ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಲಿ 100 ಮೀಟರ್ ವಿಶ್ವ ಚಾಂಪಿಯನ್ ಕ್ರಿಶ್ಚಿಯನ್ ಕೋಲ್‌ಮನ್ ಅಮಾನತು

World 100m Champion Christian Coleman Suspended

ಅಮೆರಿಕಾದ ಆಥ್ಲಿಟ್ 100 ಮೀಟರ್ ಓಟದ ಹಾಲಿ ಚಾಂಪಿಯನ್ ಕ್ರಿಶ್ವಿಯನ್ ಕೋಲ್‌ಮನ್ ಅವರನ್ನು ಅಮಾನತುಗೊಳಿಸಲಾಗಿದೆ. ಉದ್ದೀಪನ ಪರೀಕ್ಷೆಯಿಂದ ತಪ್ಪಿಸಿಕೊಂಡ ಕಾರಣಕ್ಕೆ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಕ್ರಿಶ್ಚಿಯನ್ ಕೋಲ್‌ಮನ್ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಪ್ರಕರಣದ ವಿಚಾರಣೆಗಾಗಿ ಎರಡು ವರ್ಷಗಳವರೆಗೆ ಅಮಾನತುಗೊಳ್ಳುವ ಆತಂಕವೂ ಕ್ರಿಶ್ಚಿಯನ್ ಕೋಲ್‌ಮನ್ ಅವರಿಗೆ ಇದೆ. ಹೀಗಾಗಿ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಅನ್ನು ತಪ್ಪಿಸಿಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ.

ಭಾರತ-ಶ್ರೀಲಂಕಾ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್- ಲಂಕಾ ಮಾಜಿ ಕ್ರೀಡಾ ಸಚಿವ ಆರೋಪ

ಟೋಕಿಯೊ ಒಲಿಂಪಿಕ್ಸ್ 100 ಮೀಟರ್ ಓಟದ ಸ್ವರ್ಣ ಪದಕ ಆಕಾಂಕ್ಷಿಯಾಗಿರುವ ಅಮೆರಿಕದ ಅಥ್ಲೀಟ್ ಕೋಲ್​ವುನ್ ಕಳೆದ 12 ತಿಂಗಳಲ್ಲಿ 3 ಬಾರಿ ಉದ್ದೀಪನ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಅಥ್ಲೆಟಿಕ್ಸ್​ನ ಅಥ್ಲೆಟಿಕ್ ಇಂಟೆಗ್ರಿಟಿ ಯುನಿಟ್​ನಿಂದ (ಎಐಯು) ಅಮಾನತು ಶಿಕ್ಷೆ ಎದುರಿಸಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಸ್ಪರ್ಧೆ ಹೊರತಾದ ಡೋಪಿಂಗ್ ಪರೀಕ್ಷೆಗಾಗಿ ಕೋಲ್​ವುನ್ ಮನೆಗೆ ಎಐಯು ಅಧಿಕಾರಿಗಳು ತೆರಳಿದ್ದರು. ಆದರೆ ಆ ಸಮಯದಲ್ಲಿ ಸಮೀಪದ ಮಾಲ್​ಗೆ ಕ್ರಿಸ್ಮಸ್ ಶಾಪಿಂಗ್​ಗಾಗಿ ತೆರಳಿದ್ದ ಕಾರಣ ಕೋಲ್​ವುನ್ ಮನೆಯಲ್ಲಿರಲಿಲ್ಲ. 24 ವರ್ಷದ ಕೋಲ್​ವುನ್ ಸರಣಿ ಟ್ವೀಟ್​ಗಳ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಕಪಿಲ್‌ ದೇವ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ದಿನವಿದುವಿಶ್ವಕಪ್‌ನಲ್ಲಿ ಕಪಿಲ್‌ ದೇವ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ದಿನವಿದು

ಒಂದು ಗಂಟೆ ಕಾಲ ಕೋಲ್​ವುನ್ ಮನೆ ಎದುರಿದ್ದ ಎಐಯು ಅಧಿಕಾರಿಗಳು ಪ್ರತಿ 10 ನಿಮಿಷಕ್ಕೊಮ್ಮೆ ಕಾಲಿಂಗ್ ಬೆಲ್ ಒತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಆ ಸಮಯದಲ್ಲಿ ತಮಗೆ ಕರೆ ಯಾಕೆ ಮಾಡಲಿಲ್ಲ ಎಂದು ಕೋಲ್​ವುನ್ ಪ್ರಶ್ನಿಸಿದ್ದಾರೆ. ಅವರು ಇದಕ್ಕೆ ಮುನ್ನ 2019ರ ಜನವರಿ 16 ಮತ್ತು ಏಪ್ರಿಲ್ 26ರಂದು ಡೋಪಿಂಗ್ ಟೆಸ್ಟ್ ತಪ್ಪಿಸಿಕೊಂಡಿದ್ದರು. ಆದರೆ ತಾನೆಂದೂ ನಿರ್ವಹಣೆ ಸುಧಾರಿಸಲು ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಕೋಲ್​ವುನ್ ಸ್ಪಷ್ಟಪಡಿಸಿದ್ದಾರೆ.

Story first published: Friday, June 19, 2020, 10:41 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X