ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ

WADA hands Russia four-year ban from international events

ಕ್ರೀಡಾಲೋಕದಲ್ಲಿ ಜಾಗತಿಕ ಮಟ್ಟದಲ್ಲಿ ರಷ್ಯಾ ಅತಿದೊಡ್ಡ ಮುಖಭಂಗಕ್ಕೆ ಒಳಗಾಗಿದೆ. ಜಾಗತಿಕ ಮಟ್ಟದಲ್ಲಿ ಆಂಟಿ ಡೋಪಿಂಗ್ ಏಜೆನ್ಸಿ ರಷ್ಯಾವನ್ನು ಮುಂದಿನ ನಾಲ್ಕು ವರ್ಷಗಳ ಕಾಲ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ. ಒಲಿಂಪಿಕ್ಸ್‌ ಸೇರಿದಂತೆ ಮುಂದಿನ ನಾಲ್ಕು ವರ್ಷಗಳಲ್ಲಿ ನಡೆಯುವ ಯಾವುದೇ ಕ್ರೀಡಾಕೂಟದಲ್ಲೂ ರಷ್ಯಾ ಭಾಗವಹಿಸುವಂತಿಲ್ಲ.

ಹೀಗಾಗಿ ಮುಂದಿನ ವರ್ಷ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾ ಕೂಟ, 2021ರಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫೂಟ್ಬಾಲ್ ವಿಶ್ವಕಪ್‌ನಂತಾ ಮಹತ್ವದ ಟೂರ್ನಿಯಲ್ಲಿ ರಷ್ಯಾದ ಬಾವುಟ ಹಾರಾಡುವುದಿಲ್ಲ, ಮತ್ತು ರಷ್ಯಾ ರಾಷ್ಟ್ರಗೀತೆ ಕೇಳುವುದಿಲ್ಲ.

ಮಾದಕ ವಸ್ತು ಸೇವನೆಗೆ ಸಂಬಂಧಪಟ್ಟಂತೆ ಪ್ರಯೋಗಾಲಯದ ದತ್ತಾಂಶಗಳನ್ನು ಮತ್ತು ಅದಕ್ಕೆ ಸಂಬಂಧ ಪಟ್ಟ ಫೈಲ್‌ಗಳನ್ನು ಅಳಿಸಿ ಹಾಕಲಾಗಿದೆ, ಹಾಗೂ ಈ ವಿಚಾರವಾಗಿ ಸಾಕಷ್ಟು ಅನಧೀಕೃತ ಹಸ್ತಕ್ಷೇಪವಾಗಿರೋದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಉದ್ದೀಪನ ನಿಷೇಧ ಸಂಸ್ಥೆ ವಾಡಾ ಅಧಿಕಾರಿಗಳು ಈ ನಿರ್ಧಾರವನ್ನು ಅವಿರೋಧವಾಗಿ ತೆಗೆದುಕೊಂಡಿದ್ದಾರೆ.

ಇವತ್ತು ವಾಡಾ ಮುಖ್ಯ ಕಛೇರಿ ಸ್ವಿಜರ್ಲೆಂಡ್‌ನ ಲೌಸೇನ್‌ನಲ್ಲಿ ಈ ವಿಚಾರವಾಗಿ ನಡೆದ ಸಭೆಯಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯನ್ನು ಒಪ್ಪಿಸುವಲ್ಲಿ ವಾಡಾ ಯಶಸ್ವಿಯಾಗಿದೆ. ಬಳಿಕ ಈ ನಿರ್ಧಾರವನ್ನು ಬಹಿರಂಗಪಡಿಸಿದೆ.

ರಷ್ಯಾ ಜಾಗತಿಕ ತನ್ನನ್ನು ಕ್ರೀಡಾ ಶಕ್ತಿ ಎಂದು ಬಿಂಬಿಸಲು ಈ ರೀತಿ ಅಡ್ಡ ದಾರಿ ಹಿಡಿದಿರೋದು ಬಹಿರಂಗವಾಗಿದೆ. 2015ರಲ್ಲಿ ವಾಡಾ ನಿಯೋಜಿಸಿದ ಸಮಿತಿಯ ವರದಿಯ ಆಧಾರದಲ್ಲಿ ರಷ್ಯಾದ ಕ್ರೀಡಾಳುಗಳು ಸಾಮೂಹಿಕ ಮಾದಕದ್ರವ್ಯ ಸೇವಿಸಿರುವುದು ದಾಖಲೆ ಸಹಿತ ಬಹಿರಂಗವಾಗಿದೆ.ಡೋಪಿಂಗ್ ಹಗರಣಗಳಲ್ಲಿ ಸಿಲುಕಿಕೊಂಡಿದೆ, 2015 ರಲ್ಲಿ ವಾಡಾ ನಿಯೋಜಿಸಿದ ವರದಿಯು ರಷ್ಯಾದ ಅಥ್ಲೆಟಿಕ್ಸ್‌ನಲ್ಲಿ ಸಾಮೂಹಿಕ ಡೋಪಿಂಗ್‌ಗೆ ಪುರಾವೆಗಳನ್ನು ಕಂಡುಹಿಡಿದಿದೆ.

Story first published: Monday, December 9, 2019, 18:26 [IST]
Other articles published on Dec 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X