ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ

Neeraj chopra

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಚಿನ್ನದ ಹುಡುಗ, ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ WACನಲ್ಲಿ ಭಾರತದ 29 ವರ್ಷಗಳ ಪದಕದ ಬರವನ್ನು ನೀಗಿಸಿದ್ದಾರೆ. ಜೊತೆಗೆ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೂ ನೀರಜ್ ಪಾತ್ರರಾಗಿದ್ದಾರೆ.

ಜಾವೆಲಿನ್ ಥ್ರೋ ಫೈನಲ್‌ ಸ್ಪರ್ಧೆಯಲ್ಲಿ 88.13 ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಚಿನ್ನದ ಮೇಲಿನ ಗುರಿಯು ಸ್ವಲ್ಪದರಲ್ಲೇ ಮಿಸ್ ಆಗಿದೆ.

ಅಂಜು ಬಾಬಿ ಜಾರ್ಜ್ ಬಳಿಕ ಪದಕ ಗೆದ್ದ ಏಕೈಕ ಅಥ್ಲೀಟ್

ಅಂಜು ಬಾಬಿ ಜಾರ್ಜ್ ಬಳಿಕ ಪದಕ ಗೆದ್ದ ಏಕೈಕ ಅಥ್ಲೀಟ್

2003ರಲ್ಲಿ ಅಂಜು ಬಾಬಿ ಜಾರ್ಜ್‌ ಲಾಂಗ್‌ ಜಂಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಹಿಳಾ ಅಥವಾ ಭಾರತೀಯ ಅಥ್ಲೀಟ್ ಎಂಬ ಸಾಧನೆ ಮಾಡಿದ್ದರು. ಆ ಬಳಿಕ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲಗೊಂಡಿತ್ತು. ಆದ್ರೀಗ 19 ವರ್ಷಗಳ ಬಳಿಕ ನೀರಜ್ ಅದ್ಭುತ ಸಾಧನೆ ಮಾಡಿದ್ದಾರೆ. ಭಾರತದ ಪುರುಷರ ಅಥ್ಲಿಟ್‌ಗಳಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

ಮೊದಲ ಸ್ಥಾನ ಪಡೆದ ಗ್ರೆನಡಾದ ಆಂಡರ್ಸನ್, ನೀರಜ್‌ಗೆ ಪ್ರಬಲ ಸ್ಪರ್ಧೆ

ಮೊದಲ ಸ್ಥಾನ ಪಡೆದ ಗ್ರೆನಡಾದ ಆಂಡರ್ಸನ್, ನೀರಜ್‌ಗೆ ಪ್ರಬಲ ಸ್ಪರ್ಧೆ

ಅವರ ಮೊದಲ ಮೂರು ಪ್ರಯತ್ನಗಳ ನಂತರ ಅಗ್ರ ಮೂರರಿಂದ ಹೊರಗುಳಿದ ಚೋಪ್ರಾ ಅವರ ಬೃಹತ್ ಎಸೆತವು ಅವರನ್ನು ಎರಡನೇ ಸ್ಥಾನಕ್ಕೆ ಏರಿಸಿತು. ನೀರಜ್‌ಗೆ ಪ್ರಬಲ ಸ್ಪರ್ಧೆಯೊಡ್ಡಿದ ಗ್ರೆನಡಾದ ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಅವರು 90.54 ಮೀಟರ್‌ಗಳ ಬೃಹತ್ ಎಸೆತದೊಂದಿಗೆ ಚಿನ್ನವನ್ನು ಪಡೆದರು.

2023ರಲ್ಲಿ ವಿಶ್ವಕಪ್‌ ಇರುವ ಕಾರಣ ಈತ ತಂಡದಲ್ಲಿದ್ದಾನೆ ನಂತರ ನಿವೃತ್ತಿ ಹೇಳುತ್ತಾನೆ ಎಂದ ರವಿಶಾಸ್ತ್ರಿ

ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ ನೀರಜ್

ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ ನೀರಜ್

ಫೈನಲ್‌ಗೆ ನೇರವಾಗಿ ಸ್ಥಾನ ಪಡೆದಿದ್ದ ನೀರಜ್ ತನ್ನ ಸ್ಥಾನವನ್ನು ಕಾಯ್ದಿರಿಸಲು ಕ್ವಾಲಿಫೈಯರ್‌ನಲ್ಲಿ ಒಂದೇ ಒಂದು ಪ್ರಯತ್ನದ ಅಗತ್ಯವಿತ್ತು. ಜೊತೆಗೆ ಯಾವಾಗಲೂ ಪ್ರಬಲ ಪದಕದ ಸ್ಪರ್ಧಿಯಾಗಿದ್ದರು. ಆದರೆ ಅವರ ಮೊದಲ ಮೂರು ಪ್ರಯತ್ನಗಳ ನಂತರ, ಆ ಭರವಸೆಗಳು ಭಾಗಶಃ ಕಡಿಮೆಯಾಗಿದ್ದವು. ನೀರಜ್ ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದರು ಮತ್ತು ಎರಡನೇ ಪ್ರಯತ್ನದಲ್ಲಿ 82.38 ಮೀ. ಅವರು ತಮ್ಮ ಮೂರನೇ ಎಸೆತದಲ್ಲಿ 86.37 ರ ಎಸೆತದೊಂದಿಗೆ ಅದನ್ನು ಸುಧಾರಿಸಿದರು. ಆದರೆ ಪೀಟರ್ಸನ್, ಜೆಕ್ ರಿಪಬ್ಲಿಕ್ನ ಜಾಕುಬ್ ವಾಲ್ಡ್ಲೆಜ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಹಾಗೂ ನೀರಜ್‌ರನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು.

ಆದಾಗ್ಯೂ, ನಾಲ್ಕನೇ ಪ್ರಯತ್ನದಲ್ಲಿ ನೀರಜ್‌ಗೆ ತೀಕ್ಷ್ಣ ಓಟವು ಪದಕವನ್ನ ಗೆಲ್ಲುವಲ್ಲಿ ಯಶಸ್ವಿಯಾಯಿತು. 88.13 ದೂರಕ್ಕೆ ಎಸೆಯುವ ಮೂಲಕ ಎರಡನೇ ಸ್ಥಾನ ತನ್ನದಾಗಿಸಿಕೊಂಡ ಚೋಪ್ರಾ ಅಬ್ಬರಿಸಿದರು. ನೀರಜ್ ಅವರ ಐದನೇ ಮತ್ತು ಆರನೇ ಪ್ರಯತ್ನಗಳು ಮತ್ತೆರಡು ಫೌಲ್‌ಗಳಿಗೆ ಕಾರಣವಾದರೂ ಸಹ ಅದಾಗಲೇ ಬೆಳ್ಳಿಯನ್ನ ತನ್ನದಾಗಿಸಿಕೊಂಡಿದ್ದರು.

T20 ವಿಶ್ವಕಪ್‌ 2022: ಸ್ವಲ್ಪ ಯಾಮಾರಿದ್ರೂ ಈ 4 ಭಾರತದ ಸ್ಟಾರ್‌ ಆಟಗಾರರು ಮಿಸ್

ಮೊದಲ ಎಸೆತದಲ್ಲೇ ಫೈನಲ್ ತಲುಪಿದ್ದ ಚಾಂಪಿಯನ್ ಅಥ್ಲೀಟ್

ಮೊದಲ ಎಸೆತದಲ್ಲೇ ಫೈನಲ್ ತಲುಪಿದ್ದ ಚಾಂಪಿಯನ್ ಅಥ್ಲೀಟ್

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಾವು ಎಸೆದ ಮೊದಲ ಎಸೆತವನ್ನು 88.39 ಮೀಟರ್ ದೂರಕ್ಕೆ ಎಸೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಯಂತೆಯೇ ಅವರು ಫೈನಲ್‌ಗೇರಿದ್ದರು.

ಯುಎಸ್‌ಎಯಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಎಸೆತದ ಅರ್ಹತಾ ಸುತ್ತು ಹೇವಾರ್ಡ್ ಫೀಲ್ಡ್‌ನಲ್ಲಿ ನಡೆಯಿತು. ಅರ್ಹತಾ ಸುತ್ತಿನ ಗ್ರೂಪ್‌ ಎ ವಿಭಾಗದಲ್ಲಿ ಕಣಕ್ಕಿಳಿದ ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲಿಯೇ 88.39 ಮೀಟರ್‌ನಷ್ಟು ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾದರು. ಫೈನಲ್ ಹಂತಕ್ಕೆ ನೇರವಾಗಿ ಅರ್ಹತೆಯನ್ನು ಪಡೆಯಲು ಇರುವ 83.0 ಮೀಟರ್‌ಗಳ ಗುರಿಗಿಂತ ಬಹಳ ಮುಂದಿರುವ ಕಾರಣ ನೀರಜ್ ಮೊದಲ ಪ್ರಯತ್ನದಲ್ಲಿಯೇ ಫೈನಲ್ ಹಂತಕ್ಕೆ ಅರ್ಹತೆಯನ್ನು ಸಂಪಾದಿಸಿದ್ದರು.

ಆದ್ರೆ ಫೈನಲ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಎಸೆದ ದೂರಕ್ಕಿಂತ ಕೊಂಚ ಕಡಿಮೆ ಎಸೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಆದ್ರೆ ಭಾರತಕ್ಕೆ ಇದು ಐತಿಹಾಸಿಕ ಬೆಳ್ಳಿ ಪದಕವಾಗಿರುವುದು ವಿಶೇಷ.

Story first published: Sunday, July 24, 2022, 9:09 [IST]
Other articles published on Jul 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X