ಬೆಂಗಳೂರಿಗೆ ಬಂದ ಯುಎಸ್ ಕಿಡ್ಸ್ ಗಾಲ್ಫ್ ಇಂಡಿಯಾ ಟೂರ್

ಬೆಂಗಳೂರು, ಜನವರಿ 04: ವಿಶ್ವದ ಅತಿದೊಡ್ಡ ಜೂನಿಯರ್ ಗಾಲ್ಫ್ ಫೌಂಡೇಷನ್ ಎನಿಸಿಕೊಂಡಿರುವ ಯುಎಸ್ ಕಿಡ್ಸ್ ಗಾಲ್ಫ್, ಇದೇ ಮೊದಲ ಬಾರಿಗೆ ಯುಎಸ್ ಕಿಡ್ಸ್ ಗಾಲ್ಫ್ ಇಂಡಿಯಾ ಟೂರ್ ಮೂಲಕ ಭಾರತಕ್ಕೆ ಪ್ರವೇಶ ಮಾಡಿದೆ.

ಈಗಾಗಲೇ ಗುರುಗ್ರಾಮ ಹಾಗೂ ಕೋಲ್ಕತದಲ್ಲಿ ಯಶಸ್ವಿಯಾಗಿ ಟೂರ್ನಮೆಂಟ್‍ಗಳು ನಡೆದಿದ್ದು, ಮುಂದಿನ ಟೂರ್ನಿ ಬೆಂಗಳೂರಿನಲ್ಲಿ ಜನವರಿ 9 ರಂದು ಈಗಲ್ಟನ್ ಗಾಲ್ಫ್ ರೆಸಾರ್ಟ್‍ನಲ್ಲಿ ನಡೆಯಲಿದೆ.

2018 & 19ರ ಪದಾರ್ಪಣಾ ಆವೃತ್ತಿಯ 8 ಟೂರ್ನಮೆಂಟ್‍ಗಳು ದೇಶದ ಆರು ನಗರಗಳಲ್ಲಿ ನಡೆಯುತ್ತಿವೆ. ದೆಹಲಿಯ ರಾಷ್ಟ್ರ ರಾಜಧಾನಿ ವಲಯದಲ್ಲಿ ಮೂರು ಟೂರ್ನಿಗಳು ನಡೆದರೆ, ಕೋಲ್ಕತ, ಬೆಂಗಳೂರು, ಹೈದರಾಬಾದ್, ಚಂಡೀಗಢ ಹಾಗೂ ಪುಣೆಯ ಗಾಲ್ಫ್ ಕೋರ್ಸ್‍ಗಳಲ್ಲಿ ಉಳಿದ ಟೂರ್ನಮೆಂಟ್‍ಗಳು ನಡೆಯಲಿವೆ.

ಕಳೆದ 20 ವರ್ಷಗಳಲ್ಲಿ ಯುಎಸ್ ಕಿಡ್ಸ್ ಗಾಲ್ಫ್, ವಿಶ್ವದ ಅಗ್ರ ಜೂನಿಯರ್ ಗಾಲ್ಫ್ ಅಭಿವೃದ್ಧಿ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ. ಅದಲ್ಲದೆ, ತನ್ನದೇ ಕೆಲ ವಿಭಾಗಗಳ ಮೂಲಕ ವಿಶ್ವದ 10 ಲಕ್ಷಕ್ಕೂ ಅಧಿಕ ಯುವ ಆಟಗಾರರ ಕ್ರೀಡಾ ಜೀವನವನ್ನು ರೂಪಿಸುವಲ್ಲಿ ನೆರವಾಗಿದೆ.

2018 & 19ರ ದ ಯುಎಸ್ ಕಿಡ್ಸ್ ಗಾಲ್ಫ್ ಇಂಡಿಯಾ ಟೂರ್, ಬಾಲಕರ ವಿಭಾಗದಲ್ಲಿ 6 ರಿಂದ 18 ವಯೋಮಿತಿ ವಿಭಾಗಗಳಲ್ಲಿ ನಡೆದರೆ, ಬಾಲಕಿಯರಲ್ಲಿ 7 ರಿಂದ 18 ವಯೋಮಿತಿ ವಿಭಾಗದವರೆಗೆ ನಡೆಯಲಿದೆ. ದ ಯುಎಸ್ ಕಿಡ್ಸ್ ಗಾಲ್ಫ್ ಇಂಡಿಯಾ ಟೂರ್, ಶ್ರೇಯಾಂಕ ಅಂಕಗಳನ್ನೂ ಹೊಂದಿದ್ದು, 8 ಟೂರ್ನಮೆಂಟ್‍ಗಳ ಪೈಕಿ 4ರಲ್ಲಿ ಆಡುವ ಜೂನಿಯರ್ ಗಾಲ್ಫರ್ ಗಳಿಗೆ ಯುಎಸ್ ಕಿಡ್ಸ್ ವಿಶ್ವ ಚಾಂಪಿಯನ್‍ಷಿಪ್ ಹಾಗೂ ಯುಎಸ್ ಕಿಡ್ಸ್ ವಿಶ್ವ ಚಾಂಪಿಯನ್‍ಷಿಪ್ ಹಾಗೂ ಯುಎಸ್ ಕಿಡ್ಸ್ ಟೀನ್ ವಿಶ್ವ ಚಾಂಪಿಯನ್‍ಷಿಪ್‍ಗೆ ಅರ್ಹತೆ ಪಡೆಯಬಹುದಾಗಿದೆ.

ಪ್ರತಿಷ್ಠಿತ ಪಿಜಿಎ ಚಾಂಪಿಯನ್‍ಷಿಪ್, ರೈಡರ್ ಕಪ್ ಹಾಗೂ ಯುಎಸ್ ಓಪನ್‍ಗೆ ಆತಿಥ್ಯವಹಿಸಿಕೊಂಡಿರುವ ಪೈನ್‍ಹರ್ಸ್ಟ್ ನಲ್ಲಿ ಪ್ರತಿವರ್ಷ ಯುಎಸ್ ಕಿಡ್ಸ್ ವಿಶ್ವ ಚಾಂಪಿಯನ್‍ಷಿಪ್ ಹಾಗೂ ಯುಎಸ್ ಕಿಡ್ಸ್ ಟೀನ್ ವಿಶ್ವ ಚಾಂಪಿಯನ್‍ಷಿಪ್ ನಡೆಯುತ್ತಿದೆ.

2019ರ ಯುಎಸ್ ಕಿಡ್ಸ್ ಯುರೋಪಿಯನ್ ಚಾಂಪಿಯನ್‍ಷಿಪ್, ಸ್ಕಾಟ್ಲೆಂಡ್‍ನ ವಿಶ್ವ ಪ್ರಸಿದ್ಧ ಈಸ್ಟ್ ಲೋಥಿಯನ್ ಕೋರ್ಸ್, ಲಾಂಗ್ನಿಡ್ರಿ ಗಾಲ್ಫ್ ಕ್ಲಬ್, ರಾಯಲ್ ಮುಸೆಲ್‍ಬರ್ಗ್ ಗಾಲ್ಫ್ ಕ್ಲಬ್ ಹಾಗೂ ಗ್ಲೆನ್ ಗಾಲ್ಫ್ ಕ್ಲಬ್‍ಗಳಲ್ಲಿ ನಡೆಯಲಿದೆ. ಬಾಲಕ ಹಾಗೂ ಬಾಲಕಿಯರ 15 ರಿಂದ 18 ವಯೋಮಿತಿಯ ಟೂರ್ನಿಗಳು ದಿ ರಿನೆಸಾನ್ಸ್ ಕ್ಲಬ್‍ನಲ್ಲಿ ನಡೆಯಲಿದೆ. ಇದೇ ಕೋರ್ಸ್‍ಗಳಲ್ಲಿ 2019ರ ಸ್ಕಾಟಿಷ್ ಓಪನ್ ಹಾಗೂ ಲೇಡೀಸ್ ಸ್ಕಾಟಿಷ್ ಓಪನ್ ನಡೆಯುವುದು ನಿಗದಿಯಾಗಿದೆ.

ಭಾರತದ ಆರು ಅತ್ಯುತ್ತಮ ಗಾಲ್ಫ್ ಕೋರ್ಸ್‍ಗಳಲ್ಲಿ ಯುಎಸ್ ಕಿಡ್ಸ್ ಗಾಲ್ಫ್ ಇಂಡಿಯಾ ಟೂರ್ ನಡೆಯಲಿದೆ. ಗುರುಗ್ರಾಮದ ಕ್ಲಾಸಿಕ್ ಗಾಲ್ಫ್ ಮತ್ತು ಕಂಟ್ರೀ ಕ್ಲಬ್, ಕೋಲ್ಕತದ ಟಾಲಿಗುಂಗ್ ಕ್ಲಬ್, ಬೆಂಗಳೂರಿನ ಈಗಲ್ಟನ್ ಗಾಲ್ಫ್ ರೆಸಾರ್ಟ್, ಹೈದರಾಬಾದ್‍ನ ಬೌಲ್ಡರ್ ಹಿಲ್ಸ್ ಗಾಲ್ಫ್ ಮತ್ತು ಕಂಟ್ರೀ ಕ್ಲಬ್ ಮತ್ತು ಚಂಡೀಗಢ ಗಾಲ್ಫ್ ಕ್ಲಬ್ ಹಾಗೂ ಪುಣೆಯ ಪೂನಾ ಕ್ಲಬ್ ಗಾಲ್ಫ್ ಕೋರ್ಸ್‍ನಲ್ಲಿ ಈ ಟೂರ್ನಿ ನಡೆಯಲಿದೆ. ಈ ಕೋರ್ಸ್‍ಗಳು ಈಗಾಗಲೇ ಸಾಕಷ್ಟು ರಾಷ್ಟ್ರೀಯ ಹಾಗೂ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಾಲ್ಫ್ ಟೂರ್ನಮಂಟ್‍ಗಳಿಗೆ ಆತಿಥ್ಯ ವಹಿಸಿಕೊಂಡಿವೆ.

For Quick Alerts
ALLOW NOTIFICATIONS
For Daily Alerts
Story first published: Friday, January 4, 2019, 17:32 [IST]
Other articles published on Jan 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X