ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನನ್ನನ್ನು ಯಾಕೆ ಅವಮಾನಿಸುತ್ತಿದ್ದೀರಿ?: ಒಡಿಶಾ ಸರ್ಕಾರ ಪ್ರಶ್ನಿಸಿದ ದ್ಯುತೀ

Why I am only being humiliated? Dutee Chand questions Odisha government

ಭುವನೇಶ್ವರ್, ಜುಲೈ 17: ಭಾರತದ ಸ್ಟಾರ್ ಅಥ್ಲೀಟ್ ದ್ಯುತೀ ಚಂದ್ ಇತ್ತೀಚೆಗೆ ಫೇಸ್ ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಅದರಲ್ಲಿ ತಾನು ತನ್ನ ಬಿಎಂಡಬ್ಲ್ಯೂ ಕಾರನ್ನು ಮಾರುತ್ತಿರುವುದಾಗಿ ದ್ಯುತೀ ಬರೆದುಕೊಂಡಿದ್ದರು. ದ್ಯುತೀಯ ಈ ಪೋಸ್ಟ್ ಅನೇಕ ವಿವಾದಗಳನ್ನು ಸೃಷ್ಟಿಸಿದೆ.

ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನ ಕ್ರಿಕೆಟಿಗರಿಗೆ 5 ಸ್ಟಾರ್ ಹೋಟೆಲ್ ಇಲ್ಲಇಂಗ್ಲೆಂಡ್‌ನಲ್ಲಿ ಪಾಕಿಸ್ತಾನ ಕ್ರಿಕೆಟಿಗರಿಗೆ 5 ಸ್ಟಾರ್ ಹೋಟೆಲ್ ಇಲ್ಲ

ಕಾರು ಮರುತ್ತಿರುವ ಬಗ್ಗೆ ಮಾಡಿದ್ದ ಪೋಸ್ಟನ್ನು ದ್ಯುತೀ ಕೂಡಲೇ ಡಿಲೀಟ್ ಮಾಡಿದ್ದರು. ಆ ಬಳಿಕ ಸುದ್ದಿಗಾರರ ಬಳಿ, ತಾನು ಕಾರು ಮಾರಲು ನಿರ್ಧರಿಸಿದ್ದು ತನ್ನ ತರಬೇತಿಗೆ ಹಣ ಸಾಲುತ್ತಿಲ್ಲವೆಂದಲ್ಲ, ಕಾರಿನ ದುಬಾರಿ ನಿರ್ವಹಣೆ ಕಷ್ಟವಾಗುತ್ತಿರುವ ಕಾರಣಕ್ಕಾಗಿ. ಫೇಸ್ಬುಕ್‌ನಲ್ಲಿ ಅಂಥ ಪೋಸ್ಟ್ ಸರಿಯಲ್ಲ ಎನಿಸಿ ಅದನ್ನು ಡಿಲೀಟ್ ಮಾಡಿದ್ದೆ. ಆದರೆ ಎಲ್ಲರೂ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.

2018ರ ಏಷ್ಯನ್ ಗೇಮ್ಸ್‌ನ 100 ಮೀ. ಮತ್ತು 200 ಮೀ.ನಲ್ಲಿ ಬೆಳ್ಳಿ ಗೆದ್ದಿದ್ದ ದ್ಯುತೀ ಚಂದ್, ತನಗೆ ತರಬೇತಿಗೆ ಹಣದ ಕೊರತೆಯಿದೆ ಎಂದು ಹೇಳಿರುವುದಾಗಿ ಸುದ್ದಿ ಹಬ್ಬಿದ್ದರಿಂದ ಅಸಮಾಧಾನಗೊಂಡ ಒಡಿಶಾ ಸರ್ಕಾರ, ದ್ಯುತೀಗೆ ತಾವು ನೀಡುತ್ತಿರುವ ಆರ್ಥಿಕ ಸಹಾಯ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿತ್ತು.

ಕನ್ನಡಿಗ ಕೆಎಲ್ ರಾಹುಲ್ ಸೇರಿದಂತೆ 5 ಪ್ರಮುಖ ಕ್ರಿಕೆಟಿಗರಿಗೆ ಈ ಅದೃಷ್ಟವೇ ಇಲ್ಲ!ಕನ್ನಡಿಗ ಕೆಎಲ್ ರಾಹುಲ್ ಸೇರಿದಂತೆ 5 ಪ್ರಮುಖ ಕ್ರಿಕೆಟಿಗರಿಗೆ ಈ ಅದೃಷ್ಟವೇ ಇಲ್ಲ!

ಏಷ್ಯನ್ ಗೇಮ್ಸ್‌ನಲ್ಲಿ 100, 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ 3 ಕೋ.ರೂ. ನಗದು ಪುರಸ್ಕಾರವೂ ಸೇರಿ, ದ್ಯುತೀಗೆ ತಾವು 2015ರಿಂದ ಇಲ್ಲೀವರೆಗೆ ಒಟ್ಟಿಗೆ 4.09 ಕೋ. ರೂ. ಆರ್ಥಿಕ ಬೆಂಬಲ ನೀಡಿರುವುದಾಗಿ ಒಡಿಶಾ ಸರ್ಕಾರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿತ್ತು. ಆದರೆ ಒಡಿಶಾ ಸರ್ಕಾರದ ಈ ನಡೆ ತನಗೆ ಬೇಸರ ತಂದಿರುವುದಾಗಿ ದ್ಯುತೀ ಹೇಳಿಕೊಂಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ದ್ಯುತೀ, 'ಒಡಿಶಾ ಸರ್ಕಾರ ನನಗೊಬ್ಬಳಿಗೆ ಮಾತ್ರ ಆರ್ಥಿಕ ಬೆಂಬಲ ನೀಡುತ್ತಿಲ್ಲ. ಇನ್ನೂ ಅನೇಕ ಅಥ್ಲೀಟ್‌ಗಳಿದ್ದಾರೆ. ಆದರೆ ಅವರೆಲ್ಲರ ಬಗ್ಗೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡದೆ ಬರೀ ನನ್ನೊಬ್ಬಳಿಗೆ ಮಾತ್ರ ಅವಮಾನಿಸಲಾಗುತ್ತಿದೆ. ಸರ್ಕಾರದ ಈ ನಡೆ ಬೇಸರ ತಂದಿದೆ,' ಎಂದಿದ್ದಾರೆ.

Story first published: Friday, July 17, 2020, 15:17 [IST]
Other articles published on Jul 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X