ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಮೀಟೂ'ಗೆ ಬೆಂಬಲಿಸುವ ವಿನೇಶ್‌ಗೆ ಒಂದು ವಿಚಾರಕ್ಕೆ ಮಾತ್ರ ಸಿಟ್ಟಂತೆ!

Vinesh Phogat comes out in support of #MeToo movement

ಭುವನೇಶ್ವರ, ನವೆಂಬರ್ 3: ಲೈಂಗಿಕ ದೌರ್ಜನ್ಯ ವಿರೋಧಿ ಅಭಿಯಾನ 'ಮೀಟೂ'ಗೆ ಭಾರತದ ಸ್ಟಾರ್ ರಸ್ಲರ್ ವಿನೇಶ್ ಫೋಗಟ್ ಬೆಂಬಲ ಸೂಚಿಸಿದ್ದಾರೆ. ಆದರೆ ಒಂದು ವಿಚಾರಕ್ಕೆ ಮಾತ್ರ ನನಗೆ ತುಂಬಾ ಸಿಟ್ಟು ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. 2018ರ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್‌ ಗೇಮ್ಸ್ ನಲ್ಲಿ ವಿನೇಶ್ ಬಂಗಾರ ಗೆದ್ದಿದ್ದರು.

ವೈರಲ್ ವಿಡಿಯೋ: ನೋ ಬಾಲ್‌ಗೆ ವಿಕೆಟ್ ಪಡೆದು ಸಂಭ್ರಮಾಚರಿಸಿದ ತಾಹೀರ್!ವೈರಲ್ ವಿಡಿಯೋ: ನೋ ಬಾಲ್‌ಗೆ ವಿಕೆಟ್ ಪಡೆದು ಸಂಭ್ರಮಾಚರಿಸಿದ ತಾಹೀರ್!

ಭುವನೇಶ್ವರದಲ್ಲಿ ನಡೆದ ಏಕಮ್ರಾ ಸ್ಪೋರ್ಟ್ಸ್ ಲಿಟರರಿ ಫೆಸ್ಟಿವಲ್ ನಲ್ಲಿ ಮೀಟೂ ಅಭಿಯಾನಕ್ಕೆ ಬೆಂಬಲಿಸಿ ವಿನೇಶ್ ಮಾತನಾಡಿ, 'ಕ್ರೀಡೆಯಲ್ಲೂ ಇಂಥದ್ದೇ ಪ್ರಕರಣಗಳನ್ನು ಕೇಳಿದ್ದೇನೆ. ಆದರೆ ನನ್ನ ವೃತ್ತಿ ಜೀವನದಲ್ಲಿ ನಾನ್ಯಾವತ್ತೂ ಇಂಥ (ದೌರ್ಜನ್ಯದ) ಸಂದರ್ಭಗಳನ್ನು ಎದುರಿಸಿಲ್ಲ. ನನ್ನ ರಸ್ಲಿಂಗ್ ಕ್ರೀಡೆಯಲ್ಲೂ ಇಂಥ ಪ್ರಕರಣಗಳಾಗಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದರು.

'ಅನ್ಯಾಯ ಆಗಿದ್ದರ ಬಗ್ಗೆ ದಿಟ್ಟವಾಗಿ ಹೇಳಿಕೊಳ್ಳುವ ಮಹಿಳೆಯನ್ನು ಅಭಿನಂದಿಸಬೇಕು. ಇಂಥ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳದಿರುವಂತೆ ಹೆಚ್ಚಿನಸಾರಿ ಹೆತ್ತವರೇ ಮಗಳನ್ನು ತಡೆಯುತ್ತಾರೆ. ಭವಿಷ್ಯದಲ್ಲಿ ಮಗಳಿಗೆ ತೊಂದರೆಯಾಗಬಹುದು ಎಂಬ ಅಂಜಿಕೆ ಇದಕ್ಕೆ ಕಾರಣ. ಆದರೆ ಲೈಂಗಿಕ ದೌರ್ಜನ್ಯದ ಕಡಿವಾಣಕ್ಕೆ ದೇಶವೇ ಮುಂದಾಗಬೇಕಿದೆ' ಎಂದು ಪೋಗಟ್ ಹೇಳಿದರು.

ಬೂಮ್ರಾ ಮುಂದೊಮ್ಮೆ ಕೊಹ್ಲಿಯಾದರೆ ಅದರಲ್ಲಿ ಅಚ್ಚರಿಯಿಲ್ಲ: ಕೈಫ್ಬೂಮ್ರಾ ಮುಂದೊಮ್ಮೆ ಕೊಹ್ಲಿಯಾದರೆ ಅದರಲ್ಲಿ ಅಚ್ಚರಿಯಿಲ್ಲ: ಕೈಫ್

'ಜನ ನನ್ನನ್ನು ದಂಗಲ್ ರಸ್ಲರ್ಸ್‌ನ ಸಹೋದರಿ ಎಂಬಂತೆ ಕರೆಯುವಾಗ, ಗುರುತಿಸುವಾಗ ನನಗೆ ಬಹಳ ಕೋಪ ಬರುತ್ತದೆ. ರಸ್ಲಿಂಗ್‌ಗೆ ದಂಗಲ್ ಕುಟುಂಬದ ಕೊಡುಗೆ ಖಂಡಿತಾ ಇದೆ ಹೌದು. ಆದರೆ ನನಗೆ ನನ್ನ ಹೆಸರಿನಿಂದಲೇ ಗುರುತಿಸಿಕೊಳ್ಳೋಕೆ ಇಷ್ಟ. ದೇಶ ಹೆಮ್ಮೆ ಪಡುವಂತೆ ಮಾಡಿದ ರಸ್ಲರ್ ವಿನೇಶ್ ಎಂದಷ್ಟೇ ಕರೆಸಿಕೊಳ್ಳಲು ನಾನು ಬಯಸುತ್ತೇನೆ' ಎಂದು ವಿನೇಶ್ ತಿಳಿಸಿದರು.

Story first published: Saturday, November 3, 2018, 20:14 [IST]
Other articles published on Nov 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X