ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ 2021: ಸಮಯ, ನೇರಪ್ರಸಾರ, ಸಂಪೂರ್ಣ ಮಾಹಿತಿ

ಟೋಕಿಯೋ: 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೋವಿಡ್-19 ಕಾರಣದಿಂದಾಗಿ ಒಂದು ವರ್ಷ ತಡವಾಗಿ ಶುರುವಾಗುವುದರಲ್ಲಿದೆ. ಕ್ರೀಡಾಭಿಮಾನಿಗಳು ಜಾಗತಿಕ ಕ್ರೀಡಾಕೂಟಕ್ಕಾಗಿ ಒಂದು ವರ್ಷ ಕಾಯಬೇಕಾಗಿ ಬಂತು. ಈ ಬಾರಿ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಒಲಿಂಪಿಕ್ಸ್ ನಡೆಯಲಿದೆ. ಇಷ್ಟರವರೆಗೆ ನಡೆದ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಈ ಬಾರಿಯ ಒಲಿಂಪಿಕ್ಸ್ ಆರಂಭಿಕ ಸಮಾರಂಭ ಭಿನ್ನವಾಗಿರಲಿದೆ.

ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!

1896ರಲ್ಲಿ ಆಧುನಿಕ ಯುಗದ ಚೊಚ್ಚಲ ಒಲಿಂಪಿಕ್ಸ್ ಅಥೆನ್ಸ್‌ನಲ್ಲಿ ನಡೆದಾಗಿನಿಂದ ಈಗಿನವರೆಗೆ ಪ್ರತೀ ವರ್ಷವೂ ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭೋತ್ಸವ ಅದ್ದೂರಿಯಾಗೇ ನಡೆದಿದೆ. ಆದರೆ ಈ ಬಾರಿ ಮಾತ್ರ ಉದ್ಘಾಟನಾ ಸಮಾರಂಭ ಕೊಂಚ ಕಳೆಗುಂದಲಿದೆ. ಕೋವಿಡ್ ಕಾರಣದಿಂದಾಗಿ ಈ ಬಾರಿ ಸರಳವಾಗಿ ಆರಂಭೋತ್ಸವ ನಡೆಯಲಿದೆ.

ಆರಂಭೋತ್ಸವ ಯಾವಾಗ?

ಆರಂಭೋತ್ಸವ ಯಾವಾಗ?

ಟೋಕಿಯೋ ಒಲಿಂಪಿಕ್ಸ್ ಆರಂಭೋತ್ಸವ 2021ರ ಜುಲೈ 23ರಂದು ಅಂದರೆ ಸರಿಯಾಗಿ ಒಂದು ವರ್ಷ ತಡವಾಗಿ ವಿಶ್ವ ಖ್ಯಾತಿಯ ಕ್ರೀಡಾಕೂಟ ಶುರುವಾಗಲಿದೆ. 7 a.m. ET ಮತ್ತು 4 a.m. PT.ಯಂತೆ ಉದ್ಘಾಟನಾ ಸಮಾರಂಭ ಶುರುವಾಗಲಿದೆ (ಈ ಸಮಯ ಟೋಕಿಯೊ ಅಮೆರಿಕದ ಪೂರ್ವ ಕರಾವಳಿಗಿಂತ 13 ಗಂಟೆ ಮತ್ತು ಪಶ್ಚಿಮ ಕರಾವಳಿಗಿಂತ 16 ಗಂಟೆಗಳು ಮುಂದಿದೆ). ಯುಎಸ್‌ ವೀಕ್ಷಕರು ಎನ್‌ಬಿಸಿಯಲ್ಲಿ ಸಮಾರಂಭದ ನೇರಪ್ರಸಾರ ವೀಕ್ಷಿಸಬಹುದು. ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ಸ್ ಚಾನೆಲ್‌ಗಳಲ್ಲಿ ಅಂದರೆ ಸೋನಿLiv, ಸೋನಿ ಟೆನ್ 1 ಎಚ್‌ಡಿ/ಎಸ್‌ಡಿ, ಸೋನಿ ಟೆನ್ 2 ಎಚ್‌ಡಿ/ಎಸ್‌ಡಿ ಚಾನೆಲ್‌ಗಳಲ್ಲಿ ಕ್ರೀಡಾಕೂಟದ ನೇರಪ್ರಸಾರ ಸಿಗಲಿದೆ.

ಉದ್ಘಾಟನಾ ಸಮಾರಂಭ ಎಲ್ಲಿ?

ಉದ್ಘಾಟನಾ ಸಮಾರಂಭ ಎಲ್ಲಿ?

ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಜಪಾನ್‌ನ ಟೋಕಿಯೋದ ಶಿಂಜುಕು ವಾರ್ಡ್‌ನಲ್ಲಿರುವ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಈ ಸ್ಟೇಡಿಯಂನಲ್ಲಿ 68,000 ಜನ ಪಂದ್ಯ ವೀಕ್ಷಿಸಲಿದ್ದಾರೆ. ಅದೇ ಪ್ಯಾರಲಂಪಿಕ್ಸ್ ವೇಳೆ 58,000 ವೀಕ್ಷಕರು ಇರಲಿದ್ದಾರೆ.

ಏನೇನಿರತ್ತೆ ಉದ್ಘಾಟನೆ ವೇಳೆ?

ಏನೇನಿರತ್ತೆ ಉದ್ಘಾಟನೆ ವೇಳೆ?

ಟೋಕಿಯೊ ಉದ್ಘಾಟನಾ ಸಮಾರಂಭದಲ್ಲಿ ಜಪಾನಿನ ರಾಷ್ಟ್ರೀಯ ಮುಖ್ಯಸ್ಥ ಶಿಂಝೊ ಅಬೆ ಅವರ ಪ್ರವೇಶ, ಜಪಾನ್‌ನ ರಾಷ್ಟ್ರಗೀತೆಯ ಪ್ರದರ್ಶನ, ಕ್ರೀಡಾಪಟುಗಳ ಮೆರವಣಿಗೆ, ಪಾರಿವಾಳಗಳ ಸಾಂಕೇತಿಕ ಬಿಡುಗಡೆ, ಅಬೆ ಅವರಿಂದ ಕ್ರೀಡಾಕೂಟ ಪ್ರಾರಂಭ, ಫ್ಲ್ಯಾಕ್ ಹೌಸ್ಟಿಂಗ್ ಮತ್ತು ಒಲಿಂಪಿಕ್ ಗೀತೆಯ ಪ್ರದರ್ಶನ, ಕ್ರೀಡಾಪಟುವಿನಿಂದ ಒಲಿಂಪಿಕ್ ಪ್ರಮಾಣ ವಚನ ಸ್ವೀಕರಿಸುವುದು, ಅಧಿಕಾರಿಯೊಬ್ಬರು ಒಲಿಂಪಿಕ್ ಪ್ರಮಾಣ ವಚನ ಸ್ವೀಕರಿಸುವುದು, ತರಬೇತುದಾರರಿಂದ ಒಲಿಂಪಿಕ್ ಪ್ರಮಾಣ ವಚನ ಸ್ವೀಕರಿಸುವುದು ಮತ್ತು ಒಲಿಂಪಿಕ್ ಜ್ವಾಲೆ ಮತ್ತು ಟಾರ್ಚ್ ರಿಲೇ ಮೊದಲಾದ ಕಾರ್ಯಕ್ರಮಗಳು ಉದ್ಘಾಟನಾ ಸಮಾರಂಭದ ವೇಳೆ ಕಾಣಸಿಗಲಿವೆ. ಜೊತೆಗೆ ಸಣ್ಣ ಮಟ್ಟಿನ ಮನರಂಜನಾ ಕಾರ್ಯಕ್ರಮಗಳೂ ನಡೆಯಲಿವೆ.

For Quick Alerts
ALLOW NOTIFICATIONS
For Daily Alerts
Story first published: Tuesday, July 20, 2021, 20:34 [IST]
Other articles published on Jul 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X