ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

11 ಒಲಿಂಪಿಕ್ ಪದಕಗಳೊಂದಿಗೆ ದಾಖಲೆ ಬರೆದ ಆಲಿಸನ್ ಫೆಲಿಕ್ಸ್!

USAs Allyson Felix won total of 11 medals in Olympics

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಮಹಿಳಾ ವಿಭಾಗದ 4X400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸತತ ಏಳನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಬಂಗಾರ ಗೆದ್ದಿರುವ ತಂಡದ ಓಟಗಾರ್ತಿ ಆಲಿಸನ್ ಫೆಲಿಕ್ಸ್ ಒಟ್ಟಾರೆ ಒಲಿಂಪಿಕ್ಸ್‌ನಲ್ಲಿ 11 ಪದಕಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಪರ್ ಉಡುಗೊರೆ!ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಪರ್ ಉಡುಗೊರೆ!

ಶನಿವಾರ (ಆಗಸ್ಟ್ 7) ನಡೆದ ಮಹಿಳಾ 4X400 ಮೀಟರ್ ರಿಲೇ ಫೈನಲ್ ಸ್ಪರ್ಧೆಯಲ್ಲಿ ಯುಎಸ್‌ಎ ತಂಡ ಬಂಗಾರ ಗೆದ್ದರೆ, ಮಿಕ್ಸ್ಡ್ ರಿಲೇ ಉದ್ಘಾಟನಾ ಸ್ಪರ್ಧೆಯಲ್ಲಿ ಬಂಗಾರ ಗೆದ್ದಿದ್ದ ಪೋಲ್ಯಾಂಡ್ ಬೆಳ್ಳಿ ಪದಕ ಜಯಿಸಿತು. ಈ ವಿಭಾಗದ ಕಂಚಿನ ಪದಕ, ಹಿಂದೆ ಮೂರು ಬಾರಿ ಬೆಳ್ಳಿ ಗೆದ್ದಿದ್ದ ಜಮೈಕಾ ತಂಡದ ಪಾಲಾಗಿದೆ.

ಆಲಿಸನ್ ಫೆಲಿಕ್ಸ್ ಜೊತೆಗೆ 400 ಮೀಟರ್ ಹರ್ಡಲ್ಸ್‌ ಓಟದಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದ ಸಿಡ್ನಿ ಮೆಕ್‌ಲಾಫ್ಲಿನ್ ಮತ್ತು ದಲಿಲಾ ಮುಹಮ್ಮದ್ ತಂಡದಲ್ಲಿ ಓಡಿದ್ದರು. ಇನ್ನು 800 ಮೀಟರ್ ಓಟದಲ್ಲಿ ಬಂಗಾರ ಗೆದ್ದಿದ್ದ ಮು ಏಥಿಂಗ್ ಕೂಡ ಫೆಲಿಕ್ಸ್ ತಂಡದಲ್ಲಿದ್ದರು.

ಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದ ಬಜರಂಗ್ ಪೂನಿಯಾಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದ ಬಜರಂಗ್ ಪೂನಿಯಾಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆ

ಆಲಿಸನ್ ಫೆಲಿಕ್ಸ್ ತಂಡ 3:16.85 ಸೆಕೆಂಡ್ ಕಾಲಾವಧಿಯಲ್ಲಿ ಬಂಗಾರ ಕೊರಳಿಗೇರಿಕೊಂಡರೆ, ದ್ವಿತೀಯ ಸ್ಥಾನಿ ಪೋಲ್ಯಾಂಡ್ ತಂಡ 3:20.53 ಸೆಕೆಂಟ್ ವೇಗದಲ್ಲಿ ಓಟ ಮುಗಿಸಿತು. ಶುಕ್ರವಾರ 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರಿಂದ ಐದನೇ ಒಲಿಂಪಿಕ್ಸ್‌ನಲ್ಲಿ 11 ಪದಕಗಳನ್ನು ಗೆದ್ದ ದಾಖಲೆಗೆ ಫೆಲಿಕ್ಸ್ ಪಾತ್ರರಾಗಿದ್ದಾರೆ.

Story first published: Saturday, August 7, 2021, 21:10 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X