ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಅಥ್ಲೆಟಿಕ್ಸ್‌ ನಲ್ಲಿ ಕೊಡಗಿನ ಯುವತಿಯ ನೂತನ ದಾಖಲೆ

By Coovercolly Indresh
Unnathi Ayyappa created new record in Assam National Athletics

ಮಡಿಕೇರಿ, ಫೆಬ್ರವರಿ 10: ಪುಟ್ಟ ಪ್ರವಾಸೀ ಜಿಲ್ಲೆ ಕೊಡಗು ದೇಶಕ್ಕೆ ಸಾವಿರಾರು ಕ್ರೀಡಾಪಟುಗಳನ್ನೂ ವೀರ ಯೋಧರನ್ನೂ ಕೊಡುಗೆಯಾಗಿ ನೀಡಿದೆ. ಇದೀಗ ಕೊಡಗಿನ ಯುವತಿಯೊಬ್ಬಳು ರಾಷ್ಟ್ರಮಟ್ಟದಲ್ಲಿ ನೂತನ ದಾಖಲೆ ನಿರ್ಮಿಸುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ್ದಾಳೆ.

ಎಸ್‌ಜಿ ಟೆಸ್ಟ್ ಚೆಂಡುಗಳ ಗುಣಮಟ್ಟ ಖುಷಿ ನೀಡಿಲ್ಲ: ವಿರಾಟ್ ಕೊಹ್ಲಿಎಸ್‌ಜಿ ಟೆಸ್ಟ್ ಚೆಂಡುಗಳ ಗುಣಮಟ್ಟ ಖುಷಿ ನೀಡಿಲ್ಲ: ವಿರಾಟ್ ಕೊಹ್ಲಿ

ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾಳೆ. ಫೆಬ್ರವರಿ 8 ರಂದು 80 ಮೀಟರ್ ಹರ್ಡಲ್ಸ್ ಹಾಗೂ ಫೆಬ್ರವರಿ 9 ರಂದು ನಡೆದ 300 ಮೀಟರ್ ಹರ್ಡಲ್ಸ್‌ನಲ್ಲಿ ಉನ್ನತಿ ಹೊಸ ದಾಖಲೆ ಮಾಡಿದ್ದಾಳೆ.

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಉನ್ನತಿ ಅಯ್ಯಪ್ಪ 80 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ 11.50 ಸೆಕೆಂಡ್ಸ್‌ನಲ್ಲಿ ಗುರಿ ತಲುಪುವ ಮೂಲಕ ನೂತನ ದಾಖಲೆ ಸೃಷ್ಟಿಸಿ, ಚಿನ್ನದ ಪದಕ ಪಡೆದುಕೊಂಡಿದ್ದಾಳೆ. 300 ಮೀಟರ್ಸ್ ಹರ್ಡಲ್ಸ್‌ನಲ್ಲೂ 40.11 ಸೆಕೆಂಡ್‌ನಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಗಳಿಸಿದ್ದಾಳೆ.

2ನೇ ಟೆಸ್ಟ್ ಪಂದ್ಯದಲ್ಲಿ ಕುಲ್‌ದೀಪ್ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ ಗವಾಸ್ಕರ್2ನೇ ಟೆಸ್ಟ್ ಪಂದ್ಯದಲ್ಲಿ ಕುಲ್‌ದೀಪ್ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ ಗವಾಸ್ಕರ್

16 ವರ್ಷ ವಯೋಮಿತಿಯೊಳಗಿನ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಉನ್ನತಿ ಈ ಸಾಧನೆ ಮೂಲಕ ಗಮನ ಸೆಳೆದಿದ್ದಾಳೆ. ಕೊಡಗಿನವರಾದ ಮಾಜಿ ಕ್ರೀಡಾಪಟು ಡಬ್ಬಲ್ ಒಲಿಂಪಿಯನ್ ಖ್ಯಾತಿಯ ಬೊಳ್ಳಂಡ ಪ್ರಮೀಳಾ ಹಾಗೂ ಅಂತರರಾಷ್ಟ್ರೀಯ ಅಥ್ಲೀಟ್ ಪ್ರಸ್ತುತ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಆಗಿರುವ ಬೊಳ್ಳಂಡ ಅಯ್ಯಪ್ಪ ದಂಪತಿಯ ಪುತ್ರಿಯಾಗಿರುವ ಉನ್ನತಿ ತಾಯಿಯಂತೆ ಕ್ರೀಡೆಯಲ್ಲಿ ಸಾಧನೆ ತೋರುತ್ತಿದ್ದಾಳೆ.

ಈ ಹಿಂದೆ 1979ರಲ್ಲಿ ಭಾರತದ ಹೆಸರಾಂತ ಕ್ರೀಡಾ ತಾರೆ ಪಿ.ಟಿ. ಉಷಾ ಅವರು 16 ವರ್ಷದೊಳಗಿನ ಅಥ್ಲೆಟಿಕ್ಸ್ ಕೂಟದಲ್ಲಿ ಈ ವಿಭಾಗದಲ್ಲಿ 12.2 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು 1985ರಲ್ಲಿ ಕರ್ನಾಟಕದ ಎ.ಎನ್. ರೇಖಾ ಸರಿಗಟ್ಟಿದ್ದರು. ಇದೀಗ ಉನ್ನತಿ 11.50 ಸೆಕೆಂಡ್ಸ್ನಲ್ಲಿ ಗುರಿ ತಲುಪಿ ಹೊಸ ಇತಿಹಾಸ ಸೃಷ್ಟಿಸಿದ್ದಾಳೆ.

ಫೆಬ್ರವರಿ 10ರಂದು ನಡೆದ 300 ಮೀಟರ್ ಸ್ಪರ್ಧೆಯಲ್ಲಿ 40.11 ಸೆಕೆಂಡ್‌ನಲ್ಲಿ ಗುರಿ ತಲುಪಿ ಪಶ್ಚಿಮ ಬಂಗಾಳದ ಯುವತಿಯ ಹೆಸರಲ್ಲಿದ್ದ ದಾಖಲೆಯನ್ನು ಉನ್ನತಿ ಮುರಿದಿದ್ದಾಳೆ. ಈ ಹಿಂದೆ ಉನ್ನತಿಯ ತಾಯಿ ಪ್ರಮೀಳಾ (ಜಿ.ಜಿ. ಪ್ರಮೀಳಾ) ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಕ್ರೀಡಾಪಟುವಾಗಿದ್ದಾರೆ. ಉನ್ನತಿಗೆ ಆಕೆಯ ತಂದೆ ಅಯ್ಯಪ್ಪ ಅವರೇ ತರಬೇತಿ ನೀಡಿರುವುದು ವಿಶೇಷವಾಗಿದೆ.

Story first published: Wednesday, February 10, 2021, 14:32 [IST]
Other articles published on Feb 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X