ಟೋಕಿಯೋ, ಜುಲೈ 29: ಟೋಕಿಯೋ ಒಲಿಂಪಿಕ್ಸ್ ಆರಂಬವಾಗಿ ಭರ್ತಿ ಒಂದು ವಾರ ಪೂರೈಸಿದೆ. ಆರಂಭದ ದಿನ ಭಾರತೀಯ ವೈಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದ ನಂತರ ಭಾರತದ ಅಥ್ಲೀಟ್ಗಳು ಸತತವಾಗಿ ನಿರಾಸೆಯನ್ನು ಅನುಭವಿಸುತ್ತಾ ಬಂದಿದ್ದಾರೆ. ಆದರೆ ಕೆಲ ವಿಭಾಗಗಳಲ್ಲಿ ಭಾರತದ ನಿರೀಕ್ಷೆಗಳು ಉಳಿದುಕೊಂಡಿದ್ದು ಪದಕದ ಭರವಸೆ ಮೂಡಿಸಿದೆ.
ಶುಕ್ರವಾರ ಅಥ್ಲೆಟಿಕ್ಸ್ ಸ್ಪರ್ಧೆಗಳು ಕೂಡ ಆರಂಭವಾಗಲಿದ್ದು ಭಾರತೀಯರ ಕ್ರೀಡಾ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಭಾರತದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡ ನಾಳೆ ತಮ್ಮ ಮತ್ತೊಂದು ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಆರ್ಚರ್ ದೀಪಿಕಾ ಕುಮಾರಿ ಶುಕ್ರವಾರ ತಮ್ಮ ಕ್ವಾರ್ಟರ್ಫೈನಲ್ ಸ್ಪರ್ಧೆಯನ್ನು ಎದುರಿಸಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್ಗೆ ಜಯ
ಜುಲೈ 30ರ ಭಾರತದ ಆಥ್ಲಿಟ್ಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:
ಆರ್ಚರಿ
ಮಹಿಳಾ ವೈಯಕ್ತಿಕ ವಿಭಾಗ
ಕ್ವಾರ್ಟರ್ ಫೈನಲ್ ಪಂದ್ಯ
ದೀಪಿಕಾ ಕುಮಾರಿ ಮತ್ತು ಕ್ಸೆನಿಯಾ ಪೆರೋವಾ
ಸಮಯ: ಬೆಳಿಗ್ಗೆ 6:00 ಗಂಟೆ
ಅಥ್ಲೆಟಿಕ್ಸ್
ಪುರುಷರ 3000 ಮೀ ಸ್ಟೀಪಲ್ಚೇಸ್
ಅವಿನಾಶ್ ಸೇಬಲ್
ರೌಂಡ್ 1, ಹೀಟ್ 2
6:17 ಎಎಮ್ಟಿ.
ಪುರುಷರ 400 ಮೀ ಹರ್ಡಲ್ಸ್ ರೌಂಡ್ 1, ಹೀಟ್ 5
ಎಂಪಿ ಜಬೀರ್
ಬೆಳಿಗ್ಗೆ : 8:27 ಬೆಳಿಗ್ಗೆ
ಮಹಿಳೆಯರ 100 ಮೀ ರೌಂಡ್ 1, ಹೀಟ್ಸ್
ಧ್ಯುತಿ ಚಾಂದ್
ಬೆಳಿಗ್ಗೆ 8:45ಕ್ಕೆ ಆರಂಭ
ಮಿಶ್ರ 4x400 ಮೀ ರಿಲೇ ರೇಸ್ ರೌಂಡ್ 1 ಹೀಟ್ 2:
4:42 PM
ಬ್ಯಾಡ್ಮಿಂಟನ್
ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್
ಪಿ ವಿ ಸಿಂಧು vs ಅಕಾನೆ ಯಮಗುಚಿ (ಜಪಾನ್)
ಮಧ್ಯಾಹ್ನ 1:15
ಬಾಕ್ಸಿಂಗ್
ಮಹಿಳೆಯರ 60 ಕೆಜಿ, ರೌಂಡ್ ಆಫ್ 16
ಸಿಮ್ರಾಂಜಿತ್ ಕೌರ್ vs ಸುಡಾಪೋರ್ನ್ ಸೀಸೊಂಡಿ (ಥೈಲ್ಯಾಂಡ್)
ಬೆಳಿಗ್ಗೆ 8:18
ಮಹಿಳೆಯರ 69 ಕೆಜಿ ಕ್ವಾರ್ಟರ್-ಫೈನಲ್ ಪಂದ್ಯ
ಲೊವ್ಲಿನಾ ಬೊರ್ಗೊಹೈನ್ vs ನಿಯೆನ್-ಚಿನ್ ಚೆನ್ (ಚೈನೀಸ್ ತೈಪೆ)
ಬೆಳಿಗ್ಗೆ 8:48
ಈಕ್ವೆಸ್ಟ್ರಿಯನ್
ಫಾವದ್ ಮಿರ್ಜಾ
ಈವೆಂಟ್ ಡ್ರೆಸ್ಸೇಜ್ ದಿನ 1 ಸೆಷನ್ 2
ಮಧ್ಯಾಹ್ನ 2 ಗಂಟೆಗೆ ಪ್ರಾರಂಭ
ಗಾಲ್ಫ್
ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇ 2ನೇ ಸುತ್ತು
ಅನಿರ್ಬನ್ ಲಹಿರಿ ಮತ್ತು ಉದಯನ್ ಮಾನೆ
ಬೆಳಿಗ್ಗೆ 04:00
ಹಾಕಿ
ಮಹಿಳಾ ಪೂಲ್ ಎ ಪಂದ್ಯ
ಭಾರತ vs ಐರ್ಲೆಂಡ್
ಬೆಳಿಗ್ಗೆ 8:15
ಪುರುಷರ ಪೂಲ್ ಎ ಪಂದ್ಯ
ಭಾರತ vs ಜಪಾನ್
ಮಧ್ಯಾಹ್ನ 3:00
ಸೈಲಿಂಗ್
ಪುರುಷರ ಸ್ಕಿಫ್ 49er ರೇಸ್ 7, 8 ಮತ್ತು 9:
ಕೆ.ಸಿ. ಗಣಪತಿ ಮತ್ತು ವರುಣ್ ಠಕ್ಕರ್
ಬೆಳಿಗ್ಗೆ 8:35
ಮಹಿಳಾ ಲೇಸರ್ ರೇಡಿಯಲ್ ರೇಸ್ 9 ಮತ್ತು 10
ನೇತ್ರ ಕುಮಾನನ್
ಬೆಳಿಗ್ಗೆ 8:35
ಪುರುಷರ ಲೇಸರ್ ರೇಸ್ 9 ಮತ್ತು 10
ವಿಷ್ಣು ಸರವಣನ್
ಬೆಳಿಗ್ಗೆ 11:05
ಶೂಟಿಂಗ್
ಮಹಿಳಾ 25 ಮೀ ಪಿಸ್ತೂಲ್ ರ್ಯಾಪಿಡ್, ಅರ್ಹತಾ ಸುತ್ತು
ಮನು ಭಾಕರ್ ಮತ್ತು ರಾಹಿ ಸರ್ನೋಬತ್
ಬೆಳಿಗ್ಗೆ 5:30
ಬೆಳಿಗ್ಗೆ 10: 30 ಕ್ಕೆ ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್