ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿನೇಶ್‌, ಬಜರಂಗ್‌ಗೆ ರಾಜೀವ್‌ ಗಾಂಧಿ ಖೇಲ್‌ ರತ್ನಕ್ಕೆ ಡಬ್ಲ್ಯುಎಫ್‌ಐ ಶಿಫಾರಸು

WFI recommends Vinesh Phogat. Bajrang Punia for Rajiv Gandhi Khel Ratna award

ಹೊಸದಿಲ್ಲಿ, ಏಪ್ರಿಲ್‌ 29: ಏಷ್ಯನ್‌ ಗೇಮ್ಸ್‌ ಚಾಂಪಿಯನ್ಸ್‌ ವಿನೇಶ್‌ ಪೋಗಾಟ್‌ ಮತ್ತು ಭಜರಂಗ್‌ ಫೂನಿಯಾ ಅವರನ್ನು ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ) ಸೋಮವಾರ ಶಿಫಾರಸು ಮಾಡಿದೆ.

 ಏಷ್ಯನ್‌ ಕುಸ್ತಿ: ಗ್ರೀಕೊ-ರೋಮನ್‌ನಲ್ಲಿ ಹರ್ಪ್ರೀತ್‌ಗೆ ಬೆಳ್ಳಿ ಏಷ್ಯನ್‌ ಕುಸ್ತಿ: ಗ್ರೀಕೊ-ರೋಮನ್‌ನಲ್ಲಿ ಹರ್ಪ್ರೀತ್‌ಗೆ ಬೆಳ್ಳಿ

ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೀಡಾಪಟುಗಳ ಅಂತಾರಾಷ್ಟ್ರೀಯ ಮಟ್ಟದ ಸಮಗ್ರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪ್ರತಿ ವರ್ಷ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ನೀಡುತ್ತದೆ.

ವಿನೇಶ್‌ ಮತ್ತು ಬಜರಂಗ್‌ ಕಳೆದ ಕೆಲ ವರ್ಷಗಳಿಂದ ಭಾರತದ ಶ್ರೇಷ್ಠ ಕುಸ್ತಿಪಟುಗಳಾಗಿದ್ದು, ಅಂತಾರಾಷ್ಟ್ರೀಯ ಕೂಟಗಳಲ್ಲಿ ಸತತ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಲ್ಲದೆ ಕಳೆದ ವರ್ಷ ನಡೆದ ಇಂಚಿಯಾನ್‌ ಏಷ್ಯನ್‌ ಗೇಮ್ಸ್‌ನಲ್ಲಿ ವಿನೇಶ್‌ (50 ಕೆಜಿ) ಮತ್ತು ಬಜರಂಗ್‌ (65 ಕೆಜಿ) ಫ್ರೀಸ್ಟೈಲ್‌ ಕುಸ್ತಿಯ ಪ್ರತ್ಯೇಕ ವಿಭಾಗಗಳಲ್ಲಿ ಬಂಗಾರದ ಸಾಧನೆ ಮೆರದಿದ್ದರು.

 ಶೂಟಿಂಗ್‌: ಅಭಿಷೇಕ್‌ ವರ್ಮಾಗೆ ಒಲಿಂಪಿಕ್ಸ್‌ ಅರ್ಹತೆ ಶೂಟಿಂಗ್‌: ಅಭಿಷೇಕ್‌ ವರ್ಮಾಗೆ ಒಲಿಂಪಿಕ್ಸ್‌ ಅರ್ಹತೆ

2018ರಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲೂ ವಿನೇಶ್‌ ಮತ್ತು ಬಜರಂಗ್‌ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದೀಗ 2019ರಲ್ಲೂ ತಮ್ಮ ಭರ್ಜರಿ ಫಾರ್ಮ್‌ ಕಾಯ್ದುಕೊಂಡಿದ್ದು, ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕಂಚು ಮತ್ತು ಚಿನ್ನ ಬಾಚಿಕೊಂಡಿದ್ದಾರೆ.

ಇದೇ ವೇಳೆ ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿ ಪದಕ ಗೆದ್ದ ಪ್ರತಿಭಾನ್ವಿತ ಕುಸ್ತಿಪಟುಗಳಾದ ದಿವ್ಯಾ ಕಾಕ್ರನ್‌, ಪೂಜಾ ಧಂಡಾ ಮತ್ತು ರಾಹುಲ್‌ ಆವಾರೆ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ವಿವಿಧ ಪ್ರಶಸ್ತಿಗಳಿಗೆ ಡಬ್ಲ್ಯುಎಫ್‌ಐ ಶಿಫಾರಸು ಇಂತಿದೆ

  1. ಖೇಲ್‌ರತ್ನ ಪ್ರಶಸ್ತಿ: ವಿನೇಶ್‌ ಫೋಗಟ್‌ ಮತ್ತು ಬಜರಂಗ್‌ ಪೂನಿಯಾ.
  2. ಅರ್ಜುನ ಪ್ರಶಸ್ತಿ: ರಾಹುಲ್‌ ಆವಾರೆ, ಹರ್ಪ್ರೀತ್‌ ಸಿಂಗ್‌, ದಿವ್ಯಾ ಕಾಕ್ರನ್‌ ಮತ್ತು ಪೂಜಾ ದಂಡಾ.
  3. ಧ್ರೋಣಾಚಾರ್ಯ ಪ್ರಶಸ್ತಿ: ವೀರೇಂದ್ರ ಕುಮಾರ್‌, ಸುಜೀತ್‌ ಮಾನ್‌, ನರೇಂದ್ರ ಕುಮಾರ್‌ ಮತ್ತು ವಿಕ್ರಮ್‌ ಕುಮಾರ್‌.
  4. ಧ್ಯಾನ್‌ಚಂದ್‌ ಪ್ರಶಸ್ತಿ: ಭೀಮ್‌ ಸಿಂಗ್‌ ಮತ್ತು ಜೈ ಪ್ರಕಾಶ್‌.

Story first published: Monday, April 29, 2019, 14:27 [IST]
Other articles published on Apr 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X