ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ವಿಶ್ವ ನಂ.1 ಆರ್ಚರ್ ದೀಪಿಕಾ ಕುಮಾರಿಗೆ ನಿರಾಸೆ

Tokyo Olympics, Archery, Womens quarter-final: Deepika Kumari loses to South Koreas An San

ಟೋಕಿಯೋ: ವಿಶ್ವ ನಂ.1 ಬಿಲ್ಲುಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತ ಆರ್ಚರ್ ದೀಪಿಕಾ ಕುಮಾರಿಗೆ ಸೋಲಾಗಿದೆ. ಶುಕ್ರವಾರ (ಜುಲೈ 30) ನಡೆದ ಮಹಿಳಾ ಆರ್ಚರಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಅವರು ದಕ್ಷಿಣ ಕೊರಿಯಾದ ಅನ್ ಸನ್ ವಿರುದ್ಧ ಸೋಲು ಕಂಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!

ದೀಪಿಕಾ ಕುಮಾರಿಯ ಭಾರತಕ್ಕೆ ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಪ್ರಿ-ಕ್ವಾರ್ಟರ್ ಫೈನಲ್‌ ಪಂದ್ಯದವರೆಗೂ ದೀಪಿಕಾ ಪದಕದ ಭರವಸೆಯನ್ನು ಮುಂದುವರೆಸಿದ್ದರು. ಆದರೆ ಪದಕ ಖಾತ್ರಿಗೆ ಇನ್ನೊಂದೇ ಗೆಲುವು ಬಾಕಿಯಿದ್ದಾಗ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೀಪಿಕಾ ನಿರಾಸೆ ಅನುಭವಿಸಿದ್ದಾರೆ.

ಅನ್ ಸನ್ ವಿರುದ್ಧ ದೀಪಿಕಾ ಉತ್ತಮ ಪೈಪೋಟಿ
ಶುಕ್ರವಾರದ ಸ್ಪರ್ಧೆಯ ವೇಳೆ ದಕ್ಷಿಣ ಕೊರಿಯಾ ಸ್ಪರ್ಧಿ ಅನ್ ಸನ್ ವಿರುದ್ಧ ದೀಪಿಕಾ ಉತ್ತಮ ಪೈಪೋಟಿ ನೀಡಿದ್ದು ಕಾಣಸಿಕ್ಕಿತು. ಆದರೆ ಕೊರಿಯಾದ ಅಗ್ರ ಶ್ರೇಯಾಂಕಿತೆ ಸನ್ ಪಂದ್ಯದ ಫಲಿತಾಂಶವನ್ನು ತನ್ನೆಡೆಗೆ ತಂದುಕೊಂಡರು. ಸ್ಪರ್ಧೆಯ ವೇಳೆ ಒಟ್ಟು ನಾಲ್ಕು ಬಾರಿ ದೀಪಿಕಾ 7ಕ್ಕೆ ಗುರಿಯಿಡುವ ಮೂಲಕ ಪದಕದಾಸೆಯನ್ನು ಕೈ ಚೆಲ್ಲಿದ್ದಾರೆ.

ಅನ್ ಸನ್ ವಿಶ್ವ ದಾಖಲೆಯ ಪ್ರದರ್ಶನ
25ರ ಹರೆಯದ ಅನ್ ಸನ್ ವಿಶ್ವ ದಾಖಲೆಯ ಪ್ರದರ್ಶನದೊಂದಿಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ. ದೀಪಿಕಾ ಎದುರಿನ ಸ್ಪರ್ಧೆಯಲ್ಲಿ ಸನ್, 6-0 ಅಂತರದಿಂದ ಜಯ ಸಾಧಿಸಿದ್ದಾರೆ. ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ದೀಪಿಕಾ ಮತ್ತೊಂದು ಒಲಿಂಪಿಕ್ಸ್‌ನಲ್ಲಿ ಆಘಾತ ಅನುಭವಿಸಿ ವೈಯಕ್ತಿಕ ವಿಭಾಗದಿಂದ ಹೊರ ಬಿದ್ದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಪಿವಿ ಸಿಂಧು ಸೆಮಿ ಫೈನಲ್ ಕದನ, ದಿನಾಂಕ, ಸಮಯ ಹೆಡ್‌ 2 ಹೆಡ್ ಮಾಹಿತಿಟೋಕಿಯೋ ಒಲಿಂಪಿಕ್ಸ್: ಪಿವಿ ಸಿಂಧು ಸೆಮಿ ಫೈನಲ್ ಕದನ, ದಿನಾಂಕ, ಸಮಯ ಹೆಡ್‌ 2 ಹೆಡ್ ಮಾಹಿತಿ

2016ರ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೀಪಿಕಾ ಹೊರ ಬಿದ್ದು ನಿರಾಸೆ ಅನುಭವಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ ಮೂಲಕ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದ ದೀಪಿಕಾ ಅಂದು ಆರಂಭಿಕ ಸುತ್ತಿನಲ್ಲೇ ಸೋತು ಸ್ಪರ್ಧೆಯಿಂದ ಹೊರ ಬಿದ್ದಿದ್ದರು.

ಅತನು ದಾಸ್ ಒಬ್ಬರೇ ಭಾರತಕ್ಕೆ ಆಶಾಭಾವ
ಇನ್ನು ಆರ್ಚರಿಯಲ್ಲಿ ಭಾರತಕ್ಕಿರುವ ಒಂದೇ ಒಂದು ಆಶಾಭಾವನೆಯೆಂದರೆ ಅದು ದೀಪಿಕಾ ಪತಿ ಅತನು ದಾಸ್. ದಾಸ್ ಅವರು ಗುರುವಾರ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಅತನು ದಾಸ್ ಅವರು ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ದಕ್ಷಿಣ ಕೊರೊಯಾದ ಜಿನ್ ಹೈಕ್ ಎದುರು ಭರ್ಜರಿ ಗೆಲುವಿನೊಂದಿಗೆ ಮುನ್ನಡೆ ಪಡೆದುಕೊಂಡಿದ್ದಾರೆ.

ದಾಸ್‌ಗೆ ತಕಾಹಾರು ಫುರುಕವಾ ಸವಾಲು
ದಾಸ್‌ಗೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ಜುಲೈ 31ರ ಶನಿವಾರ ನಡೆಯಲಿದೆ. ದಾಸ್ ಅವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಸ್ಟಾರ್ ಆಟಗಾರ ತಕಾಹಾರು ಫುರುಕವಾ ಸವಾಲು ಸ್ವೀಕರಿಸಲಿದ್ದಾರೆ. ಅಂದ್ಹಾಗೆ
ಫುರುಕವಾ ಅವರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಜಪಾನ್‌ಗೆ ಬೆಳ್ಳಿ ಪದಕ ಗೆದ್ದಿದ್ದವರು.

ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವುದರ ಕುರಿತು ಮೌನ ಮುರಿದ ರಾಹುಲ್ ದ್ರಾವಿಡ್ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವುದರ ಕುರಿತು ಮೌನ ಮುರಿದ ರಾಹುಲ್ ದ್ರಾವಿಡ್

ಜುಲೈ 30 ಮಧ್ಯಾಹ್ನ 3 PM ವೇಳೆಯವರೆಗೆ ಭಾರತದ ಪದಕದ ಖಾತೆಯಲ್ಲಿ ಕೇವಲ ಒಂದೇ ಒಂದು ಪದಕವಿತ್ತು. ಅದು ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯ್ ಚಾನು ಗೆದ್ದಿರುವ ಏಕಮಾತ್ರ ಬೆಳ್ಳಿ ಪದಕ. ಇನ್ನು ಭಾರತದ ಶೆಟ್ಲರ್ ಪಿವಿ ಸಿಂಧು ಮತ್ತು ಮಹಿಳಾ ಬಾಕ್ಸರ್ ಲವ್ಲಿನಾ ಬರ್ಗಹೈನ್ ಅವರು ಪದಕ ಖಾತರಿಪಡಿಸಿದ್ದಾರೆ. ಇಬ್ಬರೂ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬರ್ಗಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ.

ಭಾರತದ ಪಿವಿ ಸಿಂಧು ಅವರು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್‌ ಬಲಿಷ್ಠೆ ಅಕೇನೆ ಯಮಗುಚಿ ವಿರುದ್ಧ 21-13, 22-20ರ ಗೆಲುವು ದಾಖಲಿಸಿ ಮುನ್ನಡೆ ಪಡೆದುಕೊಂಡಿದ್ದಾರೆ.

Story first published: Friday, July 30, 2021, 21:17 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X