ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಅಥ್ಲೀಟ್ ಕೋವಿಡ್‌ಗೆ ತುತ್ತಾದರೆ ಫಲಿತಾಂಶ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

Tokyo Olympics 2021: Know what happens if an athlete tests Covid-19 positive? explained in kannada

ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಟೋಕಿಯೋದಲ್ಲಿರುವ ಕ್ರೀಡಾಗ್ರಾಮದಲ್ಲಿಯೂ ಹಲವರಲ್ಲಿ ಕೊರೊನಾವೈರಸ್ ಕಾಣಿಸಿಕೊಂಡಿದೆ. ಆತಂಕ ಹಾಗೂ ಸಾಕಷ್ಟು ಕಟ್ಟೆಚ್ಚರಗಳ ನಡುವೆಯೇ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ.

ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆತಂಕಗಳಿಲ್ಲದೆ ನಡೆಸುವ ಭರವಸೆಯನ್ನು ಆಯೋಜಕರು ನೀಡಿದ್ದಾರೆ. ಆದರೆ ಸುಮಾರು 11,000ದಷ್ಟು ಕ್ರೀಡಾಪಟುಗಳು ಮತ್ತು 1000 ಅಧಿಕಾರಿಗಳನ್ನು ಒಳಗೊಂಡಿರುವ ಒಲಿಂಪಿಕ್ಸ್‌ನಲ್ಲಿ ಕೊರೊನಾವೈರಸ್‌ನಿಂದ ಸಂಪೂರ್ಣವಾಗಿ ಮುಕ್ತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ನಿರ್ವಹಿಸಲು ಆಯೋಜಕರು ತೆಗೆದುಕೊಂಡಿರುವ ಕ್ರಮಗಳು ಬಹಳ ಮಹತ್ವದ್ದಾಗಿದ್ದು ಇಂತಾ ಪರಿಸ್ಥಿತಿಯಲ್ಲಿ ಅತ್ಯಂತ ನಿರ್ಣಾಯಕವಾಗಿರಲಿದೆ.

ಒಲಿಂಪಿಕ್ಸ್: ಹೆಚ್ಚಾಗುತ್ತಿದೆ ಕೋವಿಡ್ ಆತಂಕ, ತರಬೇತಿ ಆರಂಭಿಸಿದ ಭಾರತೀಯ ಅಥ್ಲೀಟ್‌ಗಳುಒಲಿಂಪಿಕ್ಸ್: ಹೆಚ್ಚಾಗುತ್ತಿದೆ ಕೋವಿಡ್ ಆತಂಕ, ತರಬೇತಿ ಆರಂಭಿಸಿದ ಭಾರತೀಯ ಅಥ್ಲೀಟ್‌ಗಳು

ಈ ಕ್ರೀಡಾಕೂಟದಲ್ಲಿ ಸಂಘಟಕರು ಕೊರೊನಾವೈರಸ್ ಪ್ರಕರಣಗಳು ಪತ್ತೆಯಾದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಿಸಲು ಕೆಲ ಮಾರ್ಗಸೂಚಿಗಳನ್ನು ಮತ್ತು ಕೆಲ ಪ್ರಕ್ರಿಯೆಗಳನ್ನು ಜಾರಿಗೆ ತಂದಿದ್ದಾರೆ.

ಕೋವಿಡ್ ಸಂದರ್ಭದ ಮಾರ್ಗಸೂಚಿಗಳು

ಕೋವಿಡ್ ಸಂದರ್ಭದ ಮಾರ್ಗಸೂಚಿಗಳು

*ಯಾವುದೇ ಅಥ್ಲೀಟ್ ಕೊರೊನಾವೈರಸ್‌ಗೆ ತುತ್ತಾದರೆ ಆ ಅಥ್ಲೀಟ್ ಪಂದ್ಯದಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಗುತ್ತದೆ. ಆದರೆ ಆ ಅಥ್ಲೀಟ್‌ನನ್ನು ಅನರ್ಹ ಎಂದು ಪರಿಗಣಿಸುವ ಬದಲು "ಪಂದ್ಯ ಆರಂಭವಾಗಿಲ್ಲ" ಎಂದು ಪರಿಗಣಿಸಲಾಗುತ್ತದೆ.
*ಸ್ಪರ್ಧೆಯ ಸ್ವರೂಪ ಮತ್ತು ಹಂತವನ್ನು ಅವಲಂಬಿಸಿ ಕ್ರೀಡಾಪಟುವಿನ ಅಥವಾ ಆ ತಂಡದ ಕನಿಷ್ಟ ಫಲಿತಾಂಶವನ್ನು ಪರಿಗಣಿಸಲಾಗುತ್ತದೆ.
*ಕೊರೊನಾವೈರಸ್‌ನ ಕಾರಣದಿಂದಾಗಿ ಭಾಗವಹಿಸಲು ಸಾಧ್ಯವಾಗದಿದ್ದರೆ ಎದುರಾಳಿ ತಂಡವನ್ನು ಅತ್ಯಂತ ಅರ್ಹ ತಂಡ ಎಂದು ಪರಿಗಣಿಸಿ ಮುಂದಿನ ಹಂತಕ್ಕೇರಲು ಅವಕಾಶವನ್ನು ಮಾಡಲಾಗುತ್ತದೆ.
ಇವುಗಳನ್ನು ಸಾಮಾನ್ಯ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಇದಲ್ಲದೆ ಕೆಲ ಕ್ರೀಡೆಗಳಲ್ಲಿ ನಿರ್ದಿಷ್ಟ ಪ್ರಕ್ರಿಯೆಗಳನ್ನು ಕೂಡ ನಿರ್ಧರಿಸಲಾಗಿದೆ.

ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಹಾಗೂ ರೆಸ್ಲಿಂಗ್

ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಹಾಗೂ ರೆಸ್ಲಿಂಗ್

*ಅಥ್ಲೆಟಿಕ್ಸ್‌ನಲ್ಲಿ ಯಾವುದೇ ಕ್ರೀಡಾಪಟು ಕೊರೊನಾವೈರಸ್‌ಗೆ ತುತ್ತಾದಲ್ಲಿ ಆ ಕ್ರೀಡಾಪಟುವಿನ ನಂತರದಲ್ಲಿ ಉತ್ತಮ ಸ್ಥಾನದಲ್ಲಿರುವ ಅಥ್ಲೀಟ್ ಮುಂದಿನ ಸ್ಥಾನಕ್ಕೇರಲು ಅರ್ಹತೆಯನ್ನು ಪಡೆಯುತ್ತಾರೆ.

*ಬ್ಯಾಡ್ಮಿಂಟನ್‌ನಲ್ಲಿ ಯಾವುದೇ ಶಟ್ಲರ್ ಕೋವಿಡ್‌ಗೆ ತುತ್ತಾದರೆ ಎದುರಾಳಿ ಮುಂದಿನ ಹಂತಕ್ಕೆ ಅರ್ಹತೆಯನ್ನು ಸಂಪಾದಿಸುತ್ತಾರೆ.

* ರೆಸ್ಲಿಂಗ್‌ನಲ್ಲಿ ಕೂಡಬ್ಯಾಡ್ಮಿಂಟನ್‌ನಂತೆಯೇ ಎದುರಾಳಿ ಬೈ ಅವಕಾಶವನ್ನು ಪಡೆದು ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆಯುತ್ತಾರೆ. ಫೈನಲ್ ಪಂದ್ಯದ ಸಂದರ್ಭದಲ್ಲಿ ಹೀಗಾದಂತಾ ಸಂದರ್ಭದಲ್ಲಿ ಸೆಮಿಫೈನಲ್‌ನಲ್ಲಿ ನಾಕೌಟ್‌ ಆಗಿರುವ ರೆಸ್ಲರ್ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಪಡೆಯುತ್ತಾರೆ.

ಟೆನಿಸ್ ಹಾಗೂ ಬಾಕ್ಸಿಂಗ್

ಟೆನಿಸ್ ಹಾಗೂ ಬಾಕ್ಸಿಂಗ್

ಈ ಎರಡು ಕ್ರೀಡೆಗಳಲ್ಲಿಯೂ ಯಾವುದೇ ಆಟಗಾರರ ಬದಲಿ ಅವಕಾಶದ ಬದಲು ಬೈ ಅವಕಾಶದ ಮೂಲಕ ಮುಂದಿನ ಹಂತಕ್ಕೆ ಕ್ರೀಡಾಪಟುಗಳು ಅರ್ಹತೆಯನ್ನು ಪಡೆಯುತ್ತಾರೆ. ಫೈನಲ್ ಪಂದ್ಯದಲ್ಲಿಯೂ ಇದೇ ರೀತಿ ನಡೆಯಲಿದ್ದು ಕೊರೊನಾವೈರಸ್‌ಗೆ ತುತ್ತಾದ ಆಟಗಾರ ಫೈನಲ್ ಪಂದ್ಯವನ್ನು ಆಡದೆ ಬೆಳ್ಳಿ ಪದಕವನ್ನು ಪಡೆದುಕೊಳ್ಳಲಿದ್ದಾರೆ.

ರಗ್ಬೀ, ಹಾಕಿ, ಫುಟ್ಬಾಲ್

ರಗ್ಬೀ, ಹಾಕಿ, ಫುಟ್ಬಾಲ್

ಇನ್ನು ತಂಡಗಳ ಕ್ರೀಡೆಗಳಾದ ರಗ್ಬೀ ಹಾಕಿ ಅಥವಾ ಫುಟ್ಬಾಲ್‌ಗಳಲ್ಲಿ ನಾಕ್‌ಔಟ್ ಹಂತಗಳಲ್ಲಿ ತಂಡ ಕೋವಿಡ್‌ಗೆ ತುತ್ತಾದಲ್ಲಿ ಕನಿಷ್ಟ ಅಂಕಗಳನ್ನು ನೀಡಲಾಗುತ್ತದೆ. ಫೈನಲ್ ಹಂತಕ್ಕೇರಿದಾಗ ಕೋವಿಡ್ ಕಾರಣದಿಂದಾಗಿ ಸ್ಪರ್ಧಿಸಲು ಸಾಧ್ಯವಾಗದಿದ್ದಾರೆ ಕೋರೊನಾವೈರಸ್‌ಗೆ ತುತ್ತಾಗಿ ಅನರ್ಹವಾಗಿರುವ ತಂಡದಿಂದ ಸೋಲಿಸ್ಪಟ್ಟ ತಂಡ ಫೈನಲ್‌ನಲ್ಲಿ ಸ್ಪರ್ಧಿಸಲು ಅರ್ಹವಾಗುತ್ತದೆ. ಮತ್ತೊಂದು ಸೆಮಿಫೈನಲಿಸ್ಟ್ ತಂಡ ಕಂಚಿನ ಪದಕವನ್ನು ಪಡೆದುಕೊಳ್ಳುತ್ತದೆ" ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.

Story first published: Tuesday, July 20, 2021, 16:04 [IST]
Other articles published on Jul 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X