ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!

Tokyo Olympics: From Neeraj Chopra’s athletics gold to fencing debut, India’s firsts at the Tokyo Olympics

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 7 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಟೀಮ್ ಇಂಡಿಯಾ ಒಲಿಂಪಿಕ್ಸ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಅತೀ ಹೆಚ್ಚಿನ ಪದಕಗಳಾಗಿ ಟೋಕಿಯೋದ ಸಾಧನೆ ಗುರುತಿಸಿಕೊಂಡಿದೆ. ಅದರಲ್ಲೂ ಹಲವಾರು ವರ್ಷಗಳ ಬಳಿಕ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಸಿಕ್ಕಿದೆ. ಅಥ್ಲೀಟ್ ನೀರಜ್ ಚೋಪ್ರಾ ಅವರು ಜಾವೆಲಿನ್‌ ಎಸೆತದಲ್ಲಿ ದೇಶಕ್ಕೆ ಚಿನ್ನದ ಸಂಭ್ರಮ ತಂದಿದ್ದಾರೆ.

ಜಾತಿ ನಿಂದನೆಗೆ ಒಳಗಾದ ಹಾಕಿ ಆಟಗಾರ್ತಿ ವಂದನಾಗೆ 25 ಲಕ್ಷ ರೂ. ಘೋಷಣೆ!ಜಾತಿ ನಿಂದನೆಗೆ ಒಳಗಾದ ಹಾಕಿ ಆಟಗಾರ್ತಿ ವಂದನಾಗೆ 25 ಲಕ್ಷ ರೂ. ಘೋಷಣೆ!

ಶನಿವಾರ ಜಾವೆಲಿನ್ ಎಸೆತದಲ್ಲಿ ಬಂಗಾರ ಗೆದ್ದಿದ್ದ ನೀರಜ್ ಚೋಪ್ರಾ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಬಂಗಾರ ಗೆದ್ದ ದಾಖಲೆಗೂ ಕಾರಣರಾಗಿದ್ದರು. ಒಲಿಂಪಿಕ್ಸ್ ಮುಕ್ತಾಯ ಹಂತದ ದಿನವಾದ ಆಗಸ್ಟ್ 7ರಂದು ಚೋಪ್ರಾರಿಂದ ಈ ಸಾಧನೆ ಆಗಿತ್ತು. ಇದದಲ್ಲದೆ ಟೋಕಿಯೋದಲ್ಲಿ ಭಾರತ ಹಲವಾರು ವಿಶೇಷ ದಾಖಲೆಗಳಿಗೆ ಕಾರಣವಾಗಿದೆ. ಅವುಗಳ ಮಾಹಿತಿ ಕೆಳಗಿವೆ.

ನೀರಜ್ ಚೋಪ್ರಾರ ಅಥ್ಲೆಟಿಕ್ಸ್ ಚಿನ್ನದ ಪದಕ

ನೀರಜ್ ಚೋಪ್ರಾರ ಅಥ್ಲೆಟಿಕ್ಸ್ ಚಿನ್ನದ ಪದಕ

ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ (ಈಟಿ) ಎಸೆತದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 23ರ ಹರೆಯ ನೀರಜ್ ಚೋಪ್ರಾ, 87.58 ಮೀಟರ್ ಸಾಧನೆಯೊಂದಿಗೆ ಬಂಗಾರ ಗೆದ್ದಿದ್ದರು. ಈ ಬಂಗಾರದ ಪದಕ ಹಲವಾರು ದಾಖಲೆಗಳಿಗೆ ಕಾರಣವಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲನೇ ಚಿನ್ನವಾಗಿ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕಮೊದಲನೇ ಬಂಗಾರದ ಪದಕವಾಗಿ, ಒಲಿಂಪಿಕ್ಸ್‌ನಲ್ಲಿ ಭಾರತದ ಪರ ವೈಯಕ್ತಿಕ ವಿಭಾಗದಲ್ಲಿ ಗೆದ್ದ ಎರಡನೇ ಪದಕವಾಗಿ, ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಬಂದ ಎರಡನೇ ಪದಕವಾಗಿ ಈ ಸಾಧನೆ ಗುರುತಿಸಿಕೊಂಡಿದೆ. ಭಾರತಕ್ಕೆ ಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಪದಕ ಬಂದಿದ್ದು ಬ್ರಿಟಿಷ್-ಇಂಡಿಯನ್ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ ಅವರಿಗೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಿಚರ್ಡ್ 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಮೊದಲ ವೈಯಕ್ತಿಕ ಬಂಗಾರ ಗೆದ್ದ ಹಿರಿಮೆ ಶೂಟರ್ ಅಭಿನವ್ ಬಿಂದ್ರಾಗೆ ಸಲ್ಲುತ್ತದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ 10 ಮೀಟರ್ ಏರ್ ರೈಫಲ್‌ನಲ್ಲಿ ಬಂಗಾರ ಗೆದ್ದಿದ್ದರು.

ಪಿವಿ ಸಿಂಧುಗೆ ಬ್ಯಾಡ್ಮಿಂಟನ್‌ನಲ್ಲಿ ಕಂಚು

ಪಿವಿ ಸಿಂಧುಗೆ ಬ್ಯಾಡ್ಮಿಂಟನ್‌ನಲ್ಲಿ ಕಂಚು

ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪಿವಿ ಸಿಂಧು ಕಂಚಿನ ಪದಕ ಜಯಿಸಿದ್ದರು. ಇದು ಒಲಿಂಪಿಕ್ಸ್‌ನಲ್ಲಿ ಸಿಂಧುಗೆ ಸಿಗುತ್ತಿರುವ ಸತತ ಎರಡನೇ ಪದಕ. 2016ರ ರಿಯೋ ಒಲಿಂಪಿಕ್ಸ್‌ನಲ್ಲೂ ಸಿಂಧು ಬೆಳ್ಳಿ ಗೆದ್ದಿದ್ದರು. ಇದರೊಂದಿಗೆ ಸಿಂಧು ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದ ಮೊದಲ ಮಹಿಳಾ ಭಾರತೀಯೆಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಸಿಂಧು 2019ರಲ್ಲಿ ವಿಶ್ವ ಚಾಂಪಿಯನ್‌ ಆಗಿ ಗುರುತಿಸಿಕೊಂಡಿದ್ದರು. ಈ ದಾಖಲೆ ಕೂಡ ಸಿಂಧು ಮೊದಲು ನಿರ್ಮಿಸಿದ್ದು.ಈ ದಾಖಲೆ ಕೂಡ ಸಿಂಧು ಮೊದಲು ನಿರ್ಮಿಸಿದ್ದು. ಸಿಂಧು ಸೆಮಿಫೈನಲ್‌ನಲ್ಲಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಎದುರು ಸೋತು ನಿರಾಸೆ ಅನುಭವಿಸಿದ್ದರು. ಹೀಗಾಗಿ ಸಿಂಧು ಕಂಚಿಗೆ ತೃಪ್ತಿಪಡಬೇಕಾಗಿ ಬಂದಿತ್ತು.

ಮೀರಾಬಾಯಿ ಚಾನುಗೆ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ

ಮೀರಾಬಾಯಿ ಚಾನುಗೆ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ

ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮಹಿಳಾ 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಜಯಿಸಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲನೇ ಪದಕವಿದು. ಅಲ್ಲದೆ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಬಂದ ಎರಡನೇ ಪದಕವಾಗಿ ಇದು ಗುರುತಿಸಿಕೊಂಡಿತ್ತು. ಇದಕ್ಕೂ ಮುನ್ನ ವೇಟ್ ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತಕ್ಕೆ ಕಂಚಿನ ಪದಕ ಜಯಿಸಿದ್ದರು. 2000ರ ಸಿಡ್ನಿ ಗೇಮ್ಸ್‌ನಲ್ಲಿ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಲ್ಲೇಶ್ವರಿ ಅಂದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು. ಚಾನು ಗೆದ್ದ ಈ ಪದಕ ವೇಟ್ ಲಿಫ್ಟಿಂಗ್‌ನಲ್ಲಿ ಭಾರತ ಗೆದ್ದ ಮೊದಲ ಬೆಳ್ಳಿಯಾಗಿ ಗುರುತಿಸಿಕೊಂಡಿದೆ.

ಮಹಿಳಾ ಹಾಕಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ

ಮಹಿಳಾ ಹಾಕಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತೀಯ ಮಹಿಳಾ ತಂಡದಿಂದಾದ ಅದ್ಭುತ ಸಾಧನೆ. ಇದಕ್ಕೂ ಮುನ್ನ ಭಾರತ ಈ ಸಾಧನೆ ಮಾಡಿರಲಿಲ್ಲ. ಅಸಲಿಗೆ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತೀಯ ವನಿತಾ ತಂಡ ಪದಕ ಗೆಲ್ಲಲು ಅವಕಾಶವಿತ್ತು. ಆದರೆ ತೀವ್ರ ಪೈಪೋಟಿ ನೀಡಿದ್ದ ಭಾರತ ಆ ಪಂದ್ಯದಲ್ಲಿ 4-3ರಿಂದ ಗ್ರೇಟ್ ಬ್ರಿಟನ್ ಎದುರು ಶರಾಗಿತ್ತು.

ಗಾಲ್ಫ್‌ನಲ್ಲಿ ಚತುರ್ಥ ಸ್ಥಾನ ಪಡೆದ ಅದಿತಿ ಅಶೋಕ್‌

ಗಾಲ್ಫ್‌ನಲ್ಲಿ ಚತುರ್ಥ ಸ್ಥಾನ ಪಡೆದ ಅದಿತಿ ಅಶೋಕ್‌

ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಗಾಲ್ಫ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಅದಲ್ಲೂ ಕರ್ನಾಟಕ ಬೆಂಗಳೂರಿನವರಾದ ಅದಿತಿ ಅಶೋಕ್ ಉತ್ತಮ ಪ್ರದರ್ಶನ ನೀಡಿದ್ದರು. ಗಾಲ್ಫ್ ಫೈನಲ್ ಹಂತದಲ್ಲಿ ಅದಿತಿಗೆ ಪದಕ ಸಿಗುವ ನಿರೀಕ್ಷೆ ತುಂಬಾ ಇತ್ತಾದರೂ ಕೊನೇ ಘಳಿಗೆಯಲ್ಲಿ ಅದಿತಿ ನಾಲ್ಕನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದ್ದರು. ಆದರೆ ಗಾಲ್ಫ್‌ನಲ್ಲಿ ಭಾರತದಿಂದ ನಾಲ್ಕನೇ ಸ್ಥಾನದ ಸಾಧನೆ ಆಗಿದ್ದು ಇದೇ ಮೊದಲು. ರಿಯೋ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದ ಅದಿತಿ 41ನೇಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದರು.

ಲೈಟ್‌ವೇಟ್ ಡಬಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ

ಲೈಟ್‌ವೇಟ್ ಡಬಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ

ಜುಲೈ 25 ರಂದು, ಭಾರತದ ರೋವರ್‌ಗಳಾದ ಅರ್ಜುನ್ ಲಾಲ್ ಜತ್ ಮತ್ತು ಅರವಿಂದ್ ಸಿಂಗ್ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಡಬಲ್ ಸ್ಕಲ್ಸ್ ಜೋಡಿಯಾಗಿ ದಾಖಲೆ ನಿರ್ಮಿಸಿದರು. ಈ ಜೋಡಿ ಈವೆಂಟ್‌ನಲ್ಲಿ 11ನೇ ಸ್ಥಾನ ಪಡೆದುಕೊಂಡಿತು. ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ದೇಶಕ್ಕೆ ಬಂದ ಅತ್ಯುತ್ತಮ ಫಲಿತಾಂಶವಾಗಿದೆ. 2012ರಲ್ಲಿ ನಡೆದ ಲಂಡನ್ ಕ್ರೀಡಾಕೂಟದಲ್ಲಿ ಭಾರತದ 18ನೇ ಸ್ಥಾನ ಪಡೆದುಕೊಂಡಿತ್ತು. ಇದೇ ಈ ವಿಭಾಗದಲ್ಲಿ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.

ಫೆನ್ಸಿಂಗ್‌ನಲ್ಲಿ ಭಾರತ ಒಲಿಂಪಿಕ್ಸ್‌ಗೆ ಲಗ್ಗೆ

ಫೆನ್ಸಿಂಗ್‌ನಲ್ಲಿ ಭಾರತ ಒಲಿಂಪಿಕ್ಸ್‌ಗೆ ಲಗ್ಗೆ

ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್‌ ವಿಭಾಗದಲ್ಲಿ ಭಾರತ ಇದುವರೆಗೂ ಸ್ಪರ್ಧಿಸಿರಲಿಲ್ಲ. ಆದರೆ ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಫೆನ್ಸರ್ ಭವಾನಿ ದೇವಿ ಪಾದಾರ್ಪಣೆ ಮಾಡಿದ್ದರು. ಮಹಿಳಾ ಸೆಬರ್‌ ವೈಯಕ್ತಿಕ ವಿಭಾಗದಲ್ಲಿ ಭವಾನಿ ಸ್ಪರ್ಧಿಸಿದ್ದರು. ಚೆನ್ನೈ ಮೂಲದ ಫೆನ್ಸರ್ ಆಗಿರುವ ಭವಾನಿ, 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭವಾನಿ ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್‌ನ ನಾಲ್ಕನೇ ಶ್ರೇಯಾಂಕಿತೆ ಮನೋನ್ ಬ್ರೂನೆಟ್ ಎದುರು ಸೋತಿದ್ದರು.

Story first published: Sunday, August 8, 2021, 14:59 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X