆದುಕೊಂಡಿದ್ದಾರೆ. ಆದರೆ ನೀರಜ್ ಚೋಪ್ರಾರ ವೈಯಕ್ತಿಕ ಬೆಸ್ಟ್ ಸಾಧನೆ 88.07 ಮೀಟರ್. ಈ ಸಾಧನೆಯ ಮೂಲಕ ನೀರಜ್ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ನೀರಜ್ ಚೋಪ್ರಾ ಪ್ರಮುಖ ಸಂಗತಿಗಳು-ಮಾಹಿತಿ
* ಹೆಸರು: ನೀರಜ್ ಚೋಪ್ರಾ
* ಹುಟ್ಟಿದ ದಿನಾಂಕ: ಡಿಸೆಂಬರ್ 24, 1997
* ವಯಸ್ಸು: 23
* ಹುಟ್ಟಿದ ಸ್ಥಳ: ಪಾಣಿಪತ್, ಹರಿಯಾಣ
* ಕ್ರೀಡೆ/ಈವೆಂಟ್ (ಗಳು): ಜಾವೆಲಿನ್ ಥ್ರೋ
* ವೈಯಕ್ತಿಕ ಅತ್ಯುತ್ತಮ: 88.07 ಮೀ (ರಾಷ್ಟ್ರೀಯ ದಾಖಲೆ)

ಚೋಪ್ರಾ ಅವರಿಂದಾದ ಪ್ರಮುಖ ಸಾಧನೆಗಳು
* ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
* 2018 ಏಷ್ಯನ್ ಗೇಮ್ಸ್ ಚಿನ್ನದ ಪದಕ
* 2018 ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ
* 2016 ವಿಶ್ವ ಜೂನಿಯರ್ ಚಾಂಪಿಯನ್
* ಕಿರಿಯ ವಿಶ್ವ ದಾಖಲೆ ಹೊಂದಿರುವವರು

Story first published: Saturday, August 7, 2021, 20:32 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X