ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ಯಾರಾಲಿಂಪಿಕ್ಸ್: ದ್ವಿತೀಯ ಪದಕ ಗೆದ್ದ ಚಿನ್ನದ ಹುಡುಗಿ ಅವನಿ ಲೇಖರ; ಭಾರತ ಗೆದ್ದ ಪದಕಗಳ ಸಂಖ್ಯೆ 12ಕ್ಕೇರಿಕೆ

Tokyo Paralympics: Avani Lekhara wins bronze in Womens 50M rifle 3P SH1 events

ಟೋಕಿಯೋ, ಸೆಪ್ಟೆಂಬರ್ 3: ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 12 ಕ್ಕೆ ಏರಿಕೆ ಕಂಡಿದೆ. ಸೆಪ್ಟೆಂಬರ್ 3ರ ಗುರುವಾರದಂದು ಭಾರತದ ಇಬ್ಬರು ಕ್ರೀಡಾಪಟುಗಳು ಪದಕಗಳನ್ನು ಗೆದ್ದಿದ್ದಾರೆ. ಬೆಳಿಗ್ಗೆ ನಡೆದ ಪುರುಷರ ಟಿ 64 ಹೈಜಂಪ್ ಫೈನಲ್ ಸುತ್ತಿನಲ್ಲಿ ವಿಶ್ವದ ಅತ್ಯುತ್ತಮ ಹೈಜಂಪ್ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ಪ್ರವೀಣ್ ಕುಮಾರ್ 2.07 ಮೀಟರ್ ಹೈಜಂಪ್ ಮಾಡುವುದರ ಮೂಲಕ ಭಾರತಕ್ಕೆ ಹನ್ನೊಂದನೇ ಪದಕವನ್ನು ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಂದುಕೊಟ್ಟಿದ್ದಾರೆ.

ಇದಾದ ಬಳಿಕ ಮಹಿಳೆಯರ 50 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ ಭಾಗವಹಿಸಿದ್ದ ಭಾರತದ ಕ್ರೀಡಾಪಟು ಅವನಿ ಲೇಖರ ಮೂರನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಬಾರಿಯ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದ ಅವನಿ ಲೇಖರ ಇದೀಗ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದ್ವಿತೀಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್

ಮಹಿಳೆಯರ 50 ಮೀಟರ್‌ ಏರ್ ರೈಫಲ್ ಶೂಟಿಂಗ್ 3 ಪೊಜಿಷನ್ ಫೈನಲ್ ಸುತ್ತಿನಲ್ಲಿ ಭಾಗವಹಿಸಿದ ಅವನಿ ಲೇಖರ 415 ಅಂಕಗಳನ್ನು ಪಡೆದು ಕೊಳ್ಳುವುದರ ಮೂಲಕ ತೃತೀಯ ಸ್ಥಾನ ಪಡೆದುಕೊಂಡು ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಪ್ರಸ್ತುತ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯನ್ನು ಕಂಡಿದೆ.

ಈ ಹಿಂದೆ ಇದೇ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆರಂಭದಲ್ಲಿ ಮಹಿಳೆಯರ 10 ಮೀಟರ್‌ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ ಭಾಗವಹಿಸಿದ್ದ ಅವನಿ ಲೇಖರ 249.6 ಅಂಕಗಳನ್ನು ಗಳಿಸುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

ಪ್ಯಾರಾಲಂಪಿಕ್ಸ್: ರಜತ ಗೆದ್ದ ಪ್ರವೀಣ್ ಕುಮಾರ್; 11ಕ್ಕೇರಿದ ಪದಕಗಳ ಸಂಖ್ಯೆಪ್ಯಾರಾಲಂಪಿಕ್ಸ್: ರಜತ ಗೆದ್ದ ಪ್ರವೀಣ್ ಕುಮಾರ್; 11ಕ್ಕೇರಿದ ಪದಕಗಳ ಸಂಖ್ಯೆ

ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 12 ಪದಕಗಳನ್ನು ಗೆದ್ದಿದ್ದು ಇದರಲ್ಲಿ 2 ಚಿನ್ನದ ಪದಕಗಳು ಸಹ ಸೇರಿವೆ. ಈ ಸ್ಪರ್ಧೆಯಲ್ಲಿ ಭಾರತದ ಪರ ಪದಕ ಗೆದ್ದಿರುವ ಕ್ರೀಡಾಪಟುಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ..

1. ಭಾವಿನ ಪಟೇಲ್ - ಬೆಳ್ಳಿ ಪದಕ - ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4

2. ನಿಶಾದ್ ಕುಮಾರ್ - ಬೆಳ್ಳಿ ಪದಕ - ಪುರುಷರ ಹೈಜಂಪ್ ಟಿ 47

3. ಅವನಿ ಲೇಖರ - ಚಿನ್ನದ ಪದಕ - ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1

4. ದೇವೇಂದ್ರ ಜಜಾರಿಯಾ - ಬೆಳ್ಳಿ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46

5. ಸುಂದರ್ ಸಿಂಗ್ ಗುರ್ಜಾರ್ - ಕಂಚಿನ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46

6. ಯೋಗೀಶ್ ಕಠುನಿಯಾ - ಬೆಳ್ಳಿ ಪದಕ - ಪುರುಷರ ಡಿಸ್ಕಸ್ ಥ್ರೋ ಎಫ್ 56

7. ಸುಮಿತ್ ಆಂಟಿಲ್ - ಚಿನ್ನದ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 64

8. ಸಿಂಗರಾಜ್ ಅಧಾನ - ಕಂಚಿನ ಪದಕ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್ ಎಚ್ 1

9. ಮರಿಯಪ್ಪನ್ ತಂಗವೇಲು - ಬೆಳ್ಳಿ ಪದಕ - ಪುರುಷರ ಹೈ ಜಂಪ್ ಟಿ 42

10. ಶರದ್ ಕುಮಾರ್ - ಕಂಚಿನ ಪದಕ - ಪುರುಷರ ಹೈಜಂಪ್ ಟಿ 42

11. ಪ್ರವೀಣ್ ಕುಮಾರ್ - ಬೆಳ್ಳಿ ಪದಕ - ಪುರುಷರ ಎತ್ತರ ಜಿಗಿತ ಟಿ 64

12. ಅವನಿ ಲೇಖರ - ಕಂಚಿನ ಪದಕ - ಮಹಿಳೆಯರ 50 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1

Story first published: Friday, September 3, 2021, 12:54 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X