ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ಓಡಿರುವ ರೋಚಕ ವಿಡಿಯೋ

ನವದೆಹಲಿ: ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಭಾರತದ ಸ್ಟಾರ್ ಅಥ್ಲೀಟ್ ಮಿಲ್ಖಾ ಸಿಂಗ್ ಜೂನ್ 18ರ ಶುಕ್ರವಾರ ನಿಧನರಾಗಿದ್ದಾರೆ. ಭಾರತದಾದ್ಯಂತ ಜನಪ್ರಿಯ ನಟರು, ಕ್ರೀಡಾಪಟುಗಳು, ರಾಜಕಾರಣಗಳು, ಕ್ರಿಕೆಟಿಗರು ಅಗಲಿದ ಕ್ರೀಡಾ ದಂತಕತೆಗೆ ಸಂತಾಪ ಸೂಚಿಸಿದ್ದಾರೆ.

WTC Final: ಭಾರತ vs ನ್ಯೂಜಿಲೆಂಡ್, ಟಾಸ್ ಪಕ್ಕಾ ಸಮಯ ಬಹಿರಂಗ!WTC Final: ಭಾರತ vs ನ್ಯೂಜಿಲೆಂಡ್, ಟಾಸ್ ಪಕ್ಕಾ ಸಮಯ ಬಹಿರಂಗ!

91 ವರ್ಷ ಪ್ರಾಯವಾಗಿದ್ದ ಮಿಲ್ಖಾ ಸಿಂಗ್‌ಗೆ ಕಳೆದ ತಿಂಗಳು ಕೋವಿಡ್-19 ಸೋಂಕು ತಗುಲಿತ್ತು. ಇದೇ ತಿಂಗಳು ಮಿಲ್ಖಾ ಪತ್ನಿ ನಿರ್ಮಲಾ ಕೂಡ ಕೋವಿಡ್‌ನಿಂದ ಸಾವನ್ನಪ್ಪಿದ್ದರು. ಅದಾಗಿ 10 ದಿನಗಳೊಳಗಾಗಿ ಮಿಲ್ಖಾ ಕೂಡ ಕೊನೆಯುಸಿರೆಳೆದಿದ್ದಾರೆ. ಮಿಲ್ಖಾ ಜೀವನಾಧರಿಸಿ ಬಾಲಿವುಡ್‌ನಲ್ಲಿ 'ಭಾಗ್‌ ಮಿಲ್ಖಾ ಭಾಗ್' ಸಿನಿಮಾ ಯಶಸ್ವಿಯಾಗಿತ್ತು.

ಚೊಚ್ಚಲ ಪಂದ್ಯದಲ್ಲಿ ಎರಡು ಅರ್ಧ ಶತಕ ಸಿಡಿಸಿದ ಶಫಾಲಿ ವರ್ಮಚೊಚ್ಚಲ ಪಂದ್ಯದಲ್ಲಿ ಎರಡು ಅರ್ಧ ಶತಕ ಸಿಡಿಸಿದ ಶಫಾಲಿ ವರ್ಮ

ಏಷ್ಯನ್ ಚಾಂಪಿಯನ್ ಗೇಮ್ಸ್‌ನಲ್ಲಿ 4 ಬಾರಿ ಪದಕ ಗೆದ್ದಿದ್ದ ಮಿಲ್ಖಾ ಸಿಂಗ್ ಒಲಿಂಪಿಕ್ಸ್‌ನಲ್ಲಿ ಸ್ವಲ್ಪದರಲ್ಲೇ ಪದಕ ಕೈಚೆಲ್ಲಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಪುರುಷರ ವಿಭಾಗದ 400 ಮೀಟರ್ ಓಟದ ಫೈನಲ್‌ಗೆ ಆಯ್ಕೆಯಾಗಿದ್ದರು. ಆದರೆ ನಾಲ್ಕನೇ ಸ್ಥಾನದಲ್ಲಿ ಅಂದು ಓಟ ಮುಗಿಸಿದ್ದರು.

45.6 ಸೆಕೆಂಡ್‌ ವೇಗದಲ್ಲಿ ಮಿಲ್ಖಾ ಆವತ್ತು 4ನೇ ಸ್ಥಾನ ಪಡೆದುಕೊಂಡಿದ್ದರೆ, ಯುಎಸ್‌ಎಯ ಓಟಿಸ್ ಡೇವಿಸ್ ಅವರು 44.9 ಸೆಕೆಂಡ್ ಸಾಧನೆಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಆದರೆ ಮಿಲ್ಖಾ ಏಷ್ಯನ್ ಗೇಮ್ಸ್ ಕ್ರೀಡಾಕೂಟಗಳಲ್ಲಿ ಭಾರತದತ್ತ ವಿಶ್ವ ಅಥ್ಲೆಟಿಕ್ಸ್ ಕಣ್ಣಾಯಿಸುವಂತೆ ಮಾಡಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, June 19, 2021, 11:29 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X