ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್ ವೆಲ್ತ್ ಚಾಂಪಿಯನ್ ಶಿಪ್; ಪವರ್ ಲಿಫ್ಟಿಂಗ್ ನಲ್ಲಿ ಹೊಸ ದಾಖಲೆ ಬರೆದ ವಿಶ್ವನಾಥ್

Vishwanath Of Kundapur Set New Record Of Powerlifting In Commonwealth Championship

ಉಡುಪಿ, ಸೆಪ್ಟೆಂಬರ್ 19: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಿಶ್ವನಾಥ್‌ ಭಾಸ್ಕರ ಗಾಣಿಗ ಇದೀಗ ಕೆನಡಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ 2019ರಲ್ಲಿ ನೂತನ ದಾಖಲೆ ಬರೆದಿದ್ದಾರೆ.

ಇಂಟರ್ ನ್ಯಾಷನಲ್ ಸ್ಟ್ರಾಂಗೆಸ್ಟ್ ಮ್ಯಾನ್' ಮಂಗ್ಳೂರಿನ ಪ್ರಸಾದ್ ಶೆಟ್ಟಿ

93 ಕೆ.ಜಿ ವಿಭಾಗದ ಪವರ್ ಲಿಫ್ಟಿಂಗ್ ನಲ್ಲಿ ಸ್ಕ್ವಾಟ್ 295 ಕೆ.ಜಿ, ಬೆಂಚ್ 180 ಕೆ.ಜಿ, ಡೆಡ್ಲಿಫ್ಟ್ 327.5 ಕೆ.ಜಿ ಮೂಲಕ ಒಟ್ಟು 802.5 ಕೆ.ಜಿ ಭಾರ ಎತ್ತುವ ಮೂಲಕ ನೂತನ ದಾಖಲೆ ಬರೆದು ಒಂದು ಚಿನ್ನದ ಪದಕ ಮತ್ತು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

Vishwanath Of Kundapur Set New Record Of Powerlifting In Commonwealth Championship

ಕಳೆದ ವರ್ಷ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿಶ್ವನಾಥ್ 15 ದಿನಗಳ‌ ಕಾಲ ಐಸಿಯುನಲ್ಲಿ ದಾಖಲಾಗಿದ್ದರು. ಆ ಬಳಿಕ ನಿರಂತರ ಕಠಿಣ ಪರಿಶ್ರಮದ ಮೂಲಕ ಮತ್ತೆ ಭಾರತದ ಪತಾಕೆ ಹಾರಿಸಿದ್ದಾರೆ.

ಕೊಯಮತ್ತೂರಿನಲ್ಲಿ ನಡೆದ ಏಷ್ಯನ್‌ ಪವರ್‌ಲಿಫ್ಟಿಂಗ್‌ನಲ್ಲಿ ಪದಕ ಗೆಲ್ಲುವ ಮೂಲಕ ವಿಶ್ವನಾಥ್‌ ಮೊದಲ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದರು. ರಾಜ್ಯ, ವಿಶ್ವವಿದ್ಯಾಲಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ದಾಖಲೆಗಳನ್ನು ಬರೆದು ದೇಶದ ಬಲಿಷ್ಠ ಪುರುಷ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Story first published: Thursday, September 19, 2019, 13:58 [IST]
Other articles published on Sep 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X