ಈಜಿನಲ್ಲಿ ಐದು ಚಿನ್ನದ ಪದಕಗಳೊಂದಿಗೆ ವಿಶ್ವದಾಖಲೆ ಬರೆದ ಕೈಲೆಬ್ ಡ್ರೆಸೆಲ್

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಶುರುವಾಗಿ ಈಗಾಗಲೇ 10 ದಿನಗಳು ಕಳೆಯುತ್ತಿವೆ. ಭಾರತಕ್ಕೆ ಈವರೆಗೆ ಕೇವಲ ಒಂದು ಬೆಳ್ಳಿ ಪದಕ ಲಭಿಸಿದೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದು ಬಿಟ್ಟರೆ ಬೇರೆ ಪದಕಗಳು ಸಿಕ್ಕಿಲ್ಲ. ಸಿಕ್ಕಿದರೂ ಭಾರತಕ್ಕೆ ಚಿನ್ನದ ಪದಕ ಕಷ್ಟದ ಮಾತು. ಆದರೆ ಇಲ್ಲೊಬ್ಬ ಅಥ್ಲೀಟ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ ಐದು ಬಂಗಾರದ ಪದಕಗಳೊಂದಿಗೆ ವಿಶ್ವ ದಾಖಲೆ ಬರೆದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!

ಯುನೈಟೆಡ್ ಸ್ಟೇಟ್ಸ್ ಈಜುಗಾರ ಕೈಲೆಬ್ ಡ್ರೆಸೆಲ್ ಟೋಕಿಯೋ ಒಲಿಂಪಿಕ್ಸ್ ನಿಂದ ತವರಿಗೆ ತೆರಳುವಾಗ ಅವರ ಕೈಯಲ್ಲಿ ಒಟ್ಟು ಐದು ಚಿನ್ನದ ಪದಕಗಳು ಇದ್ದವು. ಇದರಲ್ಲಿ ಮೂರು ಚಿನ್ನದ ಪದಕಗಳು ಕೈಲೆಬ್‌ಗೆ ವೈಯಕ್ತಿಕ ವಿಭಾಗದಲ್ಲಿ ಲಭಿಸಿದ್ದು, ಇನ್ನುಳಿದವು ತಂಡ ಸ್ಪರ್ಧೆಗಳಲ್ಲಿ ಲಭಿಸಿದ್ದು.

ಯುಎಸ್ ವಿಶ್ವದಾಖಲೆ

ಯುಎಸ್ ವಿಶ್ವದಾಖಲೆ

ಕೈಲೆಬ್ ಡ್ರೆಸೆಲ್ ಮತ್ತವರ ತಂಡ 4x100 ಮೀ. ಮಿಡ್ಲೆ ರಿಲೇ ಸ್ಪರ್ಧೆಯಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಚಾಚಿಕೊಂಡಿದೆ. ಡ್ರೆಸೆಲ್ ಮತ್ತು ಯಾನ್ ಮರ್ಫಿ, ಮೈಕೆಲ್ ಆಂಡ್ರ್ಯೂ ಮತ್ತು ಝ್ಯಾಕ್ ಆ್ಯಪಲ್ ಅವರಿದ್ದ ತಂಡ ವಿಶ್ವದಾಖಲೆಯೊಂದಿಗೆ ಬಂಗಾರದ ಪದಕ ಜಯಿಸಿದೆ. 3 ನಿಮಿಷ 26.78 ಸೆ. ಕಾಲಾವಧಿಯೊಂದಿಗೆ ಯುಎಸ್ ತಂಡ ವಿಶ್ವದಾಖಲೆ ಬರೆದಿದೆ. ಇದಕ್ಕೂ ಮುನ್ನ 50 ಮೀಟರ್ ಫ್ರೀಸ್ಟೈಲ್‌ ಈಜಿನಲ್ಲೂ ಡ್ರೆಸೆಲ್ ಅತೀ ವೇಗದ ಈಜುಗಾರ ದಾಖಲೆ ಕಾರಣರಾಗಿದ್ದಾರೆ. 50 ಮೀಟರ್ ಫ್ರೀಸ್ಟೈಲ್‌ ನಲ್ಲಿ ಡ್ರೆಸೆಲ್ 21.07 ಸೆಕೆಂಡ್ ಕಾಲಾವಧಿಯೊಂದಿಗೆ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. 50 ಮೀಟರ್ ಫ್ರೀಸ್ಟೈಲ್‌ ಈಜು ಸ್ಪರ್ಧೆ ಬಹಳ ಕಷ್ಟಕರವಾದದ್ದು. ಯಾಕೆಂದರೆ ಈ ಸ್ಪರ್ಧೆಯಲ್ಲಿ ಉಸಿರು ತೆಗೆದುಕೊಳ್ಳಲೂ ಕಾಲಾವಕಾಶವಿರೋಲ್ಲ. ಅಷ್ಟು ವೇಗವಾಗಿ ಸ್ಪರ್ಧೆ ಮುಗಿದುಬಿಡುತ್ತೆ. ಆದರೆ ಸ್ಪರ್ಧೆಯಲ್ಲಿ ಕೈಲೆಬ್ ತನ್ನ ಪ್ರತಿಸ್ಪರ್ಧಿಗೆ ಹತ್ತಿರ ಅರ್ಧ ಸೆಕೆಂಡ್ ಮುಂಚಿತವಾಗಿ ಗುರಿತಲುಪಿ ದಾಖಲೆ ಬರೆದಿದ್ದಾರೆ.

ಒಟ್ಟು ಐದು ಸ್ಪರ್ಧೆಗಳಲ್ಲಿ ಬಂಗಾರ

ಒಟ್ಟು ಐದು ಸ್ಪರ್ಧೆಗಳಲ್ಲಿ ಬಂಗಾರ

24ರ ಹರೆಯದ ಫ್ಲೊರಿಡಾ ನಿವಾಸಿಯಾದ ಕೈಲೆಬ್ ಡ್ರೆಸೆಲ್ ಈಗ ವಿಶ್ವದಾಖಲೆ ನಿರ್ಮಿಸಿದ್ದಾರಾದರೂ ಈ ಮೊದಲು ಅವರಿಗೆ ಒಲಿಂಪಿಕ್ಸ್ ಒಂದೂ ಪದಕ ಸಿಕ್ಕಿರಲಿಲ್ಲ ಅನ್ನೋದು ವಿಶೇಷ. ವೈಯಕ್ತಿಕ ವಿಭಾಗಗಳಲ್ಲಿ ಮೂರು ಮತ್ತು ತಂಡ ಸ್ಪರ್ಧೆಗಳಲ್ಲಿ ಎರಡು ಹೀಗೆ ಒಟ್ಟಾರೆ ಐದು ಬಂಗಾರದ ಪದಕಗಳು ಕೈಲೆಬ್ ಗೆ ದೊರೆತಿವೆ. 4x100 ಮೀಟರ್ ಮಿಡ್ಲೆ ರಿಲೇ, 50 ಮೀಟರ್ ಫ್ರೀಸ್ಟೈಲ್ (ವೈಯಕ್ತಿಕ ವಿಭಾಗ), 100 ಮೀಟರ್ ಫ್ರೀ ಸ್ಟೈಲ್ (ವೈಯಕ್ತಿಕ ವಿಭಾಗ), 100 ಮೀಟರ್ ಬಟರ್‌ಫ್ಲೈ (ವೈಯಕ್ತಿಕ ವಿಭಾಗ), 4x100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಡ್ರೆಸೆಲ್‌ಗೆ ಬಂಗಾರ ದೊರೆತಿದೆ. ಸ್ಪರ್ಧೆಯ ಬಳಿಕ ಮಾತನಾಡಿದ ಡ್ರೆಸೆಲ್, "ಈ ಪದಕ ನನ್ನ ಪಾಲಿಗೆ ಬಹಳ ಅರ್ಧ ಹೊಂದಿದೆ. ನನ್ನ ಈಜು ವೃತ್ತಿಯನ್ನು ಆರಂಭಿಸಿದ ಮೊದಲ ಓಟವು 50 ಮೀ ಫ್ರೀಸ್ಟೈಲ್. ನಾನು ಚಿಕ್ಕವನಿದ್ದಾಗಿನಿಂದ ಅದರಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರಿಂದ ಬಂಗಾರ ಲಭಿಸಿದೆ. ಮನೌಡೌ (ಫ್ರಾನ್ಸ್‌ನ ಫ್ಲೊರೆಂಟ್ ಮನೌಡೌ) ಅವರು ಲಂಡನ್‌ನಲ್ಲಿ ಬಂಗಾರ ಗೆದ್ದಿದ್ದನ್ನು ನಾನು ನೆನಪಿಸಿಕೊಳ್ಳಬಲ್ಲೆ. ಅದರಿಂದಲೇ ನನಗೂ ಈಜಿನ ಹುಚ್ಚು ಶುರುವಾಯ್ತು," ಎಂದಿದ್ದಾರೆ.

ಪದಕ ಪಟ್ಟಿಯಲ್ಲಿ ಯುಎಸ್‌ಎ ದ್ವಿತೀಯ

ಪದಕ ಪಟ್ಟಿಯಲ್ಲಿ ಯುಎಸ್‌ಎ ದ್ವಿತೀಯ

ಪದಕ ಪಟ್ಟಿಯಲ್ಲಿ ಈಗ ಚೀನಾ ಮೊದಲ ಸ್ಥಾನದಲ್ಲಿದೆ. 1 ಆಗಸ್ಟ್ 1.30 PM ವೇಳೆ 23 ಚಿನ್ನ, 14 ಬೆಳ್ಳಿ, 12 ಕಂಚಿನ ಪದಕಗಳೊಂದಿಗೆ ಚೀನಾ ಅಗ್ರ ಸ್ಥಾನದಲ್ಲಿತ್ತು. ಈ ಪಟ್ಟಿಯಲ್ಲಿ ಯುಎಸ್‌ಎ ದ್ವಿತೀಯ ಸ್ಥಾನದಲ್ಲಿದೆ. ಯುಎಸ್‌ಎ ಖಾತೆಯಲ್ಲಿ 19 ಚಿನ್ನ, 20 ಬೆಳ್ಳಿ, 14 ಕಂಚಿನ ಪದಕಗಳಿವೆ. ತೃತೀಯ ಸ್ಥಾನದಲ್ಲಿ ಆತಿಥೇಯ ಜಪಾನ್ ದೇಶವಿದೆ. ಜಪಾನ್ ದೇಶ 17 ಬಂಗಾರ, 5 ಬೆಳ್ಳಿ, 8 ಕಂಚಿನ ಪದಕಗಳನ್ನು ಜಯಿಸಿದೆ. ಭಾರತ ಸದ್ಯ 61ನೇ ಸ್ಥಾನದಲ್ಲಿದೆ. ಮಿರಾಬಾಯಿ ಗೆದ್ದ ಒಂದು ಬೆಳ್ಳಿ ಪದಕ ಮಾತ್ರ ಭಾರತದ ಖಾತೆಯಲ್ಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, August 1, 2021, 13:39 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X