ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ತಯಾರಿಗೆ ವಿದೇಶಿ ಕೋಚ್ ಗಳ ಅಗತ್ಯವಿದೆ: ವಿನೇಶ್ ಫೋಗಟ್

Vinesh Phogat Says Foreign Coaches Needed for Better Olympic Preparation

ನವದೆಹಲಿ, ಸೆಪ್ಟೆಂಬರ್ 11: ಮುಂಬರಲಿರುವ 2020 ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಹೆಚ್ಚು ಪದಕ ಗೆಲ್ಲುವತ್ತ ದೇಸಿ ಕ್ರೀಡಾಪಟುಗಳು ಚಿತ್ತ ಹರಿಸಿ, ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ. ಈ ನಡುವೆ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನ ಕುಸ್ತಿಯಲ್ಲಿ ಚಿನ್ನ ಗೆದ್ದಿದ್ದ ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್ ತಯಾರಿಗೆ ವಿದೇಶಿ ಕೋಚ್ ಗಳ ಅಗತ್ಯವಿದೆ ಎಂದಿದ್ದಾರೆ.

ಶತಕ ಪೂರೈಸಲು ನೆರವಾದ ಬೂಮ್ರಾಗೆ ಧನ್ಯವಾದ ಹೇಳಿದ ಅಲೆಸ್ಟರ್ ಕುಕ್ಶತಕ ಪೂರೈಸಲು ನೆರವಾದ ಬೂಮ್ರಾಗೆ ಧನ್ಯವಾದ ಹೇಳಿದ ಅಲೆಸ್ಟರ್ ಕುಕ್

ಈ ಬಗ್ಗೆ ಮಾತನಾಡುತ್ತ ವಿನೇಶ್, 'ಭಾರತದ ಕೋಚ್ ಗಳು ಉತ್ತಮ ತರಬೇತಿಯನ್ನೇ ನೀಡುತ್ತಿದ್ದಾರೆ. ಅದಕ್ಕೆ ತಕ್ಕ ಫಲಿತಾಂಶವೂ ಬರುತ್ತಿದೆ. ಆದರೆ ಒಲಿಂಪಿಕ್ಸ್ ನಂತ ಪ್ರತಿಷ್ಠಿತ ಗೇಮ್ಸ್ ಗಳಲ್ಲಿ ದೇಶವನ್ನು ಪ್ರತಿನಿಧಿಸಲು ಇನ್ನೂ ಹೆಚ್ಚಿನ ತರಬೇತಿ ಕೌಶಲಗಳ ಅಗತ್ಯವಿದೆ' ಎಂದಿದ್ದಾರೆ.

'ನಮಗೆ ವಿದೇಸಿ ಕೋಚ್ ಗಳ ಅನಿವಾರ್ಯತೆಯಿದೆ. ಯಾಕೆಂದರೆ ಹೊರದೇಶೀ ಕೋಚ್ ಗಳು ಫಲಿತಾಂಶದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪ್ರತಿದಿನದ ಅಭ್ಯಸದ ಬಗ್ಗೆ ಯೋಜನೆ ಹಾಕಿಕೊಳ್ಳುತ್ತಾರೆ. ನಮ್ಮ ವೇಗ, ಶಕ್ತಿ, ತ್ರಾಣ ಇತ್ಯಾದಿಗಳ ಬಗ್ಗೆ ಚರ್ಚಿಸಿ ಕೌಶಲಭರಿತ ಪರಿಣಾಮಕಾರಿ ತರಬೇತಿ ನೀಡುತ್ತಾರೆ' ಎಂದು ವಿನೇಶ್ ತಿಳಿಸಿದರು.

2016ರ ರಿಯೋ ಒಲಿಂಪಿಕ್ಸ್ ನ ಕುಸ್ತಿಯಲ್ಲಿ ವಿನೇಶ್ ಫೋಗಟ್ ಗಾಯಗೊಂಡು ಮೊದಲ ಸುತ್ತನಲ್ಲೇ ಹೊರ ಬಿದ್ದಿದ್ದರು. 2020ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟುಗಳ ಸಾಲಿನಲ್ಲಿ ಪೋಗಟ್ ಕೂಡ ಇದ್ದಾರೆ.

Story first published: Tuesday, September 11, 2018, 18:55 [IST]
Other articles published on Sep 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X