ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಮಣಿಕಾ ಬಾತ್ರಾಗೆ ಟಿಟಿಎಫ್‌ಐನಿಂದ ಶೋಕಾಸ್ ನೋಟಿಸ್!

Tokyo Olympics 2021: TTFI to issue show cause notice to Manika Batra

ನವದೆಹಲಿ: ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್‌ ರಾಯ್ ಸಹಾಯ ನಿರಾಕರಿಸಿದ ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾಗೆ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಬುಧವಾರ (ಆಗಸ್ಟ್ 4) ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಿದೆ.

ಟಿ ಟ್ವೆಂಟಿ: ಬಾಂಗ್ಲಾದೇಶದ ವಿರುದ್ಧ ಸತತ ಎರಡನೇ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ!ಟಿ ಟ್ವೆಂಟಿ: ಬಾಂಗ್ಲಾದೇಶದ ವಿರುದ್ಧ ಸತತ ಎರಡನೇ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ!

ಮಣಿಕಾ ಬಾತ್ರಾ ಅವರ ವೈಯಕ್ತಿಕ ಕೋಚ್ ಸನ್ಮಯ್ ಪರಂಜ್ಪೆ ಅವರಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಭ್ಯಾಸದ ವೇಳೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಪಂದ್ಯದ ವೇಳೆ ಕ್ರೀಡಾಂಗಣ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸ್ಪರ್ಧೆಯ ವೇಳೆ ಪರಂಜ್ಪೆಗೆ ಅವಕಾಶ ನೀಡಬೇಕೆಂದು ಮಣಿಕಾ ಒತ್ತಾಯಿಸಿದರಾದರೂ ಆಯೋಜಕರು ಇದಕ್ಕೆ ಸಮ್ಮತಿಸಲಿಲ್ಲ.

ಯಾಕೆಂದರೆ ಒಲಿಂಪಿಕ್ಸ್‌ನಂತ ದೊಡ್ಡ ಕ್ರೀಡಾಕೂಟಗಳ ವೇಳೆ ರಾಷ್ಟ್ರೀಯ ಕೋಚ್‌ಗೆ ಸ್ಪರ್ಧೆ ನಡೆಯುತ್ತಿರುವ ವೇಳೆ ಪ್ಲೇಯರ್‌ಗೆ ಸಲಹೆ, ಮಾರ್ಗದರ್ಶನ ನೀಡಲು ಅವಕಾಶವಿದೆಯೇ ಹೊರತು ವೈಯಕ್ತಿಕ ಕೋಚ್‌ಗಳ ಸಹಾಯ ಪಡೆದುಕೊಳ್ಳಲು ಪ್ಲೇಯರ್‌ಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವಾಗ ವೈಯಕ್ತಿಕ ಕೋಚ್ ಪ್ರವೇಶಕ್ಕೆ ಹೆಚ್ಚಿನಸಾರಿ ಅವಕಾಶ ಮಾಡಿಕೊಡಲ್ಲ.

ಐಪಿಎಲ್ 2021: 3 ಸ್ಟಾರ್ ಆಟಗಾರರು ರಾಜಸ್ಥಾನ್‌ಗೆ ಕೈಕೊಡುವುದು ನಿಶ್ಚಿತಐಪಿಎಲ್ 2021: 3 ಸ್ಟಾರ್ ಆಟಗಾರರು ರಾಜಸ್ಥಾನ್‌ಗೆ ಕೈಕೊಡುವುದು ನಿಶ್ಚಿತ

ಇದರಿಂದ ಬೇಸರಗೊಂಡ ಮಣಿಕಾ ಪ್ರತಿಭಟನಾರ್ಧವಾಗಿ ಸ್ಪರ್ಧೆಯ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್‌ ರಾಯ್ ಸಹಾಯ ನಿರಾಕರಿಸಿದ್ದರು. ಪರಿಣಾಮ, ಮಹಿಳಾ ಸಿಂಗಲ್ಸ್ 32ನೇ ಸುತ್ತಿಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಮಣಿಕಾ, ಆ ಬಳಿಕ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ತಂಡ ಸ್ಪರ್ಧೆಯಲ್ಲೂ ಮಣಿಕಾಗೆ ಪದಕ ಸಿಕ್ಕಿರಲಿಲ್ಲ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿರುವ ಭಾರತೀಯ ತಂಡದ ಮಾಹಿತಿ
ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದಾರೆ. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಹಿಂದಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.

ಟೋಕಿಯೋ ಒಲಿಂಪಿಕ್ಸ್: ಪದಕದಂಚಿನಲ್ಲಿ ಎಡವಿದ ರಸ್ಲರ್ ದೀಪಕ್ ಪೂನಿಯಾಟೋಕಿಯೋ ಒಲಿಂಪಿಕ್ಸ್: ಪದಕದಂಚಿನಲ್ಲಿ ಎಡವಿದ ರಸ್ಲರ್ ದೀಪಕ್ ಪೂನಿಯಾ

ಭಾರತಕ್ಕೆ ಎರಡು ಬೆಳ್ಳಿ, ಮೂರು ಕಂಚಿನ ಪದಕ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ, ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡನೇ ಪದಕವಾಗಿ ಕಂಚು ಗೆದ್ದಿದ್ದರು. ಇನ್ನು ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಕೂಡ ಭಾರತಕ್ಕೆ ಕಂಚಿನ ಪದಕ ತಂದಿದ್ದರು. ಅದಾಗಿ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಲಭಿಸಿತ್ತು. ಇನ್ನು ಪುರುಷರ 57 ಕೆಜಿ ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಒಟ್ಟಿಗೆ 5 ಪದಕಗಳು ಈಗ ಭಾರತದ ಖಾತೆಯಲ್ಲಿವೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಇಣುಕುನೋಟ
ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್-19ನಿಂದಾಗಿ 2020ರಲ್ಲಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಅಂತಿಮವಾಗಿ ಜುಲೈ 23, 2021ರಂದು ಪ್ರಾರಂಭವಾಗಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ಭಾಗದಿಂದ ಆಗಮಿಸಿರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಟ್ಟು 205 ರಾಷ್ಟ್ರಗಳಿಂದ ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ರೀಡಾಪುಟಗಳೆಲ್ಲ 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. 32ನೇ ಒಲಿಂಪಿಯಾಡ್‌ ಎಂದು ಕರೆಯಲಾಗುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 300ಕ್ಕೂ ಹೆಚ್ಚು ಪದಕಗಳಿಗೆ ಸ್ಪರ್ಧೆಗಳು ನಡೆಯಲಿವೆ.

Story first published: Thursday, August 5, 2021, 21:59 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X