ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!

ಟೋಕಿಯೋ: ಒಲಿಂಪಿಕ್ಸ್‌ ಆಗಲಿ ಅಥವಾ ಯಾವುದೇ ಪ್ರತಿಷ್ಠಿತ ಕ್ರೀಡಾಕೂಟಗಳಾಗಲಿ ಪದಕಗಳನ್ನು ಗೆದ್ದ ಅಥ್ಲೀಟ್‌ಗಳು ಆ ಪದಕವನ್ನು ಕಚ್ಚಿರುವ ಚಿತ್ರ ಅಥವಾ ವಿಡಿಯೋ ನೋಡಿರುತ್ತೇವೆ. ಅಥ್ಲೀಟ್‌ಗಳು ಹೀಗೆ ಗೆದ್ದ ಪದಕಗಳನ್ನು ಕಚ್ಚುತ್ತಾರಲ್ಲಾ ಅದು ಯಾಕೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಯಾವತ್ತಾದ್ರೂ ಮೂಡಿದೆಯಾ? ಗೆದ್ದ ಖುಷಿಯನ್ನು ಅಥವಾ ಸ್ಪರ್ಧೆಗೂ ಮುನ್ನ ಶ್ರಮವಹಿಸಿ ಅಭ್ಯಾಸ ಮಾಡಿದ್ದರ ಸಿಟ್ಟನ್ನು ಅಥ್ಲೀಟ್‌ಗಳು ಹೀಗೆ ತೋರಿಸುವುದಿರಬಹುದಾ?

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತದ ಅಪ್‌ಡೇಟೆಡ್ ತಂಡ ಪ್ರಕಟ, ತಂಡದಲ್ಲಿ ಪ್ರಮುಖ ಬದಲಾವಣೆ!ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತದ ಅಪ್‌ಡೇಟೆಡ್ ತಂಡ ಪ್ರಕಟ, ತಂಡದಲ್ಲಿ ಪ್ರಮುಖ ಬದಲಾವಣೆ!

ಅಥ್ಲೀಟ್‌ಗಳು ಪಕದ ಗೆದ್ದಾಗ ಫೋಟೋದ ಮುಂದೆ ಪದಕವನ್ನು ಕಚ್ಚುತ್ತಾರಲ್ಲಾ? ಅದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ. ಟೋಕಿಯೋ ಒಲಿಂಪಿಕ್ಸ್‌ನ ಈ ದಿನಗಳಲ್ಲಿ ಅಥ್ಲೀಟ್‌ಗಳು ಪದಕ ಕಚ್ಚುವ ಹಿಂದಿನ ಗುಟ್ಟನ್ನು ತಿಳಿದುಕೊಳ್ಳೋಣ ಬನ್ನಿ..

ಚಿನ್ನದ ಪದಕ ಖಾತ್ರಿಪಡಿಸಿಕೊಳ್ಳಲಿಕ್ಕಾ?

ಚಿನ್ನದ ಪದಕ ಖಾತ್ರಿಪಡಿಸಿಕೊಳ್ಳಲಿಕ್ಕಾ?

ಇತಿಹಾಸ ಹೇಳುವ ಪ್ರಕಾರ ಆರಂಭದ ದಿನಗಳಲ್ಲಿ ಮಾರಾಟಗಾರರು ಚಿನ್ನದ ಕಾಯಿನ್‌ಗಳನ್ನು ಕಚ್ಚಿ ಪರೀಕ್ಷಿಸುತ್ತಿದ್ದರಂತೆ. ಅಂದರೆ ಕರೆನ್ಸಿ ಅಥವಾ ಹಣ (ನಾಣ್ಯ) ಪಕ್ಕಾ ಇದೆಯಾ ಅನ್ನೋದನ್ನು ತಿಳಿದುಕೊಳ್ಳಲು ಹೀಗೆ ಮಾಡುತ್ತಿದ್ದರಂತೆ. ಅಸಲಿ ಚಿನ್ನದ ನಾಣ್ಯವಾಗಿದ್ದರೆ ಚಿನ್ನ ಮೃದು ಲೋಹವಾದ್ದರಿಂದ ಕಚ್ಚಿದ ಭಾಗದಲ್ಲಿ ಹಲ್ಲಿನ ಗುರುತು ಚಿಕ್ಕದಾಗಿ ಮೂಡುತ್ತಿದ್ದರಿಂದ ಹೀಗೆ ಪರೀಕ್ಷಿಸಿ ಚಿನ್ನವನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರಂತೆ.

ಅಥ್ಲೀಟ್‌ಗಳೂ ಕಚ್ಚೋದು ಇದಕ್ಕೇನಾ?

ಅಥ್ಲೀಟ್‌ಗಳೂ ಕಚ್ಚೋದು ಇದಕ್ಕೇನಾ?

ವ್ಯಾಪಾರಿಗಳು ಅಥವಾ ಮಾರಾಟಗಾರರು ಅಸಲಿ ಚಿನ್ನವನ್ನು ಪರೀಕ್ಷಿಸುವುದಕ್ಕಾಗಿ ಚಿನ್ನದ ನಾಣ್ಯಕ್ಕೆ ಕಚ್ಚುತ್ತಿದ್ದರು ಅನ್ನೋದೇನೋ ನಿಜವಿರಬಹುದು. ಆದರೆ ಅಥ್ಲೀಟ್‌ಗಳೂ ಚಿನ್ನ ಅಥವಾ ಅಸಲಿ ಲೋಹವನ್ನು ಪರೀಕ್ಷಿಸಲು ಹೀಗೆ ಮಾಡ್ತಾರಾ? ಖಂಡಿತಾ ಇಲ್ಲ. ಅಷ್ಟಕ್ಕೂ ಒಲಿಂಪಿಕ್ಸ್‌ನಲ್ಲಿ ಶುದ್ಧ ಚಿನ್ನದ ಪದಕ ನೀಡೋದನ್ನು 1912ರ ಒಲಿಂಪಿಕ್ಸ್‌ನಿಂದಲೇ ನಿಲ್ಲಿಸಲಾಗಿದೆ. ಇಂಟರ್ ನ್ಯಾಷನಲ್ ಒಲಿಂಪಿಕ್ ಕಮಿಟಿ ಈಗ ನೀಡುವ ಪದಕದಲ್ಲಿ ಚಿನ್ನ ಅಥವಾ ಬೆಳ್ಳಿಯ ಒಂದಿಷ್ಟು ಅಂಶ ಇರುತ್ತದೆಯಷ್ಟೇ ಹೊರತು ಪೂರ್ತಿ ಚಿನ್ನ ಅಥವಾ ಬೆಳ್ಳಿಯಂತೂ ಇರುವುದಿಲ್ಲ. ಅದು ಗೊತ್ತಿದ್ದರೂ ಅಥ್ಲೀಟ್‌ಗಳು ಈಗಲೂ ಪದಕಕ್ಕೆ ಕಚ್ಚುತ್ತಿರುತ್ತಾರಲ್ಲ ಯಾಕೆ?

ಅಸಲಿ ಕಾರಣ ಇಲ್ಲಿದೆ!

ಅಸಲಿ ಕಾರಣ ಇಲ್ಲಿದೆ!

ಅಥ್ಲೀಟ್‌ಗಳು ತಮಗೆ ಸಿಕ್ಕ ಪದಕಕ್ಕೆ ಕಚ್ಚೋದ್ಯಾಕೆ ಗೊತ್ತಾ? ಫೋಟೋಗ್ರಾಫರ್ ಹಾಗೆ ಮಾಡಲು ಹೇಳಿದ್ದಕ್ಕಾಗಿ. ಪದಕ ಗೆದ್ದ ಅಥ್ಲೀಟ್‌ಗಳ ಫೋಟೋ ತೆಗೆಯುವಾಗ ಮರುದಿನದ ದಿನಪತ್ರಿಕೆಯಲ್ಲಿ ಫೋಟೋ ಆಕರ್ಷಕವಾಗಿ ಕಾಣಲೆಂದು ಫೋಟೋಗ್ರಾಫರ್‌ಗಳು ಅಥ್ಲೀಟ್‌ಗಳಲ್ಲಿ ಪದಕಕ್ಕೆ ಕಚ್ಚಿ ಪೋಸ್ ಕೊಡುವಂತೆ ಕೇಳಿಕೊಳ್ಳುತ್ತಿದ್ದರಂತೆ. ಅಂದಿನಿಂದ ಪದಕ ಗೆದ್ದ ಅಥ್ಲೀಟ್‌ಗಳಲ್ಲಿ ಪದಕ ಕಚ್ಚುವ ಫ್ಯಾಶನ್ನೋ ಅಥವೋ ಹುಚ್ಚೋ ಶುರುವಾಯ್ತು.

ಪದಕ ಕಚ್ಚಿ ಒಬ್ಬನ ಹಲ್ಲುದುರಿಸಿತ್ತು!

ಪದಕ ಕಚ್ಚಿ ಒಬ್ಬನ ಹಲ್ಲುದುರಿಸಿತ್ತು!

ಈ ಪದಕ ಕಚ್ಚುವ ಹುಚ್ಚಿನ ಹಿಂದೊಂದು ಗಮ್ಮತ್ತಿನ ಕತೆಯಿದೆ. ಒಬ್ಬ ಅಥ್ಲೀಟ್ ಹೀಗೆ ಪದಕ ಕಚ್ಚಿ ಪೋಸ್ ಕೊಟ್ಟು ಹಲ್ಲುದುರಿಸಿಕೊಂಡಿದ್ದ. 2010ರ ವಿಂಟರ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಜರ್ಮನ್ ಲೂಜರ್ ಡೇವಿಡ್ ಮೋಯ್ಲರ್‌ ಅವರು ಪದಕ ಕಚ್ಚಿ ಹಲ್ಲು ಮುರಿದುಕೊಂಡಿದ್ದರು. "ಫೋಟೋ ಗ್ರಾಫರ್ ಪದಕವನ್ನು ಹಲ್ಲಿನ ಮಧ್ಯೆ ಇಟ್ಟು ಪೋಸ್ ಕೊಡಲು ಹೇಳಿದ್ದ. ನಾನು ಹಾಗೇ ಪೋಸ್ ಕೊಟ್ಟೆ. ಮತ್ತೆ ರಾತ್ರಿಯ ಊಟ ಮಾಡುವಾಗ ನನ್ನ ಒಂದು ಹಲ್ಲು ಮಿಸ್ ಆಗಿರುವುದನ್ನು ನಾನು ಗಮನಿಸಿದೆ," ಎಂದು ಮೋಯ್ಲರ್ ಜರ್ಮನ್ ದಿನಪತ್ರಿಕೆ ಬಿಲ್ಡ್‌ ಜೊತೆ ಹೇಳಿಕೊಂಡಿದ್ದರು (ಚಿತ್ರದಲ್ಲಿ ಡೇವಿಡ್ ಮೋಯ್ಲರ್‌).

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 28, 2021, 11:57 [IST]
Other articles published on Jul 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X