ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: 2ನೇ ದಿನ ಭಾರತದ ಸ್ಪರ್ಧೆಗಳು: ಕಣಕ್ಕಿಳಿಯಲಿದೆ ಹಾಕಿ ತಂಡ, ಪದಕದ ಮೇಲೆ ಶೂಟರ್‌ಗಳ ಚಿತ್ತ

Tokyo Olympics: India Schedule Day 2: Shooters eye on gold, hockey teams take field

ಟೋಕಿಯೋ, ಜುಲೈ 23: ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನ ಭಾರತದ ಕ್ರೀಡಾಪಟುಗಳಿಗೆ ಸಾಕಷ್ಟು ಸವಾಲುಗಳು ಎದುರಾಗಲಿವೆ. ಸುಮಾರು 10 ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸ್ಪರ್ಧೆಗೆ ಇಳಿಯಲಿದ್ದಾರೆ. ಇವುಗಳಲ್ಲಿ ಶನಿವಾರ ಭಾರತದ ಪಾಲಿಗೆ ಶೂಟಿಂಗ್ ಪ್ರಮುಖ ಸ್ಪರ್ಧೆಯಾಗಿರಲಿದೆ. ಯಾಕೆಂದರೆ ಪುರುಷರ ಹಾಗೂ ಮಹಿಳೆಯರ 10ಮೀ ಏರ್‌ರೈಫಲ್‌ ಮೆಡಲ್ ಇಂಟೆಂಟ್ ನಡೆಯಲಿದೆ. ಇದರಲ್ಲಿ ಭಾರತ ಮೊದಲ ಪದಕವನ್ನು ಪಡೆಯುವತ್ತ ಗುರಿ ಹೊಂದಿದೆ.

ಭಾರತದ ಶೂಟರ್‌ಗಳ ಪೈಕಿ ದಿವ್ಯಾನ್ಶ್ ಸಿಂಗ್ ಪನ್ವಾರ್ ಹಾಗೂ ಯಶಸ್ವಿನಿ ದೇಸ್ವಾಲ್ ಈ ಇಬ್ಬರು ಪದಕದ ಮೇಲೆ ಗುರಿಯಿಡುವ ನಿರೀಕ್ಷೆಯನ್ನು ಮೂಡಿಸಿದ್ದಾರೆ. ಹೀಗಾಗಿ ಬೆಳಗ್ಗೆ 5 ಗಂಟೆಗೆ ಆರಂಣಭವಾಗುವ ಈ ಸ್ಪರ್ಧೆಯ ಮೇಲೆ ಭಾರತದ ಕ್ರೀಡಾಪ್ರೇಮಿಗಳು ಕಣ್ಣಿಟ್ಟಿದ್ದಾರೆ.

ಭಾರತೀಯ 10 ಎಂ ಏರ್ ರೈಫಲ್ ಶೂಟಿಂಗ್ ತಂಡ ಹೀಗಿದೆ: ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೆಲ್, ದಿವ್ಯಾನ್ಶ್ ಸಿಂಗ್ ಪನ್ವಾರ್, ದೀಪಕ್ ಕುಮಾರ್, ಮನು ಭಾಕರ್, ಯಶಸ್ವಿನಿ ದೇಸ್ವಾಲ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ.

ಇನ್ನು ಮತ್ತೊಂದೆಡೆ ಹಾಕಿ ತಂಡವು ಕೂಡ ಶನಿವಾರ ಮೊದಲ ಹೋರಾಟವನ್ನು ನಡೆಸಲಿದೆ. ನ್ಯೂಜಿಲೆಂಡ್ ತಂಡ ಭಾರತೀಯರಿಗೆ ಸವಾಲೊಡ್ಡಲಿದೆ.

ಶನಿವಾರ ನಡೆಯಲಿರುವ ಭಾರತದ ಕ್ರೀಡಾಪಟುಗಳ ವೇಳಾಪಟ್ಟಿ ಹೀಗಿದೆ:

1. ಈಕ್ವೆಸ್ಟ್ರಿಯನ್: ವೈಯಕ್ತಿಕ ಡ್ರೆಸ್ಸೇಜ್ ಗ್ರ್ಯಾಂಡ್ ಪ್ರಿಕ್ಸ್, ದಿನ 1

2. ಶೂಟಿಂಗ್ - ಮಹಿಳೆಯರ 10 ಮೀ ಏರ್ ರೈಫಲ್ ಅರ್ಹತಾ ಸುತ್ತು - ಬೆಳಿಗ್ಗೆ 5:00

3. ಟೇಬಲ್ ಟೆನಿಸ್ - ಪುರುಷರ ಸಿಂಗಲ್ಸ್ ಪ್ರಾಥಮಿಕ ಸುತ್ತು - ಬೆಳಿಗ್ಗೆ 5:30

4. ಟೇಬಲ್ ಟೆನಿಸ್ - ಮಹಿಳಾ ಸಿಂಗಲ್ಸ್ ಪ್ರಾಥಮಿಕ ಸುತ್ತು - ಬೆಳಿಗ್ಗೆ 5:30

5. ಬಿಲ್ಲುಗಾರಿಕೆ - ಮಿಕ್ಸ್‌ಡ್ ಟೀಮ್ - ಬೆಳಿಗ್ಗೆ 6:00

6. ಹಾಕಿ - ಪುರುಷರು vs ನ್ಯೂಜಿಲೆಂಡ್ - ಬೆಳಿಗ್ಗೆ 6.30

7. ಶೂಟಿಂಗ್ - ಮಹಿಳೆಯರ 10 ಮೀ ಏರ್ ರೈಫಲ್ ಫೈನಲ್ - ಬೆಳಿಗ್ಗೆ 7:15

8. ಜೂಡೋ - ಮಹಿಳೆಯರು 48 ಕೆಜಿ, ಎಲ್ಲಾ ಸುತ್ತುಗಳು - ಬೆಳಿಗ್ಗೆ 7:30

9. ಟೇಬಲ್ ಟೆನಿಸ್ - ಮಿಶ್ರ ಡಬಲ್ಸ್ 16 ನೇ ಸುತ್ತಿನ ಪಂದ್ಯ - ಬೆಳಿಗ್ಗೆ 7:45

10. ರೋಯಿಂಗ್ - ಪುರುಷರ ಲೈಟ್‌ವೈಟ್ ಡಬಲ್ ಸ್ಕಲ್ಸ್ - ಬೆಳಿಗ್ಗೆ 7:50

11. ಬಾಕ್ಸಿಂಗ್ - ಮಹಿಳಾ ವೆಲ್ಟರ್ವೈಟ್ - ಬೆಳಿಗ್ಗೆ 8:00

12. ಶೂಟಿಂಗ್ - ಪುರುಷರ 10ಮೀ ಏರ್ ಪಿಸ್ತೂಲ್ ಅರ್ಹತೆ - ಬೆಳಿಗ್ಗೆ 9:30

13. ವೇಟ್‌ಲಿಫ್ಟಿಂಗ್ - ಮಹಿಳೆಯರ 49 ಕೆಜಿ - ಬೆಳಿಗ್ಗೆ 10:20

14. ಬಿಲ್ಲುಗಾರಿಕೆ - ಮಿಶ್ರ ತಂಡದ ಪದಕ ಸುತ್ತುಗಳು - ಬೆಳಿಗ್ಗೆ 10:45

15. ಶೂಟಿಂಗ್ - ಪುರುಷರ 10 ಮೀ ಏರ್ ಪಿಸ್ತೂಲ್, ಫೈನಲ್ - 12:00 PM

16. ಬ್ಯಾಡ್ಮಿಂಟನ್ - ಪುರುಷರ ಡಬಲ್ಸ್ - ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ Vs ಲೀ ಯಾಂಗ್ ಮತ್ತು ಚಿ-ಲಿನ್ ವಾಂಗ್ (ತೈಪೆ) - 12:20 PM

17. ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ - ಬಿ ಸಾಯಿ ಪ್ರಣೀತ್ vs ಮಿಶಾ ಜಿಲ್ಬರ್ಮನ್ (ಇಸ್ರೇಲ್) - 13:00 PM

18. ಬಾಕ್ಸಿಂಗ್ - 32 ರ ಪುರುಷರ ವೆಲ್ಟರ್ವೈಟ್ ಸುತ್ತು - ವಿಕಾಸ್ ಕ್ರಿಶನ್ vs ಸೆವೊನ್ರೆಟ್ಸ್ ಕ್ವಿನ್ಸಿ ಮೆನ್ಸಾ ಒಕಾಜಾವಾ - 15:54 PM

19. ಹಾಕಿ - ಭಾರತ ವುಮೆನ್ vs ನೆದರ್ಲ್ಯಾಂಡ್ಸ್ ವುಮೆನ್ - 17.15 PM

Story first published: Friday, July 23, 2021, 13:43 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X