ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಖೇಲ್ ರತ್ನ'ಕ್ಕೆ ಮತ್ತೆ ಸ್ಟಾರ್ ರಸ್ಲರ್ ವಿನೇಶ್ ಫೋಗಟ್ ಹೆಸರು ಶಿಫಾರಸು

Vinesh Phogat to be recommended for Khel Ratna by WFI

ನವದೆಹಲಿ, ಮೇ 31: ಸ್ಟಾರ್ ರಸ್ಲರ್ ವಿನೇಶ್ ಫೋಗಟ್ ಹೆಸರನ್ನು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಿದೆ. ಇಲ್ಲಿಗೆ ಪೋಗಟ್ ಹೆಸರು ಖೇಲ್‌ ರತ್ನಕ್ಕೆ ಸತತ ಎರಡು ಬಾರಿ ಶಿಫಾರಸು ಮಾಡಿದಂತಾಗುತ್ತದೆ.

'ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ, 'ಅರ್ಜುನ'ಕ್ಕೆ ಧವನ್ ನಾಮನಿರ್ದೇಶನ'ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ, 'ಅರ್ಜುನ'ಕ್ಕೆ ಧವನ್ ನಾಮನಿರ್ದೇಶನ

25ರ ಹರೆಯದ ವಿನೇಶ್ ಫೋಗಟ್ ಹೆಸರನ್ನು ಡಬ್ಲ್ಯೂಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅಂತಿಮಗೊಳಿಸಿ ಸೋಮವಾರ (ಜೂನ್ 1) ಶಿಫಾರಸು ಪತ್ರವನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಲಿದ್ದಾರೆ. 'ಖೇಲ್ ರತ್ನಕ್ಕೆ ನಮ್ಮಲ್ಲಿರುವ ಏಕೈಕ ಹೆಸರು ವಿನೇಶ್ ಫೋಗಟ್,' ಎಂದು ಡಬ್ಲ್ಯೂಎಫ್‌ಐ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣ

ಕಳೆದ ವರ್ಷವೂ ವಿನೇಶ್ ಫೋಗಟ್ ಮತ್ತು ಬಜರಂಗ್‌ ಪೂನಿಯಾ ಹೆಸರುಗಳು ಖೇಲ್‌ ರತ್ನಕ್ಕೆ ಶಿಫಾರಸಾಗಿತ್ತು. ಆದರೆ ಪ್ರಶಸ್ತಿಯು 2016ರ ಪ್ಯಾರಾಲಂಬಿಕ್ಸ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಪಾಲಾಗಿತ್ತು. ವಿನೇಶ್ ಈ ಹಿಂದೆ 2016ರಲ್ಲಿ ಅರ್ಜುನಾ ಪ್ರಶಸ್ತಿ ಪಡೆದಿದ್ದರು.

ಟೆಸ್ಟ್‌ನಲ್ಲಿ ಅತೀ ಹೆಚ್ಚುಬಾರಿ 5+ ವಿಕೆಟ್ ಪಡೆದ ಮಾಂತ್ರಿಕ ಬೌಲರ್‌ಗಳುಟೆಸ್ಟ್‌ನಲ್ಲಿ ಅತೀ ಹೆಚ್ಚುಬಾರಿ 5+ ವಿಕೆಟ್ ಪಡೆದ ಮಾಂತ್ರಿಕ ಬೌಲರ್‌ಗಳು

ಮಹಿಳಾ ರಸ್ಲಿಂಗ್ 53 ಕೆಜಿ ವಿಭಾಗದ ವಿಶ್ವ ರ್ಯಾಂಕಿಂಗ್‌ನಲ್ಲಿ ವಿನೇಶ್ ಸದ್ಯ 3ನೇ ಶ್ರೇಯಾಂಕದಲ್ಲಿದ್ದಾರೆ. 2019ರ ವರ್ಲ್ಡ್ ರಸ್ಲಿಂಗ್‌ನಲ್ಲಿ ಕಂಚು ಗೆದ್ದಿದ್ದ ಫೋಗಟ್, ಮೊದಲ ಯತ್ನಕ್ಕೇ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

Story first published: Sunday, May 31, 2020, 17:11 [IST]
Other articles published on May 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X