ಕನ್ನಡಿಗ ಕಾಶೀನಾಥ್ ನಾಯ್ಕ್ ಮನೆಗೆ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್ ಚೋಪ್ರಾ ಭೇಟಿ

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಖ್ಯಾತ ಅಥ್ಲೀಟ್ ನೀರಜ್ ಚೋಪ್ರಾ ಆಗಸ್ಟ್ 24ರ ಮಂಗಳವಾರ ಕನ್ನಡಿಗ ಕೋಚ್ ಕಾಶೀನಾಥ್ ನಾಯ್ಕ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಮಹಾರಾಷ್ಟ್ರದ ಪುಣೆಯ ಕೋರೇಗಾಂವ್‌ನಲ್ಲಿರುವ ಕಾಶೀನಾಥ್ ಮನೆಗೆ ಭೇಟಿ ನೀಡಿರುವ ಚೋಪ್ರಾ ಗುರುವಿಗೆ ನಮನ ಸಲ್ಲಿಸಿದ್ದಾರೆ. ಕಾಶೀನಾಥ್ ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಇವರೂ ಕೂಡ ಅಂತಾರಾಷ್ಟ್ರೀಯ ಮಟ್ಟದ ಜಾವೆಲಿನ್ ಥ್ರೋವರ್.

ಇಂಗ್ಲೆಂಡ್‌ನಲ್ಲಿ 1971ರ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ 50 ವರ್ಷ!ಇಂಗ್ಲೆಂಡ್‌ನಲ್ಲಿ 1971ರ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ 50 ವರ್ಷ!

ಕಾಶೀನಾಥ್ ನಾಯ್ಕ್ ಮನೆಗೆ ಭೇಟಿ ನೀಡಿದ ಟೋಕಿಯೋ ಒಲಿಂಪಿಕ್ಸ್ ಬಂಗಾರದ ಹುಡುಗ ನೀರಜ್ ಚೋಪ್ರಾಗೆ ನಾಯ್ಕ್ ಪತ್ನಿ ಚೈತ್ರಾ ಆರತಿ ಬೆಳಗಿ ಮನೆಗೆ ಬರಮಾಡಿಕೊಂಡರು. ಆ ಬಳಿಕ ಸುಮಾರು ಒಂದು ಗಂಟೆಯ ಕಾಲ ಗುರು-ಶಿಷ್ಯರು ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದರು.

ಟೋಕಿಯೋದಲ್ಲಿ ಬಂಗಾರ ಗೆದ್ದಿದ್ದ ನೀರಜ್

ಟೋಕಿಯೋದಲ್ಲಿ ಬಂಗಾರ ಗೆದ್ದಿದ್ದ ನೀರಜ್

ಜಪಾನ್‌ನ ಟೋಕಿಯೋಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ 23ರ ಹರೆಯದ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 87.58 ಮೀಟರ್ ಸಾಧನೆಯೊಂದಿಗೆ ಭಾರತಕ್ಕೆ ಬಂಗಾರದ ಮೆರಗು ತಂದಿದ್ದರು. ಈ ಬಂಗಾರದ ಪದಕ ಹಲವಾರು ದಾಖಲೆಗಳಿಗೆ ಕಾರಣವಾಗಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲನೇ ಚಿನ್ನವಾಗಿ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲನೇ ಬಂಗಾರದ ಪದಕವಾಗಿ, ಒಲಿಂಪಿಕ್ಸ್‌ನಲ್ಲಿ ಭಾರತದ ಪರ ವೈಯಕ್ತಿಕ ವಿಭಾಗದಲ್ಲಿ ಗೆದ್ದ ಎರಡನೇ ಬಂಗಾರದ ಪದಕವಾಗಿ, ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಬಂದ ಎರಡನೇ ಪದಕವಾಗಿ ಈ ಸಾಧನೆ ಗುರುತಿಸಿಕೊಂಡಿತ್ತು. ಭಾರತಕ್ಕೆ ಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಪದಕ ಬಂದಿದ್ದು ಬ್ರಿಟಿಷ್-ಇಂಡಿಯನ್ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ ಅವರಿಗೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಿಚರ್ಡ್ 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಮೊದಲ ವೈಯಕ್ತಿಕ ಬಂಗಾರ ಗೆದ್ದ ಹಿರಿಮೆ ಶೂಟರ್ ಅಭಿನವ್ ಬಿಂದ್ರಾಗೆ ಸಲ್ಲುತ್ತದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ 10 ಮೀಟರ್ ಏರ್ ರೈಫಲ್‌ನಲ್ಲಿ ಬಂಗಾರ ಗೆದ್ದಿದ್ದರು.

ಯಾರೀ ಕಾಶೀನಾಥ್ ನಾಯ್ಕ್?

ಯಾರೀ ಕಾಶೀನಾಥ್ ನಾಯ್ಕ್?

ಕಾಶೀನಾಥ್ ನಾಯ್ಕ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಜಾವೆಲಿನ್ ಥ್ರೋವರ್. ನವದೆಹಲಿಯಲ್ಲಿ 2010ರಂದು ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ವೇಳೆ ಕಾಶೀನಾಥ್ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದಾಗಿ ಒಂದು ವರ್ಷದ ಬಳಿಕ 14 ವರ್ಷ ಪ್ರಾಯದವರಾಗಿದ್ದ ನೀರಜ್ ಚೋಪ್ರಾ ಜೈವೀರ್ ಚೌಧರಿ ಜೊತೆಗೆ ಜಾವೆಲಿನ್ ಎಸೆತದ ಅಭ್ಯಾಸ ಆರಂಭಿಸಿದ್ದರು. ಅಂದ್ಹಾಗೆ ಆವತ್ತು ಕಾಶಿನಾಥ್‌ಗೆ ಸಿಕ್ಕ ಕಂಚಿನ ಪದಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಜಾವೆಲಿನ್‌ ಎಸೆತದಲ್ಲಿ ಸಿಕ್ಕ ಮೊದಲ ಪದಕ. ಅಲ್ಲದೆ, 1982ರ ಏಷ್ಯನ್ ಗೇಮ್ಸ್‌ ಪದಕದ ಬಳಿಕ ಭಾರತಕ್ಕೆ ಸಿಕ್ಕ ಚೊಚ್ಚಲ ಪದಕ. ಅಥ್ಲೀಟ್‌ ಆಗಿ ವೃತ್ತಿ ಬದುಕು ಮುಗಿಸಿದ ಬಳಿಕ ಕಾಶಿನಾಥ್ ಕೋಚಿಂಗ್‌ ವೃತ್ತಿಗೆ ಬಂದಿದ್ದರು. 2016ಲ್ಲಿ ಪೋಲ್ಯಾಂಡ್‌ನಲ್ಲಿ ನಡೆದಿದ್ದ ಅಂಡರ್-20 ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬಂಗಾರದ ಪದಕ ಗೆದ್ದಾಗ ಗ್ಯಾರಿ ಕ್ಯಾಲ್ವರ್ಟ್ ಜೊತೆಗೆ ಸಹ ಕೋಚ್ ಆಗಿ ಕಾಶಿನಾಥ್ ಅವರೂ ನೀರಜ್‌ಗೆ ಕೋಚಿಂಗ್ ನೀಡುತ್ತಿದ್ದರು. ಈಗ ಕಾಶಿನಾಥ್ ಅವರು ಮಹಾರಾಷ್ಟ್ರ ಪುಣೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕಾಶೀನಾಥ್ ಅವರ ವೈಯಕ್ತಿಕ ಸಾಧನೆಗಳು

ಕಾಶೀನಾಥ್ ಅವರ ವೈಯಕ್ತಿಕ ಸಾಧನೆಗಳು

* 2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ

* ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2010

* ಏಷ್ಯನ್ ಆಲ್ ಸ್ಟಾರ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ, 2020

* ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಟದ ಜಾವೆಲಿನ್‌ನಲ್ಲಿ ಬೆಳ್ಳಿ, 2008 * ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕಂಚಿನ ಪದಕ, 2008

* 14 ಬಾರಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ

* ರಾಷ್ಟ್ರೀಯ ಮಟ್ಟದಲ್ಲಿ 5 ಬಾರಿ ಬೆಳ್ಳಿ

* 2012ರಲ್ಲಿ ಏಕಲವ್ಯ ಪ್ರಶಸ್ತಿ

* 2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕ್ರಿಕೆಟ್ ದಿಗ್ಗಜ ನಿಂದ ಕಿಚ್ಚ ಸುದೀಪ್ ಗೆ ಬರ್ತಡೇ ಗೂ ಮುನ್ನ ಸಿಕ್ತು ವಿಶೇಷ ಗಿಫ್ಟ್ | Oneindia Kannada
ಕೋಚ್ ಆಗಿ ಕಾಶೀನಾಥ್ ಸಾಧನೆಗಳು

ಕೋಚ್ ಆಗಿ ಕಾಶೀನಾಥ್ ಸಾಧನೆಗಳು

1. ಸಮರ್ ಜೀತ್ ಸಿಂಗ್ 2013 ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ

2. ಮುಖೇಶ್ ಕುಮಾರಿ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕಂಚಿನ ಪದಕ 2013

3. ರಾಜೇಶ್ ಕುಮಾರ್ ಬಿಂಧ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಫೈನಲಿಸ್ಟ್

4. ಅಣ್ಣು ರಾಣಿ ಏಷ್ಯನ್ ಗೇಮ್ಸ್‌, ಏಷ್ಯನ್ ಚಾಂಪಿಯನ್‌ಶಿಪ್ ಪದಕ, ವಿಶ್ವ ಚಾಂಪಿಯನ್‌ಶಿಪ್ ನಲ್ಲಿ 2013 ರಿಂದ 2019 ಭಾಗವಹಿಸಿದ್ದರು.

5. ದೇವಿಂದರ್ ಸಿಂಗ್ ಏಷ್ಯನ್ ಚಾಂಪಿಯನ್‌ಶಿಪ್ ಕಂಚು, ವಿಶ್ವ ಚಾಂಪಿಯನ್‌ಶಿಪ್ ಫೈನಲಿಸ್ಟ್ 84.44 ಮೀ. ಸಾಧನೆ, 2013 ರಿಂದ 2018ರವರೆಗೆ

6. ನೀರಜ್ ಚೋಪ್ರಾ ದಕ್ಷಿಣ ಏಷ್ಯನ್ ಗೇಮ್ಸ್ ಚಿನ್ನ 2016, ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್ ಚಿನ್ನ 86.48 ಮಿ., ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನ 2017, 2015 ರಿಂದ 2017 ಕೋಚಿಂಗ್

7. ಶಿವಪಾಲ್ ಸಿಂಗ್ ಏಷ್ಯನ್ ಗೇಮ್ಸ್ 2018, ಏಷ್ಯನ್ ಚಾಂಪಿಯನ್ಶಿಪ್ ಪದಕ 2019, 2016 ರಿಂದ 2019 ಮತ್ತು 2021 ಒಲಿಂಪಿಕ್ಸ್ ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು

8. ರಶ್ಮಿ, ಕರಿಷ್ಮಾ, ಮನು, ಪ್ರತಾಪ್ - ಕರ್ನಾಟಕದ ಪ್ರತಿಭೆಗಳಿಗೆ ಕೋಚಿಂಗ್

9. ರಾಜೇಂದರ್, ಅನಿಲ್, ರೋಹಿತ್, ಸುದಾಮ ಇವರಿಗೆ ರಾಷ್ಟ್ರೀಯ ಮಟ್ಟದ ಪದಕ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 24, 2021, 17:30 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X