ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಾತಿ ನಿಂದನೆಗೆ ಒಳಗಾದ ಹಾಕಿ ಆಟಗಾರ್ತಿ ವಂದನಾಗೆ 25 ಲಕ್ಷ ರೂ. ಘೋಷಣೆ!

Tokyo Olympics: Uttarakhand government to give Rs 25 lakh to Hockey player Vandana Katariya

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತೀಯ ವನಿತಾ ಹಾಕಿ ತಂಡದಲ್ಲಿದ್ದ ವಂದನಾ ಕಟಾರಿಯಾಗೆ ಉತ್ತರಖಂಡ ಸರ್ಕಾರ 25 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಿದೆ. ಉತ್ತರದ ಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ರಾಜ್ಯದಿಂದ ದೇಶವನ್ನು ಪ್ರತಿನಿಧಿಸಿದ್ದ ವನಿತಾ ಹಾಕಿ ತಂಡದ ಸದಸ್ಯೆ ವಂದನಾಗೆ ಶುಕ್ರವಾರ (ಆಗಸ್ಟ್ 6) 25 ಲಕ್ಷ ರೂ. ಘೋಷಿಸಿದ್ದಾರೆ. ವಿಪರ್ಯಾಸವೆಂದರೆ, ಇದೇ ವಂದನಾ ಒಲಿಂಪಿಕ್ಸ್‌ನಲ್ಲಿ ದೇಶದ ಪರ ಉತ್ತಮ ಪ್ರದರ್ಶನ ನೀಡಿದ ಹೊರತೂ ಜಾತಿ ನಿಂದನೆಗೆ ಒಳಗಾಗಿದ್ದರು.

ಭಾರತ vs ಇಂಗ್ಲೆಂಡ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ರವಿಂದ್ರ ಜಡೇಜಾ ದಾಖಲೆಭಾರತ vs ಇಂಗ್ಲೆಂಡ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ರವಿಂದ್ರ ಜಡೇಜಾ ದಾಖಲೆ

ಭಾರತೀಯ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿತ್ತು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳೆಯರ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಒಲಿಂಪಿಕ್ಸ್‌ನಲ್ಲಿ ಮಹಿಳಾ ತಂಡದ ಈ ಸಾಧನೆ ಇದೇ ಮೊದಲ ಬಾರಿ ಆಗಿದ್ದು. ತಂಡಕ್ಕೆ ಕಂಚು ಗೆಲ್ಲುವ ಅವಕಾಶ ಇತ್ತಾದರೂ ಆ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಉತ್ತಮ ಪೈಪೋಟಿ ನೀಡಿದ್ದ ಭಾರತ ಸೋತಿತ್ತು.

ದೇಶಕ್ಕಾಗಿ ಕಟಾರಿಯಾಳ ಅವಿಸ್ಮರಣೀಯ ಆಟ ಹೆಮ್ಮೆ ತಂದಿದೆ

ದೇಶಕ್ಕಾಗಿ ಕಟಾರಿಯಾಳ ಅವಿಸ್ಮರಣೀಯ ಆಟ ಹೆಮ್ಮೆ ತಂದಿದೆ

"ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ನಮ್ಮ ಉತ್ತರಖಂಡದ ಮಗಳು ವಂದನಾ ಕಟಾರಿಯಾ ನೀಡಿದ ಅವಿಸ್ಮರಣೀಯ ಪ್ರದರ್ಶನದ ಕೊಡುಗೆಯನ್ನು ನೆನೆಯಲು ನಾವು ಹೆಮ್ಮೆಪಡುತ್ತೇವೆ. ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ 25 ಲಕ್ಷ ರೂ. ನಗದು ಪುರಸ್ಕಾರ ನೀಡಲಿದ್ದೇವೆ," ಎಂದು ಸಿಎಂ ಪುಷ್ಕರ್ ಸಿಂಗ್ ಧಮಿ ಹೇಳಿದ್ದಾರೆ. ಬೇರೆ ಬೇರೆ ಕ್ರೀಡೆಗಳಲ್ಲಿ ಪ್ರತಿಭಾನ್ವಿತರನ್ನು ಹೆಕ್ಕಲು ಸಹಾಯವಾಗುವಂತೆ ಉತ್ತರಖಂಡ ರಾಜ್ಯದಲ್ಲಿ ಆಕರ್ಷಕ ನೂತನ ಕ್ರೀಡಾ ನಿಯಮ ಜಾರಿಯಾಗಲಿದೆ ಎಂದೂ ಧಮಿ ತಿಳಿಸಿದ್ದಾರೆ. ಅಂದ್ಹಾಗೆ ಶುಕ್ರವಾರ (ಆಗಸ್ಟ್ 6) ನಡೆದಿದ್ದ ಮಹಿಳಾ ಹಾಕಿ ಕಂಚಿನ ಪದಕದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ 4-3ರ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಗೆದ್ದಿದ್ದರೆ, ಒಲಿಂಪಿಕ್ಸ್ ಇತಿಹಾಸಲ್ಲೇ ಮಹಿಳಾ ಹಾಕಿ ತಂಡ ಚೊಚ್ಚಲ ಪದಕ ಗೆದ್ದು ಇತಿಹಾಸ ನಿರ್ಮಿಸಿದಂತಾಗುತ್ತಿತ್ತು. ಆದರೆ ಭಾರತೀಯ ತಂಡಕ್ಕೆ ಸೋಲಾಗಿ ನಿರಾಶೆ ಅನುಭವಿಸುವಂತಾಗಿತ್ತು.

ಕಂಚಿನ ಪದಕದ ಪಂದ್ಯದಲ್ಲೂ ಒಂದು ಗೋಲ್ ಬಾರಿಸಿದ್ದ ವಂದನಾ

ಕಂಚಿನ ಪದಕದ ಪಂದ್ಯದಲ್ಲೂ ಒಂದು ಗೋಲ್ ಬಾರಿಸಿದ್ದ ವಂದನಾ

ಶುಕ್ರವಾರ ನಡೆದಿದ್ದ ಕಂಚಿನ ಪದಕದ ಪಂದ್ಯದಲ್ಲೂ ವಂದನಾ ಒಂದು ಗೋಲ್ ಬಾರಿಸಿ ಗಮನ ಸೆಳೆದಿದ್ದರು. ಪಂದ್ಯದ 25 ಮತ್ತು 26ನೇ ನಿಮಿಷಗಳಲ್ಲಿ ಭಾರತ ಗುರ್‌ಜೀತ್ ಕೌರ್ ಬೆನ್ನು ಬೆನ್ನಿಗೆ ಎರಡು ಗೋಲ್ ಬಾರಿಸಿ ಅಂಕವನ್ನು 2-2ಕ್ಕೆ ತಂದಿದ್ದರೆ, 29ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಅವರಿಂದ ಮತ್ತೊಂದು ಗೋಲ್ ದಾಖಲಾಯ್ತು. ಹೀಗಾಗಿ ಭಾರತ ದ್ವಿತೀಯ ಕ್ವಾರ್ಟರ್‌ನಲ್ಲಿ 3-2ರ ಮುನ್ನಡೆ ಪಡೆದುಕೊಂಡಿತ್ತು. ಆದರೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದಿಂದ ಗೋಲ್ ದಾಖಲಾಗಲಿಲ್ಲ. ಇತ್ತ ಬ್ರಿಟನ್ ತಂಡದಿಂದ 16ನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್‌ನ ಎಲೆನಾ ಸಿಯಾನ್ ರೇಯರ್, 24ನೇ ನಿಮಿಷದಲ್ಲಿ ಸಾರಾ ರಾಬರ್ಟ್ಸನ್, ಹಾಲಿ ಪಿಯರ್ನ್-ವೆಬ್, 35ನೇ ನಿಮಿಷದಲ್ಲಿ ಹಾಲಿ ಪಿಯರ್ನ್-ವೆಬ್, 48ನೇ ನಿಮಿಷದಲ್ಲಿ ಗೋಲ್ ಬಾರಿಸಿ ಪಂದ್ಯವನ್ನು 4-3ರಿಂದ ಗೆದ್ದರು. ಪಂದ್ಯದಲ್ಲಿ ಗುರ್‌ಜೀತ್ ಕೌರ್, ವಂದನಾ ಅಲ್ಲದೆ ಗೋಲ್ ಕೀಪರ್ ಸವಿತಾ ಪೂನಿಯಾ ಕೂಡ ಉತ್ತಮ ಪ್ರದರ್ಶನ ನೀಡಿದ್ದು ಕಂಡುಬಂತು.

ಕಟಾರಿಯಾ ಅದ್ಭುತ ಆಟ, ಒಲಿಂಪಿಕ್ಸ್‌ನಲ್ಲಿ ವಿಶೇಷ ದಾಖಲೆ

ಕಟಾರಿಯಾ ಅದ್ಭುತ ಆಟ, ಒಲಿಂಪಿಕ್ಸ್‌ನಲ್ಲಿ ವಿಶೇಷ ದಾಖಲೆ

ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತೀಯ ಮಹಿಳಾ ತಂಡ ಈ ಬಾರಿ ಐತಿಹಾಸಿಕ ಸಾಧನೆ ತೋರಿತ್ತು. ಒಲಿಂಪಿಕ್ಸ್‌ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿ ಈ ಸಾಧನೆ ಮಾಡಿದ ಮೊದಲ ತಂಡವಾಗಿ ಗುರುತಿಸಿಕೊಂಡಿತ್ತು. ಅಷ್ಟೇ ಅಲ್ಲ, ಒಲಿಂಪಿಕ್ಸ್‌ನ ಮಹಿಳಾ ಹಾಕಿಯಲ್ಲಿ ಹ್ಯಾಟ್ರಿಕ್ ಸಾಧನೆ ತೋರಿದ ಮೊದಲ ಭಾರತೀಯೆ ಎಂಬ ವಿಶೇಷ ದಾಖಲೆ ಕಟಾರಿಯಾ ನಿರ್ಮಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಗ್ರೂಪ್ 'ಎ' ಹಂತದ ಸ್ಪರ್ಧೆಯಲ್ಲಿ ಭಾರತ 4-3ರ ಜಯ ಗಳಿಸಿತ್ತು. ಇದರಲ್ಲಿ ಕಟಾರಿಯಾ 3 ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗುವ ಮೂಲಕ ಗಮನ ಸೆಳೆದಿದ್ದರು. ಗ್ರೂಪ್ ಹಂತದ ಹಿಂದಿನ ಪಂದ್ಯಗಳಲ್ಲೂ ಕಟಾರಿಯಾ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಭಾರತೀಯ ವನಿತಾ ಹಾಕಿ ತಂಡದಲ್ಲಿ 29ರ ಹರೆಯದ ವಂದನಾ ಫಾರ್ವರ್ಡ್ ಆಗಿ ಆಡುತ್ತಾರೆ.

ದೇಶದ ಪರ ಉತ್ತಮ ಆಟ ಆಡಿದಾಕೆಗೆ ಜಾತಿ ನಿಂದನೆ!

ದೇಶದ ಪರ ಉತ್ತಮ ಆಟ ಆಡಿದಾಕೆಗೆ ಜಾತಿ ನಿಂದನೆ!

ಆಗಸ್ಟ್ 4ರಂದು ನಡೆದಿದ್ದ ಮಹಿಳಾ ಹಾಕಿ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತ 2-1ರಿಂದ ಸೋತಿತ್ತು. ಈ ಪಂದ್ಯದ ಮುಕ್ತಾಯದ ಬಳಿಕ ಉತ್ತರಖಂಡ್‌ನ ಹರಿದ್ವಾರದಲ್ಲಿರುವ ವಂದನಾ ಕಟಾರಿಯ ಮನೆಯ ಬಳಿಕ ಮೇಲ್ಜಾತಿಯ ಇಬ್ಬರು ವ್ಯಕ್ತಿಗಳು ಬಂದು ಪಟಾಕಿ ಸಿಡಿಸಿ ವಿಕೃತಿ ಮೆರೆದಿದ್ದರು. ಅಲ್ಲದೆ ದಲಿತ ಜಾತಿಗೆ ಸೇರಿದ ವಂದನಾಳನ್ನು ವಿನಾಕಾರಣ ನಿಂದಿಸಿದ್ದರು. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ವಂದನಾ ಕಟಾರಿಯಾರ ಸಹೋದರ, "ಸೆಮಿಫೈನಲ್‌ನಲ್ಲಿ ಭಾರತೀಯ ತಂಡ ಸೋತಿದ್ದಕ್ಕೆ ನಮಗೂ ಬೇಸರವಾಯ್ತು. ಆದರೆ ಪಂದ್ಯದಲ್ಲಿ ನಮ್ಮ ಭಾರತೀಯ ತಂಡ ಉತ್ತಮ ಪೈಪೋಟಿ ನೀಡಿತ್ತು. ಇದು ನಮಗೆ ಹೆಮ್ಮೆ ತರಿಸಿತ್ತು. ಪಂದ್ಯ ಮುಗಿಯುತ್ತಲೇ ತಕ್ಷಣ ನಮ್ಮ ಮನೆಯ ಹೊರಗೆ ಸದ್ದು ಕೇಳಿತು. ನಮ್ಮ ಮನೆಯ ಮುಂದೆ ಯಾರೋ ಪಟಾಕಿ ಹಚ್ಚುತ್ತಿದ್ದರು. ನಾವು ಹೊರಗೆ ಹೋಗಿ ನೋಡಿದಾಗ ಇಬ್ಬರು ನಮ್ಮೂರಿನವರೇ ನಮಗೆ ಗೊತ್ತಿರುವ ಮೇಲ್ಜಾತಿಯವರು ಇದ್ದರು. ಅವರು ನಮ್ಮ ಮನೆಯ ಮುಂದೆ ಕುಣಿಯುತ್ತಿದ್ದರು," ಎಂದು ಹೇಳಿದ್ದಾರೆ.

ಜಾತಿ ನಿಂದನೆ ಮಾಡಬೇಡಿ, ಭಾರತೀಯರಾಗಿ ನೋಡಿ

ಜಾತಿ ನಿಂದನೆ ಮಾಡಬೇಡಿ, ಭಾರತೀಯರಾಗಿ ನೋಡಿ

ಮೇಲ್ಜಾತಿಯ ಇಬ್ಬರ ವಿಕೃತಿ ಮನಸ್ಥಿತಿಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾಕ್ಕೆ ವಿವರಿಸಿರುವ ಕಟಾರಿಯಾ ಸಹೋದರ, 'ಆ ಮೇಲ್ಜಾತಿಯ ಇಬ್ಬರು ನಮ್ಮ ವಿರುದ್ಧ ಜಾತಿ ನಿಂದನೆ ಮಾಡಿದರು. ಬಹಳಷ್ಟು ದಲಿತರು ತಂಡದಲ್ಲಿ ಇರುವುದರಿಂದಲೇ ಭಾರತೀಯ ತಂಡ ಪಂದ್ಯ ಸೋತಿತು. ಬರೀ ಹಾಕಿ ಮಾತ್ರವಲ್ಲ, ಎಲ್ಲಾ ಕ್ರೀಡೆಗಳಿಂದಲೂ ದಲಿತರನ್ನು ಹೊರಗಿಡಬೇಕು ಎಂದು ಅವರು ಹೇಳುತ್ತಿದ್ದರು. ಆ ಬಳಿಕ ಅವರು ತಮ್ಮ ಬಟ್ಟೆಬಿಚ್ಚಿ ಮತ್ತೆ ಮನೆಯ ಮುಂದೆ ಕುಣಿಯಲಾರಂಭಿಸಿದ್ದರು," ಎಂದಿದ್ದಾರೆ. ಈ ಘಟನೆ ಬಗ್ಗೆ ವಂದನಾ ಕೂಡ ಬೇಸರ ವ್ಯಕ್ತಪಡಿಸಿದ್ದರು. "ನಾನು ದಲಿತ. ಯಾಕಂದರೆ ನನ್ನೊಳಗೆ ಬುದ್ದನ ಶಾಶ್ವತ ಬೆಳಕಿದೆ, ಬಾಬಾಸಾಹೇಬರ ಅಮರತ್ವವಿದೆ, ಕಾನ್ಸೀರಾಂರ ಧೈರ್ಯವಿದೆ, ಮಾನವೀಯತೆಯ ಬನಿಯಿದೆ. ನಾವು ಭಾರತ ದೇಶಕ್ಕಾಗಿ ಆಡುತ್ತಿದ್ದೇವೆ. ದಯವಿಟ್ಟು ಜಾತಿ ನಿಂದನೆ ಮಾಡಬೇಡಿ. ಭಾರತದ ಪರ ಆಡುವಾಗ ಭಾರತೀಯರಾಗಿ ನೋಡಿ," ಎಂದು ವಂದನಾ ಹೇಳಿಕೊಂಡಿದ್ದಾರೆ.

Story first published: Saturday, August 7, 2021, 11:02 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X