ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

80 ಅಂಕಪಡೆದ ಕುಸ್ತಿಪಟುಗೆ ಪ್ರಶಸ್ತಿಯಿಲ್ಲ, ಸೊನ್ನೆ ಅಂಕದ ಕೊಹ್ಲಿಗೆ ಪ್ರಶಸ್ತಿ!

Wrestler Bajrang Punia going to court for not giving him the Khel Ratna award

ನವದೆಹಲಿ, ಸೆಪ್ಟೆಂಬರ್ 21: ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಮಹಿಳಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರಿಗೆ ಭಾರತದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ 'ರಾಜೀವ್‌ ಗಾಂಧಿ ಖೇಲ್‌ ರತ್ನ' ಗೌರವ ನೀಡಲಾಗಿದೆ. ಆದರೆ ಕೊಹ್ಲಿಗೆ ಪ್ರಶಸ್ತಿ ನೀಡಿರುವುದಕ್ಕೆ ಕೆಲವು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಟಗಾರರ ಪ್ರದರ್ಶನ ಆಧರಿಸಿ ನೀಡಲಾಗುವ ಅಂಕಪಟ್ಟಿಯಲ್ಲಿ ಕುಸ್ತಿಪಟು ಭಜರಂಗ್ ಪುನಿಯಾ ಅವರು 80 ಅಂಕಗಳೊಂದಿಗೆ ಟಾಪ್‌ನಲ್ಲಿದ್ದಾರೆ ಆದರೆ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಪರಿಗಣಿಸಿಲ್ಲ ಎಂಬುದು ಅವರ ಆಂಭೋಣ ಇದನ್ನು ವಿರೋಧಿಸಿ ಅವರು ನ್ಯಾಯಾಲಯದ ಮೊರೆ ಸಹ ಹೋಗಲಿದ್ದಾರಂತೆ.

ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಖೇಲ್ ರತ್ನ ಪ್ರಶಸ್ತಿ ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಖೇಲ್ ರತ್ನ ಪ್ರಶಸ್ತಿ

ಕ್ರಿಕೆಟ್‌ ಒಲಿಂಪಿಕ್‌ ಕ್ರೀಡೆ ಅಲ್ಲದ ಕಾರಣ ಅಥ್ಲೆಟಿಕ್ಸ್‌ನಂತೆ ಪ್ರದರ್ಶನ ಆಧರಿಸಿ ಅಂಕ ನೀಡುವ ಪರಿಪಾಟ ಇಲ್ಲ. ಆದರೆ ಕೊಹ್ಲಿ ಜೊತೆಗೆ ಪ್ರಶಸ್ತಿಗೆ ಆಯ್ಕೆ ಆಗಿರುವ ಮೀರಾಬಾಯಿ ಚಾನು ಅವರ ಪ್ರದರ್ಶನ ಅಂಕ 40 ಇದೆ ಅವರಿಗಿಂತಲೂ ಹೆಚ್ಚು ಅಂಕ ಪಡೆದ ಕ್ರೀಡಾಪಟುಗಳು ಕೆಲವರಿದ್ದಾರೆ.

ಕುಸ್ತಿಪಟು ಭಜರಂಗ್ ಪುನಿಯಾ ಹಾಗೂ ಮಹಿಳಾ ಕುಸ್ತಿಪಟು ವಿನಿಶಾ ಫೋಗಟ್‌ ಸಮವಾಗಿ 80 ಅಂಕ ಗಳಿಸಿದ್ದಾರೆ ಆದರೆ ಇವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಭಜರಂಗ್ ಪುನಿಯಾ ನಿನ್ನೆ ಕ್ರೀಡಾ ಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ 'ಅನ್ಯಾಯ'ದ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ಘೋಷಿಸಿದರು.

11 ಮಂದಿಯ ಸಮಿತಿಯು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ಇನ್ನೂ ಕೆಲವು ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಆಟಗಾರರನ್ನು ಹಾಗೂ ಕೋಚ್‌ಗಳನ್ನು ಆಯ್ಕೆ ಮಾಡುತ್ತದೆ.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ 80 ಪಾಯಿಂಟ್ಸ್‌, ಬೆಳ್ಳಿ ಗೆದ್ದರೆ 70 ಅಂಕ, ಕಂಚು ಗೆದ್ದರೆ 55 ಅಂಕಗಳು ಕ್ರೀಡಾಪಟುವಿನ ಖಾತೆಗೆ ಸೇರಿಕೊಳ್ಳುತ್ತದೆ. ಹಾಗೇ ವಿಶ್ವಚಾಂಪಿಯನ್‌ಶಿಪ್‌, ಏಷಿಯನ್ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿ ವಿವಿಧ ಪದಕಗಳನ್ನು ಗೆದ್ದವರಿಗೆ ವಿವಿಧ ಅಂಕಗಳು ನೀಡಲಾಗುತ್ತದೆ.

Story first published: Friday, September 21, 2018, 14:33 [IST]
Other articles published on Sep 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X