ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ರೆಸ್ಲಿಂಗ್‌ ಫೈನಲ್ ಪಂದ್ಯದಲ್ಲಿ ರವಿ ದಾಹಿಯಾಗೆ ಸೋಲು, ಭಾರತಕ್ಕೆ 2ನೇ ಬೆಳ್ಳಿ ಪದಕ

Tokyo olympics: Wrestling, Ravi Kumar Lost the final battle, silver medal for India

ಟೋಕಿಯೋ, ಆಗಸ್ಟ್ 5: 57 ಕೆಜಿ ವಿಭಾಗದ ರೆಸ್ಲಿಂಗ್‌ ಫೈನಲ್ ಸ್ಪರ್ಧೆಯಲ್ಲಿ ಭಾರತದ ರವಿಕುಮಾರ್ ದಾಹಿಯಾ ಸೋಲು ಕಂಡಿದ್ದಾರೆ. ಹೀಗಾಗಿ ಚಿನ್ನದ ಪದಕ ಗೆಲ್ಲುವ ಪ್ರಯತ್ನದಲ್ಲಿ ಭಾರತ ವಿಫಲವಾಗಿದೆ. ಆದರೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಎರಡನೇ ಬೆಳ್ಳಿಯ ಪದಕ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ.

ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌರ್ ಉಗುವ್ ವಿರುದ್ಧದ ಫೈನಲ್‌ನಲ್ಲಿ ರವಿ ಕುಮಾರ್ ದಾಹಿಯಾ ಹಿನ್ನಡೆಯನ್ನು ಅನುಭವಿಸಿದರು. ಮೊದಲ ಹಂತದಲ್ಲಿ 2-4 ಅಂತರದಿಂದ ಹಿನ್ನೆಡೆಯಲ್ಲಿದ್ದ ರವಿ ಕುಮಾರ್ ಬಳಿಕ 4-7 ಅಂತರದಿಂದ ಸೋಲು ಕಂಡರು. ಈ ಮೂಲಕ ರವಿ ಕುಮಾರ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ವಿಫಲವಾದರು. ಆದರೆ ಟೋಕಿಯೋ ಒಲಿಂಪಿಕಲ್ಸ್‌ನಲ್ಲಿ ಭಾರತಕ್ಕೆ ಎರಡನೇ ಬೆಳ್ಳಿ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದಕ್ಕೂ ಮುನ್ನ ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಈ ಸಾಧನೆಯೊಂದಿಗೆ ರವಿ ಕುಮಾರ್ ದಾಹಿಯ ಒಲಿಂಪಿಕ್ಸ್‌ನಲ್ಲಿ ರೆಸ್ಲಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಎರಡನೇ ಕ್ರೀಡಾಪಟು ಎನಿಸಿದ್ದಾರೆ. ಇದಕ್ಕೂ ಮುನ್ನ 2012ರ ಲಂಡನ್ ಒಲಿಂಪಿಕ್ಸ್‌ನ ರಸ್ಲಿಂಗ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಪುರುಷರ ರಸ್ಲಿಂಗ್‌ನಲ್ಲಿ ಭಾರತ ಪದಕ ಗೆದ್ದುಕೊಂಡಿದೆ.

ಫೈನಲ್ ಸ್ಪರ್ಧೆಯಲ್ಲಿ ಮೊದಲ ಹಂತದಲ್ಲಿ ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌರ್ ಉಗುವ್ ವಿರುದ್ಧ 2-4 ಅಂತರದಿಂದ ಹಿನ್ನೆಡೆ ಅನುಭವಿಸಿದ್ದರು. ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌರ್ ಉಗುವ್ ತಮಗಿದ್ದ ಮುನ್ನಡೆಯನ್ನು ಅಂತ್ಯದವರೆಗೂ ಕಾಯ್ದುಕೊಂಡಿದ್ದಲ್ಲದೆ ಹೆಚ್ಚು ಅಂಕವನ್ನು ಗಳಿಸಲು ಯಶಸ್ವಿಯಾದರು. ಈ ಮೂಲಕ ಭಾರತದ ಸ್ಪರ್ಧಿ ಅಂತಿಮ ಘಟ್ಟದಲ್ಲಿ ಸೋಲು ಕಾಣುವಂತಾಯಿತು.

ಇನ್ನು ಮತ್ತೊಂದು ಸ್ಪರ್ಧೆಯಲ್ಲಿ 86 ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಅವಕಾಶವಿತ್ತು. ಭಾರತದ ದೀಪಕ್ ಪೂನಿಯಾ ಕಂಚಿನ ಪದಕ್ಕಾಗಿ ಹೋರಾಟವನ್ನು ನಡೆಸಿದ್ದರು. ಸ್ಪರ್ಧೆಯಲ್ಲಿ ದೀಪಕ್ ಪೂನಿಯಾ ಕೊನೆಯ ಕೆಲವೇ ಸೆಕೆಂಡ್‌ಗಳವರೆಗೂ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಎದುರಾಳಿ ಮೇಲುಗೈ ಸಾಧಿಸಿ ದೀಪಕ್ ಪೂನಿಯಾ ಅವರ ಕಂಚಿನ ಪದಕದ ಕನಸಿಗೆ ತಣ್ಣೀರೆರಚಿದ್ದಾರೆ.

ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈಗ ಐದು ಪದಕಗಳನ್ನು ಗೆದ್ದುಕೊಂಡಿದೆ. ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಮೂರನೇ ಪದಕವಾಗಿ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಭಾರತದ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ ಗೆಲುವು ಸಾಧಿಸಿ ಇಂದು ನಾಲ್ಕನೇ ಪದಕವನ್ನು ಗೆದ್ದುಕೊಂಡಿತ್ತು. ಈಗ ರವಿ ಮತ್ತೊಂದು ಬೆಳ್ಳಿ ಪದಕವನ್ನು ಭಾರತದ ಮುಡಿಗೇರಿಸಿದ್ದಾರೆ. ಗುರುವಾರ ಸಂಜೆಯ ವೇಳೆಗೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಒಟ್ಟಾರೆ ಈ ಬಾರಿ ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದು 5 ಪದಕಗಳನ್ನು ಖಾತೆಗೆ ಹಾಕಿಕೊಂಡಿದೆ. ಪದಕ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದೆ.

ಶುಕ್ರವಾರ ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ್ಕಾಗಿ ಸೆಣೆಸಾಟವನ್ನು ನಡೆಸಲಿದೆ. ಶುಕ್ರವಾರ ಬೆಳಿಗ್ಗೆ ಗ್ರೇಟ್ ಬ್ರಿಟನ್ ವಿರುದ್ಧ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಐತಿಹಾಸಿಕ ಮಹಿಳೆಯ ಒಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡುವುದಲ್ಲದೆ ಮತ್ತೊಂದು ಪದಕವನ್ನು ಭಾರತದ ಖಾತೆಗೆ ಸೇರ್ಪಡೆಗೊಳಿಸಲಿದೆ.

Story first published: Thursday, August 5, 2021, 17:51 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X