ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಿಗೆ ಭರ್ಜರಿ ಹಣ ಘೋಷಣೆ

Tokyo olympics gold winners to get Rs 75 lakh from IOA

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪಕದ ಗೆಲ್ಲುವ ಭಾರತೀಯರಿಗೆ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್ (ಐಒಎ) ಭರ್ಜರಿ ನಗದು ಪುರಸ್ಕಾರ ಘೋಷಿಸಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಬಂಗಾರದ ಮೆರಗು ತರುವವರಿಗೆ 75 ಲಕ್ಷ ರೂ. ಘೋಷಿಸಲಾಗಿದೆ.

ಇಂಗ್ಲೆಂಡ್ ಪರ ಆಡಿದ ವಾಷಿಂಗ್ಟನ್ ಸುಂದರ್ ವಿಕೆಟ್ ಮುರಿದ ಮೊಹಮ್ಮದ್ ಸಿರಾಜ್: ವೀಡಿಯೋಇಂಗ್ಲೆಂಡ್ ಪರ ಆಡಿದ ವಾಷಿಂಗ್ಟನ್ ಸುಂದರ್ ವಿಕೆಟ್ ಮುರಿದ ಮೊಹಮ್ಮದ್ ಸಿರಾಜ್: ವೀಡಿಯೋ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆಲ್ಲುವ ಅಥ್ಲೀಟ್‌ಗಳಿಗೆ 75 ಲಕ್ಷ ರೂ. ನೀಡುವುದಾಗಿ ಐಒಎ ಗುರುವಾರ (ಜುಲೈ 22) ಘೋಷಿಸಿದೆ. ಅಂದರೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳಿಗೆ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್‌ನಿಂದ ನೀಡಲಾಗುವ 25 ಲಕ್ಷ ರೂ. ಹಣವಲ್ಲದೆ ಚಿನ್ನ ಗೆದ್ದರೆ 75 ಲಕ್ಷ ರೂ. ನೀಡಲಾಗುತ್ತದೆ.

ಐಒಎ ಸಲಹಾ ಸಮಿತಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದವರಿಗೆ 40 ಲಕ್ಷ ರೂ., ಕಂಚು ವಿಜೇತರಿಗೆ 25 ಲಕ್ಷ ರೂ. ನೀಡಬೇಕೆಂದು ಸೂಚಿಸಿದೆ. "ದೇಶವನ್ನು ಪ್ರತಿನಿಧಿಸುವ ಅಥ್ಲೀಟ್‌ಗಳಿಗೆ 1 ಲಕ್ಷ ರೂ. ನೀಡುವಂತೆಯೂ ಐಒಎ ಸಲಹಾ ಸಮಿತಿ ಶಿಫಾರಸು ಮಾಡಿದೆ," ಎಂದು ಐಒಎ ಪ್ರಕಟಣೆ ತಿಳಿಸಿದೆ.

ಟೀಮ್ ಇಂಡಿಯಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆ!ಟೀಮ್ ಇಂಡಿಯಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆ!

ಇದಲ್ಲದೆ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್‌ನಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ 25 ಲಕ್ಷ ರೂ., ಪದಕ ಗೆದ್ದವರಿಗೆ 30 ಲಕ್ಷ ರೂ. ಹೆಚ್ಚುವರಿ ನಗದು ನೀಡಬೇಕೆಂದು ಐಒಎ ಶಿಫಾರಸು ಮಾಡಿದೆ. ಜುಲೈ 23ರಿಂದ ಆಗಸ್ಟ್ 8ರ ವರಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಹಬ್ಬ ನಡೆಯಲಿದೆ.

Story first published: Friday, July 23, 2021, 9:43 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X