ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Tokyo Paralympics: ಜಾವೆಲಿನ್ ಥ್ರೋನಲ್ಲಿ ಚಿನ್ನದೊಂದಿಗೆ ವಿಶ್ವದಾಖಲೆ ಬರೆದ ಸುಮಿತ್ ಅಂತಿಲ್

Tokyo Paralympics 2020: Sumit Antil wins the gold medal in mens Javelin F64

ಟೋಕಿಯೋ: ಟೋಕಿಯೋ ಪ್ಯಾರಾಲಂಪಿಕ್ಸ್ ಪುರುಷರ ಜಾವೆಲಿನ್ ಎಫ್‌-64 ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಥ್ಲೀಟ್ ಸುಮಿತ್ ಅಂತಿಲ್ ದೇಶಕ್ಕೆ ಮತ್ತೊಂದು ಬಂಗಾರದ ಪದಕ ಗೆದ್ದಿದ್ದಾರೆ. 68.55 ಮೀಟರ್ ದೂರದ ಸಾಧನೆಯೊಂದಿಗೆ ಸುಮಿತ್ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೇ ವಿಭಾಗದಲ್ಲಿ ಸುಮಿತ್ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ ಏಳಕ್ಕೆ ಏರಿದೆ.

ಐಪಿಎಲ್ 2021: ಆರ್‌ಸಿಬಿಯ ಪ್ರಮುಖ ಆಲ್‌ರೌಂಡರ್ ಟೂರ್ನಿಯಿಂದ ಔಟ್!ಐಪಿಎಲ್ 2021: ಆರ್‌ಸಿಬಿಯ ಪ್ರಮುಖ ಆಲ್‌ರೌಂಡರ್ ಟೂರ್ನಿಯಿಂದ ಔಟ್!

ಸೋಮವಾರ (ಆಗಸ್ಟ್ 30) ನಡೆದ ಪುರುಷರ ಜಾವೆಲಿನ್ ಥ್ರೋ ಎಫ್‌-64 ವಿಭಾಗದ ಸ್ಪರ್ಧೆಯಲ್ಲಿ 68.55 ಮೀಟರ್ ದೂರದ ಸಾಧನೆಯೊಂದಿಗೆ ಸುಮಿತ್ ಅಂತಿಲ್ ಬಂಗಾರ ಗೆದ್ದಿದ್ದಾರೆ. ವಿಶೇಷವೆಂದರೆ ಒಂದೇ ಸ್ಪರ್ಧೆಯಲ್ಲಿ ಸುಮಿತ್ ಬರೋಬ್ಬರಿ ಮೂರು ಬಾರಿ ವಿಶ್ವ ದಾಖಲೆ ನಿರ್ಮಿಸಿದಂತಾಗಿದೆ.

ಒಂದೇ ಕ್ರೀಡಾಕೂಟದಲ್ಲಿ ಮೂರು ಬಾರಿ ವಿಶ್ವ ದಾಖಲೆ

ಒಂದೇ ಕ್ರೀಡಾಕೂಟದಲ್ಲಿ ಮೂರು ಬಾರಿ ವಿಶ್ವ ದಾಖಲೆ

ಸುಮಿತ್ ಎಸೆದಿದ್ದ ಮೊದಲ ಎಸೆದ 66.95 ಮೀಟರ್ ಸಾಧನೆ ಮೊದಲು ವಿಶ್ವ ದಾಖಲೆಗೆ ಕಾರಣಾವಾಗಿತ್ತು. ದ್ವಿತೀಯ ಯತ್ನದಲ್ಲಿ 68.08 ಮೀಟರ್ ದೂರ ಸಾಧನೆ ಮತ್ತೆ ವಿಶ್ವ ದಾಖಲೆಗೆ ಕಾರಣವಾಗಿತ್ತು. ಅದಾಗಿ ಕೊನೇಯ ಪ್ರಯತ್ನದಲ್ಲಿ 68.55 ಮೀಟರ್ ಸಾಧನೆಯೊಂದಿಗೆ ಮತ್ತೆ ಮೂರನೇ ಬಾರಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 23ರ ಹರೆಯದ ಹರ್ಯಾಣದ ಸೋನೀಪತ್‌ನವರಾದ ಸುಮಿತ್ ಅಂತಿಲ್‌ಗೆ ಒಂದು ಕಾಲಿಲ್ಲ. 2015ರಲ್ಲಿ ನಡೆದ ವಾಹನ ಅಪಘಾತದಲ್ಲಿ ಸುಮಿತ್ ತನ್ನ ಕಾಲು ಕಳೆದುಕೊಂಡಿದ್ದರು. ಜಾವೆಲಿನ್ ಥ್ರೋ ಎಫ್‌-64 ವಿಭಾಗದಲ್ಲಿ ಐದನೇ ಮತ್ತು ಕೊನೇಯ ಪ್ರಯತ್ನದಲ್ಲಿ 68.55ನೇ ದೂರದೊಂದಿಗೆ ಸುಮಿತ್ ಬಂಗಾರ ಗೆದ್ದರಲ್ಲದೆ, ವಿಶ್ವ ದಾಖಲೆಯೂ ನಿರ್ಮಿಸಿದ್ದಾರೆ.

ತನ್ನದೇ ಹೆಸರಿನ ದಾಖಲೆ ಹಿಂದಿಕ್ಕಿದ ಸುಮಿತ್

ತನ್ನದೇ ಹೆಸರಿನ ದಾಖಲೆ ಹಿಂದಿಕ್ಕಿದ ಸುಮಿತ್

ಸುಮಿತ್ ಅಂತಿಲ್ ಇದಕ್ಕೂ ಮುನ್ನವೂ ವಿಶ್ವ ದಾಖಲೆ ಬರೆದಿದ್ದರು. 62.88 ಮೀಟರ್ ದೂರದ ಸಾಧನೆಯೊಂದಿಗೆ ಹಿಂದೆ ಸುಮಿತ್ ವಿಶ್ವ ದಾಖಲೆಗಾಗಿ ಗಮನ ಸೆಳೆದಿದ್ದರು. ಈಗ 68.55 ಮೀಟರ್ ಸಾಧನೆಯೊಂದಿಗೆ ತನ್ನದೇ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. ಸೋಮವಾರ ಫೈನಲ್‌ ವಿಭಾಗದ ಸ್ಪರ್ಧೆಯ ವೇಳೆ ಸುಮಿತ್ ಕ್ರಮವಾಗಿ 66.95, 68.08, 65.27, 66.71, 68.55 ಮೀಟರ್ ದೂರ ಡಿಸ್ಕಸ್ ಎಸೆದಿದ್ದರು. ಆಸ್ಟ್ರೇಲಿಯಾದ ಮಿಚಲ್ ಬುರಿಯನ್ (66.29 ಮೀಟರ್) ಮತ್ತು ಶ್ರೀಲಂಕಾದ ದುವಾಕ್ ಕೊಡಿತುವಕ್ಕು 65.61 ಮೀಟರ್ ಸಾಧನೆಯೊಂದಿಗೆ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನದ ಪದಕ ಗೆದ್ದರು.

ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸಿದ್ದ ಅಥ್ಲೀಟ್‌

ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸಿದ್ದ ಅಥ್ಲೀಟ್‌

ಜಾವೆಲಿನ್ ಥ್ರೋ ಎಫ್‌-64 ವಿಭಾಗವೆಂದರೆ ಅದು ಕಾಲಿನ ಅಂಗವೈಕಲ್ಯ ಇರುವ ಅಥ್ಲೀಟ್‌ಗಳ ಸ್ಪರ್ಧಾ ವಿಭಾಗ. ದೆಹಲಿಯ ರಾಮ್‌ಜಾಸ್ ಕಾಲೇಜ್‌ನ ವಿದ್ಯಾರ್ಥಿಯಾಗಿರುವ ಸುಮಿತ್, ಕಾಲು ಅಪಘಾತಕ್ಕೀಡಾಗುವ ಮುನ್ನ ಸಾಮಾನ್ಯರಂತೆ ರಸ್ಲರ್ ಆಗಿದ್ದರು. ಆದರೆ ಅಪಘಾತ ಆದ ಬಳಿಕ ಸುಮಿತ್ ಪ್ಯಾರಾ ಎಸೆತದ ವಿಭಾಗದಲ್ಲಿ ಸ್ಪರ್ಧಿಸಲಾರಂಭಿಸಿದ್ದರು. ಅಂದ್ಹಾಗೆ ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ ಜೊತೆ ಕೂಡ ಸುಮಿತ್ ಸ್ಪರ್ಧಿಸಿದ್ದರು ಎಂದರೆ ನೀವು ನಂಬಲೇಬೇಕು. 2018ರಲ್ಲಿ ಮಾರ್ಚ್‌ನಲ್ಲಿ ಪಾಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ ಸೀರೀಸ್‌3ನಲ್ಲಿ ಸುಮಿತ್ ಮತ್ತು ನೀರಜ್ ಒಂದೇ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ನೀರಜ್ 88.07 ಮೀಟರ್ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರೆ, ಸುಮಿತ್ 66.43 ಮೀಟರ್ ಸಾಧನೆ ತೋರಿದ್ದರು.

Story first published: Tuesday, August 31, 2021, 1:14 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X