ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಪದಕ ವಿಜೇತರಿಗೆ ಮಾಸ್ ಕಡ್ಡಾಯ ನಿಯಮದಲ್ಲಿ ಬದಲಾವಣೆ

Tokyo olympics: For medalists IOC grants 30 seconds of mask-free time on the podium

ಟೋಕಿಯೋ, ಜುಲೈ 25: ಕೊರೊನಾವೈರಸ್‌ನ ಕಾರಣದಿಮದಾಗಿ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಕ್ರೀಡಾ ಗ್ರಾಮದಲ್ಲಿರುವ ಪ್ರತಿಯೊಬ್ಬರಿಗೂ ಸಾಕಷ್ಟು ನಿರ್ಬಂಧವನ್ನು ವಿಧಿಸಿದ್ದಾರೆ. ಇದರಲ್ಲಿ ಮಾಸ್ಕ್ ಕಡ್ಡಾಯ ಕೂಡ ಒಂದು. ಆದರೆ ಭಾನುವಾರ ಇದರಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿದೆ.

ಕೊರೊನಾವೈರಸ್ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಆಟಗಾರರು ಕಡ್ಡಾಯವಾಗಿ ಮಾಸ್ ಧರಿಸಲೇಬೇಕಿದೆ. ಇದು ಪದಕವನ್ನು ಧರಿಸುವ ಸಂದರ್ಭದಲ್ಲಿ ಪೋಡಿಯಂ ಏರುವ ಸಂದರ್ಭದಲ್ಲಿಯೂ ಇತ್ತು. ಮಾಸ್ಕ್ ಧರಿಸಿಕೊಂಡೇ ಆಟಗಾರರು ಪದಕವನ್ನು ಸ್ವೀಕರಿಸಬೇಕಿತ್ತು. ಆದರೆ ಈಗ ಪದಕ ವಿಜೇತರಿಗಾಗಿ ಈ ನಿಯಮದಲ್ಲಿ ಬದಲಾವಣೆಯನ್ನು ಮಾಡಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್

ಕ್ರೀಡಾಪಟುಗಳು ಪದಕವನ್ನು ಸ್ವೀಕರಿಸುವ ಸಂದರ್ಭದಲ್ಲಿ 30 ಸೆಕೆಂಡ್‌ಗಳ ಕಾಲ ಮಾಸ್ ಇಲ್ಲದೆ ಪದಕದೊಂದಿಗೆ ಪೋಸ್ ನೀಡಲು ಅವಕಾಶವನ್ನು ನೀಡಲಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಭಾನುವಾರ ಈ ನಿರ್ಬಂಧದಲ್ಲಿ ಸಣ್ಣ ಸಡಿಲಿಕೆಯನ್ನು ಮಾಡಿದೆ.

ಈ ಮಾಸ್ಕ್ ಇಲ್ಲದ ಅವಧಿಯಲ್ಲಿ ಕ್ರೀಡಾಪಟುಗಳು ತಮಗೆ ನಿಗದಿಪಡಿಸಿದ ಪೋಡಿಯಂನ ಮೆಟ್ಟಿಲಿನಲ್ಲಿಯೇ ಇರಬೇಕಾಗಿದೆ. ಈ ಅವಧಿಯಲ್ಲಿ ಪದಕದ ಸಂಭ್ರಮವನ್ನು ವ್ಯಕ್ತಪಡಿಸಲು ಹಾಗೂ ಪದಕದ ಜೊತೆಗೆ ಫೋಟೋ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆದರೆ ಗ್ರೂಫ್ ಫೋಟೋ ಸಂದರ್ಭದಲ್ಲಿ ಆಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.

ಕೊರೊನಾವೈರಸ್ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸಾಕಷ್ಟು ಬದಲಾವಣೆಯನ್ನು ಅನಿವಾರ್ಯವಾಗಿ ತರುವಂತೆ ಮಾಡಿದೆ. ಪ್ರೇಕ್ಷಕರಿಲ್ಲದೆ ಈ ಬಾರಿಯ ಎಲ್ಲಾ ಕ್ರೀಡೆಗಳು ಕೂಡ ಒಲಿಂಪಿಕ್ಸ್‌ನಲ್ಲಿ ನಡೆಯುತ್ತಿದೆ. ಪದಕ ಪ್ರಧಾನ ಕಾರ್ಯಕ್ರಮದಲ್ಲು ಕೂಡ ಪ್ರೇಕ್ಷಕರಿಗೆ ಅವಕಾಶಗಳು ಇರುವುದಿಲ್ಲ.

Story first published: Sunday, July 25, 2021, 18:39 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X