ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವದಾಖಲೆಯೊಂದಿಗೆ ಮಹಿಳಾ 4x200 ಮೀ. ಫ್ರೀಸ್ಟೈಲ್ ರಿಲೇ ಚಿನ್ನ ಗೆದ್ದ ಚೀನಾ

Tokyo Olympics: China win womens 4x200m freestyle relay with world record timing

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ 4x200 ಮೀಟರ್ ಫ್ರೀಸ್ಟೈಲ್ ರಿಲೇ ಈಜು ಸ್ಪರ್ಧೆಯಲ್ಲಿ ಚೀನಾ ಮಹಿಳಾ ತಂಡ ವಿಶ್ವದಾಖಲೆಯೊಂದಿಗೆ ಚಿನ್ನ ಚಾಚಿಕೊಂಡಿದೆ. ಗುರುವಾರ (ಜುಲೈ 29) ನಡೆದ ಸ್ಪರ್ಧೆಯಲ್ಲಿ ಚೀನಾ ಪಾರಮ್ಯ ಮೆರೆದಿರುವುದಲ್ಲದೆ ಚಿನ್ನದ ಪದಕಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ.

ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!

ಯಾಂಗ್ ಜುಂಕ್ಸುವಾನ್, ಜಾಂಗ್ ಯುಫೀ, ಲಿ ಬಿಂಗ್ಜಿ ಮತ್ತು ಟ್ಯಾಂಗ್ ಮುಹಾನ್ ಅವರಿದ್ದ ತಂಡ 7 ನಿಮಿಷ 40.33 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಜಯಿಸಿದೆ. ಇದೇ ವಿಭಾಗದಲ್ಲಿ ಯುನೈಟೆಡ್ ಸ್ಟೇಟ್ಸ್ ತಂಡ 7:40.73 ಸೆ. ಕಾಲಾವಧಿಯೊಂದಿಗೆ ಬೆಳ್ಳಿ ಪದಕ ಗೆದ್ದಿದೆ.

ಮಹಿಳಾ 4x200 ರಿಲೇ ಕಂಚಿನ ಪದಕ ಆಸ್ಟ್ರೇಲಿಯಾ ತಂಡದ ಪಾಲಾಗಿದೆ. ಆಸೀಸ್ ತಂಡ 7:41.29 ಸೆ. ಅಂತರದಲ್ಲಿ ದೂರ ಕ್ರಮಿಸಿದೆ. 1996ರಲ್ಲಿ ಈ ಸ್ಪರ್ಧೆ ಪರಿಚಯಿಸಿದಾಗಿನಿಂದ ಒಂದೋ ಯುಎಸ್‌ಎ ಅಥವಾ ಆಸ್ಟ್ರೇಲಿಯಾ ಚಿನ್ನ ಗೆಲ್ಲದಿರುವುದು ಇದು ಮೊದಲನೇ ಬಾರಿ.

ಧೋನಿಗೂ ನಡುಕ ಹುಟ್ಟಿಸಿದ್ದ ಈ ಸ್ಪಿನ್ನರ್‌ನ ಅಗತ್ಯತೆ ಟಿಟ್ವೆಂಟಿ ವಿಶ್ವಕಪ್‌ನಲ್ಲಿ ಭಾರತಕ್ಕಿದೆ ಎಂದ ಹರ್ಭಜನ್ ಸಿಂಗ್ಧೋನಿಗೂ ನಡುಕ ಹುಟ್ಟಿಸಿದ್ದ ಈ ಸ್ಪಿನ್ನರ್‌ನ ಅಗತ್ಯತೆ ಟಿಟ್ವೆಂಟಿ ವಿಶ್ವಕಪ್‌ನಲ್ಲಿ ಭಾರತಕ್ಕಿದೆ ಎಂದ ಹರ್ಭಜನ್ ಸಿಂಗ್

ಈ ಸ್ಪರ್ಧೆಯ ಫಲಿತಾಂಶದೊಂದಿಗೆ ಜಪಾನ್‌ ತಂಡ 15 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೀನಾ ತಂಡ 14 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಭಾರತ 46ನೇ ಸ್ಥಾನದಲ್ಲಿದೆ.

Story first published: Thursday, July 29, 2021, 16:33 [IST]
Other articles published on Jul 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X