ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್: ಆಘಾತಕಾರಿ ಸೋಲು ಅನುಭವಿಸಿದ ವಿನೀಶ್ ಫೋಗಟ್

World Wrestling championships: Indian Wrestler Vinesh Phogat defeated in qualification round

ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಭಾರತದ ಸ್ಟಾರ್ ರೆಸ್ಲರ್ ವಿನೀಶ್ ಫೋಗಟ್ ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ. 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮಂಗೋಲಿಯಾದ ಎದುರಾಳಿಯ ವಿರುದ್ಧ ಅರ್ಹತಾ ಸುತ್ತಿನಲ್ಲಿ ವಿನೀಶ್ ಸೋಲು ಅನುಭವಿಸಿದ್ದಾರೆ.

ಮಂಗೋಲಿಯಾದ ಖುಲನ್ ಬಾತ್‌ಖುಯಾಗ್ ವಿರುದ್ಧ ನಡೆದ ಪಂದ್ಯದಲ್ಲಿ ಅಂಕಗಳ ಆಧಾರದಲ್ಲಿ ವಿನೀಶ್ ಫೋಗಟ್ 0-7 ಅಂತರದಿಂದ ಸೋಲು ಅನುಭವಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕಾರಣ ಫೋಗಟ್ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಹೀಗಾಗಿ ಈ ಟೂರ್ನಿಯಲ್ಲಿಯೂ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದರು.

ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

ಮೊದಲ ಅವಧಿಯ ಅಂತ್ಯದ ಸಂದರ್ಭದಲ್ಲಿ ಫೋಹಟ್ 3-0 ಅಂತರದಿಂದ ಹಿಂದಿದ್ದರು. ಕೆಲ ಅಂಕಗಳನ್ನು ಪಡೆಯುವ ಪ್ರಯತ್ನ ನಡೆಸಿ ಎದುರಾಳಿ ವಿರುದ್ಧ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಯಿತಾದರೂ ಅದರಲ್ಲಿ ಯಶಸ್ಸು ಸಾಧ್ಯವಾಗಲಿಲ್ಲ. ಆದರೆ ಬಾತ್‌ಖುಯಾಗ್ ಅಂತಿಮ ಕ್ಷಣದಲ್ಲಿ ವಿನೀಶ್ ಅವರನ್ನು ಮ್ಯಾಟ್‌ ಮೇಲೆ ಕೆಡವುವ ಮೂಲಕ ನಾಲ್ಕು ಅಂಕವನ್ನು ಸಂಪಾದಿಸಿದರು.

2019ರಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ವಿನೀಶ್ ಫೋಗಟ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಇನ್ನು ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದ ಫ್ರಿ ಸ್ಟೈಲ್‌ನಲ್ಲಿ ಶ್ರೀಲಂಕಾದ ಚಮೋಡಿಯಾ ಕೆಶಾನಿ ಮದುರವಲಗೆ ವಿರುದ್ಧ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು ಈ ಸುತ್ತಿನಲ್ಲಿ ಸೋಲು ಅನುಭವಿಸಿದರೂ ವಿನೀಶ್ ಫೋಗಟ್ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಇನ್ನೂ ಹೊಂದಿದ್ದಾರೆ.

ಟಿ20 ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ ಬೌಚರ್ ರಾಜೀನಾಮೆ!ಟಿ20 ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ ಬೌಚರ್ ರಾಜೀನಾಮೆ!

ಇನ್ನು ಮತ್ತೊಂದೆಡೆ ಭಾರತದ ನೀಲಮ್ ಸಿರೋಹಿ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಎರಡು ಬಾರಿಯ ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತೆ ರೊಮೇನಿಯಾದ ಎಮಿಲಿಯಾ ಅಲಿನಾ ವುಕ್ ವಿರುದ್ಧ 0-10 ಅಂತರದಿಂದ ಸೋಲು ಅನುಭವಿಸಿದರು. ನೀಲಮ್ ಅವರು 4-2 ರಿಂದ ಹಂಗೇರಿಯ ಸಿಮೊನೆಟ್ಟಾ ಟೈಮಾ ಸ್ಜೆಕರ್ ಅವರನ್ನು ಸೋಲಿಸುವ ಮೂಲಕ ತಮ್ಮ ಅರ್ಹತಾ ಸುತ್ತನ್ನು ಗೆದ್ದುಕೊಂಡಿದ್ದಾರೆ. ಅಲ್ಲದೆ, ಭಾರತದ ಶಫಾಲಿ ಅರ್ಹತಾ ಸುತ್ತಿನಲ್ಲಿ ಫ್ರಾನ್ಸ್‌ನ ಕೌಂಬಾ ಲಾರೊಕ್ ವಿರುದ್ಧ 10-0 ಅಂತರದಿಂದ ಸೋತರು. 2022 ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗಳು ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿದ್ದು ಇದು ಸೆಪ್ಟೆಂಬರ್ 10 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 18ರಂದು ಮುಕ್ತಾಯಗೊಳ್ಳಲಿದೆ.

Story first published: Tuesday, September 13, 2022, 23:36 [IST]
Other articles published on Sep 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X