ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಮೊದಲ ಸುತ್ತಿಗೆ ಹೋರಾಟ ಅಂತ್ಯಗೊಳಿಸಿದ ಜುಡೋ ಪಟು ಸುಶೀಲಾ ದೇವಿ

Tokyo Olympics: Shushila Devis campaign ends in first round in Judo

ಟೋಕಿಯೋ, ಜುಲೈ 23: ಭಾರತದ ಜುಡೋ ಆಟಗಾರ್ತಿ ಸುಶೀಲಾ ದೇವಿ ಮೊದಲ ಸುತ್ತಿನಲ್ಲಿ ಹಂಗೇರಿಯ ಇವಾ ಸೆರ್ನೋವಿಜ್ಕಿ ವಿರುದ್ಧ ಸೋಲು ಕಂಡಿದ್ದಾರೆ. ಶನಿವಾರ ನಡೆದ ಮಹಿಳೆಯರ 48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸುಶೀಲಾ ದೇವಿ ಹಂಗೇರಿಯ ಅನುಭವಿ ಜುಡೋ ಪಟುವಿಗೆ 0-10 ಅಂತರದಿಂದ ಶರಣಾದರು.

ಈ ಸೋಲಿನ ಮೂಲಕ ಭಾರತ ಜುಡೋ ಕ್ರೀಡೆಯಲ್ಲಿ 2020ರ ಒಲಿಂಪಿಕ್ಸ್ ಓಟವನ್ನು ಅಂತ್ಯಗೊಳಿಸಿದೆ. ಸುಶೀಲಾ ದೇವಿ ಪ್ರಥಮ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಅವಕಾಶವನ್ನು ಪಡೆದುಕೊಂಡಿದ್ದರು. ಮೊದಲ ಸವಾಲಿನಲ್ಲಿಯೇ ಅತ್ಯಂತ ಕಠಿಣ ಸ್ಪರ್ಧಿಯನ್ನು ಎದುರಿಸಿದ ಸುಶೀಲಾದೇವಿ ಹೆಚ್ಚಿನ ಗಮನಸೆಳೆಯುವಲ್ಲಿ ವಿಫಲರಾಗಿದ್ದಾರೆ.

ಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೊರೊನಾ ಸೋಂಕು, ಒಲಿಂಪಿಕ್ಸ್‌ನಿಂದ ಹೊರಕ್ಕೆಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೊರೊನಾ ಸೋಂಕು, ಒಲಿಂಪಿಕ್ಸ್‌ನಿಂದ ಹೊರಕ್ಕೆ

ಹಂಗೇರಿಯ ಇವಾ ಸೆರ್ನೋವಿಜ್ಕಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿತ ಪದಕ ವಿಜೇತರಾಗಿದ್ದಾರೆ. ತಮ್ಮ ಅನುಭವವನ್ನು ಬಳಸಿಕೊಂಡು ಭಾರತೀಯ ಆಟಗಾರ್ತಿಯ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

26ರ ಹರೆಯದ ಭಾರತೀಯ ಜುಡೋ ಪಟು ಸುಶೀಲಾ ದೇವಿ ಗ್ಲಾಸ್ಕೋದಲ್ಲಿ ನಡೆದ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಕಾಂಟಿನೆಂಟಲ್ ಕೋಟಾ ಅವಕಾಶದಲ್ಲಿ ಸುಶೀಲಾದೇವಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆಯನ್ನು ಸಂಪಾದಿಸಿದ್ದರು. ಈ ಸೋಲಿನ ಮೂಲಕ ಜುಡೋ ವಿಭಾಗದಲ್ಲಿ ಭಾರತದ ಸ್ಪರ್ಧೆ ಅಂತ್ಯವಾಗಿದೆ.

Story first published: Saturday, July 24, 2021, 11:11 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X