ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದ ಬಾಕ್ಸರ್ ಪೂಜಾ ರಾಣಿ

Tokyo olympics: Indian Boxer Pooja Rani qualified for quarterfinal
Photo Credit: ಸಾಂದರ್ಭಿಕ ಚಿತ್ರ

ಟೋಕಿಯೋ, ಜುಲೈ 28: ಪ್ರಥಮ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿರುವ ಭಾರತದ ಬಾಕ್ಸರ್ ಪೂಜಾ ರಾಣಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಎರಡು ಬಾರಿಯ ಏಷ್ಯನ್ ಚಾಂಪಿಯನ್ 75 ಕೆಜಿ ವಿಭಾಗದಲ್ಲಿ ಅಲ್ಜೋರಿಯಾದ ಸ್ಪರ್ಧಿ ಇಚ್ರಾಕ್ ಚೈಬ್ ವಿರುದ್ದ ಗೆದ್ದು ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

30ರ ಹರೆಯದ ಭಾರತೀಯ ಆಟಗಾರ್ತಿ ಪಂದ್ಯದ ಉದ್ದಕ್ಕೂ ಸಂಪೂರ್ಣವಾಗಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಎದುರಾಳಿಯ ವಿರುದ್ಧ 5-0 ಅಂತರದಿಂದ ಭಾರೀ ಗೆಲುವು ಸಾಧಿಸಿದ್ದಾರೆ. ಹರ್ಯಾಣ ಮೂಲದ ಪೂಜಾ ಸ್ಟ್ರೈಟ್ಸ್‌ಗಳ ಮೂಲಕ ಪ್ರಭುತ್ವ ಸಾಧಿಸುತ್ತಾ ಹೋದರು. ರಿಂಗ್‌ನಲ್ಲಿ ಎದುರಾಳಿಯ ಬ್ಯಾಲನ್ಸ್ ಕೊರತೆಯನ್ನು ಕೂಡ ಸಮರ್ಥವಾಗಿ ಬಳಸಿಕೊಂಡ ಪೂಜಾ ರಾಣಿ ಗೆಲುವು ಸಾಧಿಸಿದರು.

ಭಾರತ vs ಶ್ರೀಲಂಕಾ ಎರಡನೇ ಟಿ ಟ್ವೆಂಟಿ ನಡೆಯುತ್ತಾ? ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!ಭಾರತ vs ಶ್ರೀಲಂಕಾ ಎರಡನೇ ಟಿ ಟ್ವೆಂಟಿ ನಡೆಯುತ್ತಾ? ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!

ಎಲ್ಲಾ ಸುತ್ತುಗಳಲ್ಲಿ ಕೂಡ ಪೂಜಾ ರಾಣಿ ಸಂಪೂರ್ಣ ಮೇಲುಗೈ ಸಾಧಿಸುತ್ತಾ ಸಾಗಿದರು. ಅಲ್ಜೀರಿಯಾದ ಬಾಕ್ಸರ್‌ಗು ಕೂಡ ಇದು ಪ್ರಥಮ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ರಾಣಿ ಹೊಡೆತಗಳಿಗೆ ಪ್ರತಿದಾಳಿಯನ್ನು ಸಮರ್ಥವಾಗಿ ನೀಡಲು ಇಚ್ರಾಕ್ ಚೈಬ್ ವಿಫಲರಾದರು.

ಪೂಜಾ ರಾಣಿಯ ಮುಂದಿನ ಸುತ್ತು ಅತ್ಯಂತ ಕಠಿಣವಾಗಿರಲಿದೆ. ಮುಂದಿನ ಸುತ್ತಿನಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಎರಡು ಬಾರಿಯ ಏಷ್ಯನ್ ಚಾಂಪಿಯನ್ ಮತ್ತು ಮಾಜಿ ವಿಶ್ವ ಗೋಲ್ಡ್ ಮೆಡಲಿಸ್ಟ್ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಜುಲೈ 31ರಂದು ಈ ಇಬ್ಬರ ಪಂದ್ಯಗಳು ನಡೆಯಲಿದೆ.

ಪೂಜಾ ರಾಣಿ ಅವರ ಈ ಒಲಿಂಪಿಕ್ಸ್ ಹಾದಿ ಅತ್ಯಂತ ದುರ್ಗಮವಾಗಿತ್ತು. ಆರಂಭಿಕ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಪೂಜಾ ಬಳಲಿದ್ದರು. ಪೊಲೀಸ್ ಅಧಿಕಾರಿಯಾಗಿದ್ದ ಪೂಜಾ ಅವರ ತಂದೆ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪೂಜಾ ಭಾಗವಹಿಸುವುದನ್ನು ವಿರೋಧಿಸಿದ್ದರು. ಗಾಯಗಳಾಗುತ್ತವೆ, ಅವೆಲ್ಲಾ ಹುಡುಗರಿಗಾಗಿರುವ ಸ್ಪರ್ಧೆಗಳು ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಹಾಗಿದ್ದರೂ ತಾವು ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ದೃಢ ನಿಶ್ಚಯವನ್ನು ಹೊಂದಿದ್ದರು. ಬಳಿಕ ಗಾಯದ ಸಮಸ್ಯೆ ಪೂಜಾಗೆ ಕಾಡಲು ಆರಂಭಿಸಿತ್ತು. 2017ರಲ್ಲಿ ಭುಜದ ಗಾಯಕ್ಕೊಳಗಾಗಿದ್ದ ಪೂಜಾ ಅದಕ್ಕೂ ಮುನ್ನ 2016ರಲ್ಲಿ ದೀಪಾವಳಿ ಪಟಾಕಿ ಸುಡುವ ವೇಳೆ ಅಗ್ನಿ ಅವಘಡಕ್ಕೆ ತುತ್ತಾಗಿ ಕೈ ಸುಟ್ಟುಕೊಂಡಿದ್ದರು. ಈ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಒಲಿಂಪಿಕ್ಸ್ ವೇದಿಕೆಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

Story first published: Wednesday, July 28, 2021, 17:22 [IST]
Other articles published on Jul 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X