ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಆರ್ಚರ್‌ಗಳಾದ ಅತನು ದಾಸ್, ಪ್ರವೀಣ್ ಜಾಧವ್, ತರುಣ್‌ದೀಪ್ ನೀರಸ ಪ್ರದರ್ಶನ

Tokyo olympics: disappointed performence by Archers Atanu Das, Pravin Jadhav, Tarundeep

ಟೋಕಿಯೋ ಒಲಿಂಪಿಕ್ಸ್, ಜುಲೈ 23: ಪುರುಷರ ರ‍್ಯಾಂಕಿಂಗ್‌ ಸುತ್ತಿನಲ್ಲಿ ಭಾರತದ ಆರ್ಚರ್‌ಗಳು ನೀರಸ ಪ್ರದರ್ಶನ ನೀಡಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ಮೂವರು ಆರ್ಚರ್‌ಗಳು ಕೂಡ 30ನೇ ಶ್ರೇಯಾಂಕಕ್ಕಿಂತಲೂ ಕೆಳಕ್ಕೆ ಕುಸಿದಿದ್ದಾರೆ. ಅನುಭವಿ ಪ್ರವೀಣ್ ಜಾಧವ್ 31ನೇ ಸ್ಥಾನ ಪಡೆದುಕೊಂಡಿದ್ದಾರೆ. ಅತನು ದಾಸ್ 35 ಹಾಗೂ ತರುಣ್‌ದೀಪ್ ರಾಯ್ 37ನೇ ಸ್ಥಾನ ಸಂಪಾದಿಸಿದ್ದಾರೆ.

720 ಅಂಕಗಳಲ್ಲಿ ಪ್ರವೀಣ್ ಜಾಧವ್ 656 ಅಂಕಗಳನ್ನು ಗಳಿಸಲು ಶಕ್ತರಾದರು. ತಮ್ಮ 72 ಆ್ಯರೋಗಳಲ್ಲಿ ಪ್ರವೀಣ್ 22 ಬಾರಿ 10 ಅಂಕಕ್ಕೆ ಗುರಿಯಿಟ್ಟರು. ಅತನು ದಾಸ್ ಹಾಗೂ ತರುಣ್ ದೀಪ್ ರಾಯ್ 653 ಹಾಗೂ 652 ಅಂಕಗಳನ್ನು ಸಂಪಾದಿಸಿದರು.

ಟೋಕಿಯೋ 2020 ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅತ್ಯಂತ ಕಿರಿಯ ಸ್ಪರ್ಧಿಯಾಗಿರುವ 17 ವರ್ಷದ ಕಿಮ್ ಜೆ ಡಿಯೋಕ್ ಅರ್ಹತಾ ಸುತ್ತಿನ ಅಗ್ರಸ್ಥಾನ ಸಂಪಾದಿಸಿದ್ದಾರೆ. ದಕ್ಷಿಣ ಕೊರಿಯ ಮೂಲದ ಈ ಆರ್ಚರ್ 688 ಅಂಕಗಳನ್ನು ಪಡೆದಿದ್ದಾರೆ. ಪ್ರಸಕ್ತ ಆರ್ಚರಿಯಲ್ಲಿ ವಿಶ್ವದಾಖಲೆಯನ್ನು ಹೊಂದಿರುವ ಯುಎಸ್‌ಎಯ ಬ್ರ್ಯಾಡಿ ಎಲಿಸನ್ 682 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಮೂಲಕ ಅಭಿಯಾನ ಆರಂಭಿಸಿದ ಭಾರತಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಮೂಲಕ ಅಭಿಯಾನ ಆರಂಭಿಸಿದ ಭಾರತ

ಭಾರತದ ಆರ್ಚರ್‌ಗಳಾದ ಪ್ರವೀಣ್ ಜಾಧವ್ ಅತನು ದಾಸ್ ಹಾಗೂ ತರುಣ್‌ದೀಪ್ ರಾಯ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಮಾತ್ರವೇ ಸ್ಪರ್ಧಿಸಿಲ್ಲ. ಪುರುಷರ ತಂಡ ಹಾಗೂ ಮಿಕ್ಸ್‌ಡ್ ಇವೆಂಟ್ ಅವಕಾಶಕ್ಕೂ ಕೂಡ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದಾರೆ.

ಭರವಸೆ ಮೂಡಿಸಿದ್ದ ಅತನು ದಾಸ್ ಅತ್ಯುತ್ತಮ ಆರಂಭವನ್ನು ಪಡೆದುಕೊಂಡರಾದರೂ ಈ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಲು ಅವರಿಂದ ಸಾಧ್ಯವಾಗಲಿಲ್ಲ.ಅಂತಿಮವಾಗಿ ಅತನು ದಾಸ್ 35ನೇ ಸ್ಥಾನಕ್ಕೆ ತೃಪ್ತರಾದರು.

Story first published: Friday, July 23, 2021, 14:27 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X