ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

30 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ WWE ಸ್ಟಾರ್ ‌ಟೇಕರ್

Undertakers Final Farewell at WWE Survivor Series 2020

ವಾಷಿಂಗ್ಟನ್: ನೀವು ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದವರಾದರೆ ಅಂಡರ್‌ಟೇಕರ್ ಹೆಸರು ಖಂಡಿತಾ ಕೇಳಿರುತ್ತೀರಿ. ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಕ್ಷೇತ್ರದಲ್ಲಿ ಅಂಡರ್‌ಟೇಕರ್ ಹೆಸರು ಅಷ್ಟು ಜನಪ್ರಿಯ. ಅಬಾಲ ವೃದ್ಧರಿಂದ ಹಿಡಿದು ಎಲ್ಲರೂ ಅಂಡರ್‌ಟೇಕರ್ ಸೆಣಸಾಟವನ್ನು ಎಂಜಾಯ್ ಮಾಡಿದ್ದಿದೆ. WWE ರಿಂಗ್‌ನಲ್ಲಿ ನಮ್ಮೆಲ್ಲರನ್ನೂ ಸುಮಾರು 30 ವರ್ಷಗಳ ಕಾಲ ರಂಜಿಸಿದ್ದ ಅಂಡರ್‌ಟೇಕರ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ

ನವೆಂಬರ್‌ 22ರಂದು ನಡೆದ WWE ಸರ್ವೈವರ್ ಸೀರೀಸ್‌ನಲ್ಲಿ ಅಂಡರ್‌ಟೇಕರ್ ವಿದಾಯ ಹೇಳಿದ್ದಾರೆ. 55ರ ಹರೆಯದ ಅಂಡರ್‌ಟೇಕರ್ ನಿಜವಾದ ಹೆಸರು ಮಾರ್ಕ್ ವಿಲಿಯಂ ಕ್ಯಾಲವೇ. ಆದರೆ ಅಮೆರಿಕಾದ ಈ ರಸ್ಲಿಂಗ್ ದಂತಕತೆ ಡೆಡ್‌ ಮ್ಯಾನ್, ಅಂಡರ್‌ಟೇಕರ್, ದ ಫಿನಾಮ್ ಎಂಬಿತ್ಯಾದಿ ಹೆಸರುಗಳಿಂದ ರಿಂಗ್‌ನಲ್ಲಿ ಖ್ಯಾತರಾಗಿದ್ದರು.

ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲುಬೇಕಾದ ಅಂಶವನ್ನು ಹೇಳಿದ ಹರ್ಭಜನ್ ಸಿಂಗ್ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲುಬೇಕಾದ ಅಂಶವನ್ನು ಹೇಳಿದ ಹರ್ಭಜನ್ ಸಿಂಗ್

ಅಸಲಿಗೆ ಅಂಡರ್‌ಟೇಕರ್ ಕಡೇಯ ಪಂದ್ಯ ಆಡಿದ್ದು ಕಳೆದ ಜೂನ್‌ನಲ್ಲಿ ನಡೆದಿದ್ದ ರಸಲ್‌ಮೇನಿಯಾ 36ನಲ್ಲಿ . ಆವತ್ತು ಎಜೆ ಸ್ಟೈಲ್ ವಿರುದ್ಧ ಕಾದಾಡಿದ್ದರು. ವಿದಾಯದ ವೇಳೆ ಅಂಡರ್‌ಟೇಕರ್ ಕಾದಾಟಕ್ಕಿಳಿಯಲಿಲ್ಲ.

ವಿದಾಯಕ್ಕೆ ವಿಶೇಷ ಮೆರಗು

ವಿದಾಯಕ್ಕೆ ವಿಶೇಷ ಮೆರಗು

ಅಂಡರ್‌ಟೇಕರ್ ವಿದಾಯದ ವೇಳೆ ಇಡೀ ಸ್ಟೇಡಿಯಂಗೆ ವೀಕ್ಷಕರಿದ್ದಂತೆ ಮೆರಗು ನೀಡಲಾಗಿತ್ತು. ಥಂಡರ್ಡೊಮ್ ಮೂಲಕ ವೀಕ್ಷಕರು ಸ್ಟೇಡಿಯಂನಲ್ಲೇ ಕೂತು ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಟೇಕರ್ ವಿದಾಯದ ವೇಳೆ ಸ್ಟಾರ್‌ ರಸ್ಲರ್‌ಗಳ ಬಳಗವೇ ಸಾಕ್ಷಿಯಾಗಿತ್ತು.

ಸ್ಟಾರ್‌ಗಳು ಭಾಗಿ

ಅಂಡರ್‌ಟೇಕರ್ ವಿದಾಯಕೂಟವನ್ನು ಡಬ್ಲ್ಯೂಡಬ್ಲ್ಯೂ ಅಧ್ಯಕ್ಷ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನ್ಸ್ ಮಿಕ್‌ಮೆಹಾನ್ ನಡೆಸಿಕೊಟ್ಟರು. ಬಿಗ್ ಶೋ, ಜೆಬಿಎಲ್, ಜೆಫ್ ಹಾರ್ಡಿ, ಮಿಕ್ ಫೋಲೆ, ದಿ ಗಾಡ್ಫಾದರ್, ದಿ ಗಾಡ್ವಿನ್ಸ್, ಸವಿಯೊ ವೆಗಾ, ರಿಕಿಶಿ, ಕೆವಿನ್ ನ್ಯಾಶ್, ರಿಕ್ ಫ್ಲೇರ್, ಬೂಕರ್ ಟಿ, ಶಾನ್ ಮೈಕೆಲ್ಸ್, ಟ್ರಿಪಲ್ ಎಚ್ ಮತ್ತು ಕೇನ್ ಕಾರ್ಯಕ್ರಮದಲ್ಲಿ ಭಾಗಿಯಾದರು.

ಟೇಕರ್ ಭಾವುಕ ನುಡಿ

'ನಾನು ಅನೇಕ ವರ್ಷಗಳಿಂದ ಈ ರಿಂಗ್‌ಗೆ ನಿಧಾನಕ್ಕೆ ಬಂದು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಜನರನ್ನು ರೆಸ್ಟ್ ಇನ್ ಪೀಸ್‌ನಲ್ಲಿರುವಂತೆ ಮಾಡಿದ್ದೇನೆ. ಈಗ ನನ್ನ ಸಮಯ ಬಂದಿದೆ. ಅಂಡರ್‌ಟೇಕರ್‌ನನ್ನು ರೆಸ್ಟ್ ಇನ್ ಪೀಸ್‌ನಲ್ಲಿಡಲು ನನ್ನ ಸಮಯ ಬಂದಿದೆ,' ಎಂದು ವಿದಾಯದ ವೇಳೆ ಅಂಡರ್‌ಟೇಕರ್ ಭಾವುರಾಗಿ ನುಡಿದರು.

ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟು

ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟು

ಟೆಕ್ಸಾಸ್ ಮೂಲದ ಮಾರ್ಕ್ ವಿಲಿಯಂ ಅಲಿಯಾಸ್ ಅಂಡರ್ ಟೇಕರ್ 6 ಅಡಿ10 ಇಂಚು ಎತ್ತರ, 136 ಕೆಜಿ ತೂಕುವ ದೈತ್ಯ. ರಿಂಗ್ ನಲ್ಲಿ ಮಾರಣಾಂತಿಕ ಪೆಟ್ಟು ತಿಂದು ಸಾಯುವ ಸ್ಥಿತಿ ತಲುಪಿದರೂ ಎದ್ದು ಬಡಿದಾಡುವ ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟುವೀತ ಎಂಬ ಖ್ಯಾತಿ ಟೇಕರ್‌ಗಿದೆ. 1984ರಿಂದಲೇ ಡಬ್ಲ್ಯೂಡಬ್ಲ್ಯೂಇ ವೃತ್ತಿ ಬದುಕಿಗಿಳಿದಿದ್ದ ಅಂಡರ್ ಟೇಕರ್ ಬಹಳಷ್ಟು ಡಬ್ಲ್ಯೂಡಬ್ಲ್ಯೂಇ ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ಗೆದ್ದಿದ್ದಾರೆ.

Story first published: Monday, November 23, 2020, 13:45 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X