Mirabai Chanu: ಆರ್ಚರ್ ಆಗುವ ಕನಸು ಕಂಡಿದ್ದ ಮೀರಾಬಾಯಿ ಆಗಿದ್ದು ವೈಟ್‌ಲಿಫ್ಟರ್: ಬೆಳ್ಳಿ ಗೆದ್ದ ಬೆಡಗಿಯ ಬದುಕಿನ ಕಥನ!

Who is Mirabai Chanu , ಭಾರತಕ್ಕೆ ಈ ಬಾರಿಯ ಮೊದಲ ಪದಕ | Oneindia Kannada

ಟೋಕಿಯೋ, ಜುಲೈ 24: ಮಣಿಪುರದ ರಾಜಧಾನಿ ಇಂಪಾಲ್‌ನ ಪೂರ್ವ ಭಾಗದ ನಾನ್‌ಪೋಕ್ ಕಾಕ್ಚಿಂಗ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಮೀರಾಬಾಯಿ ಇಂದು ಇಡೀ ದೇಶವೇ ಹೆಮ್ಮೆಪಡುವಂತಾ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತ ಪ್ರಥಮ ಪದಕ ಗೆಲ್ಲುವಂತೆ ಮಾಡಿದ್ದಾರೆ ಮೀರಾಬಾಯಿ. ಆದರೆ ಈ ಹಾದಿ ಮೀರಾಬಾಯಿ ಚಾನು ಪಾಲಿಗೆ ಅಷ್ಟೇ ಕಠಿಣವಾಗಿತ್ತು.

ತಾನು ಕ್ರೀಡಾಪಟುವೇ ಆಗಬೇಕೆಂದು ಹಠಕಟ್ಟಿ ಸಾಧಿಸಿದ ಧೀರೆ ಮೀರಾಬಾಯಿ. ಆದರೆ ತನ್ನ ಕ್ಷೇತ್ರ ಯಾವುದು ಎಂಬ ಬಗ್ಗೆ ಮೀರಾಬಾಯಿಗೆ ಸ್ಪಷ್ಟತೆಯಿರಲಿಲ್ಲ. ಇಲ್ಲಿಂದಲೇ ಮೀರಾಬಾಯಿಗೆ ಸವಾಲು ಎದುರಾಗಿತ್ತು. ಆರಂಭದಲ್ಲಿ ಆರ್ಚರ್‌ ಆಗುವ ಕನಸು ಕಂಡಿದ್ದರು. ಆದರೆ ಬಳಿಕ ವೈಟ್‌ಲಿಫ್ಟಿಂಗ್ ಆಯ್ಕೆ ಮಾಡಿಕೊಂಡಿದ್ದ ಚಾನು ಈಗ ದೇಶದ ಹೆಮ್ಮೆಯ ಕ್ರೀಡಾಪಟು.

ಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಮೀರಾಬಾಯಿ ಚಾನುಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಬಡ ಕುಟುಂಬದಲ್ಲಿ ಜನಿಸಿದ ಮೀರಾಬಾಯಿ ಆರು ಮಂದಿ ಮಕ್ಕಳನ್ನು ಹೊಂದಿದ್ದ ಕುಟುಂಬದಲ್ಲಿ ಅತಿ ಕಿರಿಯವರು. ಕಡು ಬಡತನದಲ್ಲಿ ಬೆಳೆದ ಇವರು ಹೆತ್ತವರಿಗೆ ಹಾಗೂ ಸೋದರರಿಗೆ ಸಹಾಯವಾಗಲೆಂದು ಕಟ್ಟಿಗೆ ಹೋರುವಲ್ಲಿ ಸಹಾಯ ಮಾಡುತ್ತಿದ್ದರು. ಸಣ್ಣ ವಯಸ್ಸಿನಲ್ಲಿ ಹೆಚ್ಚು ಭಾರದ ಕಟ್ಟಿಗೆ ಎತ್ತುತ್ತಿದ್ದ ಮೀರಾಬಾಯಿಯ ಸಾಮರ್ಥ್ಯವನ್ನು ಹೆತ್ತವರು ಗಮನಿಸಿದ್ದು. ಇದೇ ಆಕೆಯ ಒಲಿಂಪಿಕ್ಸ್ ಹಾದಿಗೆ ನಾಂದಿಯಾಗಿತ್ತು.

ಆರ್ಚರ್ ಆಗುವ ಕನಸು ಕಂಡಿದ್ದ ಮೀರಾಬಾಯಿ

ಆರ್ಚರ್ ಆಗುವ ಕನಸು ಕಂಡಿದ್ದ ಮೀರಾಬಾಯಿ

ಕ್ರೀಡಾ ಲೋಕಕ್ಕೆ ಕಾಲಿಡಲು ಕಾರಣವಾದಂತಾ ಮತ್ತೊಂದು ಘಟನೆಯನ್ನು ಸ್ವತಃ ಮೀರಾಬಾಯಿ ಪಿಟಿಐಗೆ ನೀಡಿದ್ದ ಸಂದರ್ಶನದ ವೇಳೆ ಹಂಚಿಕೊಂಡಿದ್ದರು. "ಸೋದರರೆಲ್ಲರೂ ಫುಟ್ಬಾಲ್ ಆಡುತ್ತಿದ್ದರು. ಆಟ ಮುಗಿಸಿ ಮನೆಗೆ ಬಂದಾಗ ಅವರ ಮೈಯೆಲ್ಲಾ ಕೊಳೆಯಿಂದ ತುಂಬಿರುತ್ತಿತ್ತು. ಆಗ ನಾನು ಯಾವುದಾದರೂ ಸ್ವಚ್ಛವಾಗಿ ಹಾಗೂ ಅಚ್ಚುಕಟ್ಟಾಗಿ ಬಟ್ಟೆ ಧರಿಸುವಂತಾ ಕ್ರೀಡೆಯನ್ನು ಆಡಬೇಕೆಂದು ಬಯಸಿದ್ದೆ. ಹೀಗಾಗಿ ಮೊದಲಿಗೆ ಆರ್ಚರ್ ಆಗಬೇಕೆಂದು ಕನಸು ಕಂಡಿದ್ದೆ. ಅವರು ಅಚ್ಚುಕಟ್ಟಾಗಿ ಉತ್ತಮ ಬಟ್ಟೆಯನ್ನು ಧರಿಸುತ್ತಾರೆ" ಎಂದು ವಿವರಿಸಿದ್ದರು.

ಇನ್ನು ಮೀರಾಬಾಯಿ ತರಬೇತಿಗೂ ಸಾಕಷ್ಟು ಸವಾಲಿತ್ತು. ಶಾಲೆಯಿಂದ ತರಬೇತಿ ಸ್ಥಳಲ್ಲೆ 22 ಕಿ.ಮೀ ದೂರದ ಅಂತರವಿತ್ತು. ಎರಡು ಬಸ್‌ಗಳಲ್ಲಿ ಪ್ರಯಾಣಿಸಿ ಅಭ್ಯಾಸ ನಡೆಸಬೇಕಿತ್ತು. ಈ ಪರಿಶ್ರಮದಿಂದಾಗಿ ಆಕೆ ಭಾರತೀಯ ರೈಲ್ವೇಸ್‌ನಲ್ಲಿ ಟಿಕೆಟ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಪಡೆದರು. ಇದು ಕುಟುಂಬ ನಿರ್ವಹಣೆಯ ಜೊತೆಗೆ ಕ್ರೀಡಾಕ್ಷೇತ್ರದಲ್ಲಿ ತನ್ನ ಕನಸನ್ನು ನನಸಾಗಿಸಲು ಶ್ರಮಿಸಲು ಅವಕಾಶ ನೀಡಿತು.

ಸ್ಪೂರ್ತಿಯಾದ ಕುಂಜರಾಣಿ ದೇವಿ

ಸ್ಪೂರ್ತಿಯಾದ ಕುಂಜರಾಣಿ ದೇವಿ

ಈ ಸಂದರ್ಭದಲ್ಲಿಯೂ ಆರ್ಚರ್ ಆಗುವ ಕನಸನ್ನು ಮೀರಾಬಾಯಿ ಕೈಬಿಟ್ಟಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಮಣಿಪುರದ ಮತ್ತೋರ್ವ ವೈಟ್‌ಲಿಫ್ಟರ್ ಕುಂಜರಾಣಿ ದೇವಿ ಮೀರಾಬಾಯಿಯನ್ನು ಸ್ಪೂರ್ತಿಗೊಳ್ಳುವಂತೆ ಮಾಡಿದ್ದರು. ಚಾನು ಆಗ ವೈಟ್‌ಲಿಫ್ಟರ್ ಆಗುವ ಗುರಿಯನ್ನು ದೃಢವಾಗಿಸಿಕೊಂಡರು. 2016ರ ಒಲಿಂಪಿಕ್ಸ್‌ನಲ್ಲಿ ನಿರಾಸೆ ಅನುಭವಿಸಿದರೂ 2020 ಒಲಿಂಪಿಕ್ಸ್‌ನಲ್ಲಿ ಈ ಕನಸು ಮೀರಾಬಾಯಿಯ ಕೈಹಿಡಿದಿದೆ. ಇಡೀ ದೇಶವೇ ಮೀರಾಬಾಯಿ ಗೆಲುವಿನಲ್ಲಿ ಸಂಭ್ರಮಿಸುತ್ತಿದೆ.

ಭರವಸೆ ಮೂಡಿಸಿದ್ದವು ಪ್ರದರ್ಶನ

ಭರವಸೆ ಮೂಡಿಸಿದ್ದವು ಪ್ರದರ್ಶನ

2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು ಚಾನು. 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿಯೇ ಮೀರಾಬಾಯಿ ಪದಕ ಗೆಲ್ಲುವ ಅಥ್ಲೀಟ್‌ಗಳಲ್ಲಿ ಗುರುತಿಸಿಕೊಂಡಿದ್ದರು.

ಎರಡು ದಶಕದ ಬಳಿಕ ವೈಟ್‌ಲಿಂಪ್ಸಿಂಗ್‌ನಲ್ಲಿ ಪದಕ

ಎರಡು ದಶಕದ ಬಳಿಕ ವೈಟ್‌ಲಿಂಪ್ಸಿಂಗ್‌ನಲ್ಲಿ ಪದಕ

ವೈಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಗೆದ್ದ ಪದಕ 2000ನೇ ಇಸವಿಯ ಬಳಿಕ ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗೆದ್ದ ಮೊದಲ ಪದಕವಾಗಿದೆ. ಸಿಡ್ನಿಯಲ್ಲಿ ನಡೆದ ಅಂದಿನ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ನಾಲ್ಕು ಒಲಿಂಪಿಕ್ಸ್‌ನಲ್ಲಿಯೂ ಭಾರತದ ವೈಟ್‌ಲಿಫ್ಟರ್‌ಗಳಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈಗ ಆ ಕೊರತೆಯನ್ನು ಮೀರಾಬಾಯಿ ಚಾನು ನೀಗಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, July 24, 2021, 15:45 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X