ಫೆಬ್ರವರಿ 22ರಿಂದ ಧಾರವಾಡದಲ್ಲಿ ಗಮನ ಸೆಳೆಯಲಿದೆ 'ಕರ್ನಾಟಕ ಕುಸ್ತಿ ಹಬ್ಬ'

By Manjunath Bhadrashetti
Wretling competition Karnataka Kusti Habba to be held in Dharwad

ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 'ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘ'ದ ಸಹಯೋಗದಲ್ಲಿ ಫೆಬ್ರವರಿ 22 ರಿಂದ 25 ರವರೆಗೆ 4 ದಿನ ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ 'ಕರ್ನಾಟಕ ಕುಸ್ತಿ ಹಬ್ಬ' ಹಮ್ಮಿಕೊಂಡಿದೆ.

ದೆಹಲಿ ಏಷ್ಯಾನ್ ಚಾಂಪಿಯನ್‌ಶಿಪ್‌ಲ್ಲಿ ಚೀನಾ ರಸ್ಲರ್‌ಗಳು ಸ್ಪರ್ಧಿಸುತ್ತಿಲ್ಲ

ದೇಶದ ಹೆಸರಾಂತ ಸುಮಾರು 1200 ಕ್ಕೂ ಹೆಚ್ಚು ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ 3 ಅಖಾಡಗಳಲ್ಲಿ 30 ಪ್ರತ್ಯೇಕ ತೂಕಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 80 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಪಾರಿತೋಷಕಗಳನ್ನು ನೀಡಲಾಗುವುದು.

ICC T20I ranking: ನಂ.1 ಸ್ಥಾನಿ ಅಝಮ್ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್!

ಅಜರ್‍ಬೈಜಾನ್, ಜಾರ್ಜಿಯಾ,ಇರಾನ್ ದೇಶಗಳ ಕುಸ್ತಿಪಟುಗಳ ಜೊತೆಗೆ ಒಲಂಪಿಕ್ ಪದಕ ವಿಜೇತ್, ಯೋಗೇಶ್ವರ ದತ್, ಅರ್ಜುನ್ ಪ್ರಶಸ್ತಿ ಐಜಿಪಿ ಕರ್ತಾರ ಸಿಂಗ್, ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್, ಅಂತರಾಷ್ಟ್ರೀಯ ಕುಸ್ತಿಪಟು ಮಹ್ಮದ ಮುರಾಡಿ, ಭಾರತ ಕೇಸರಿ ಉಮೇಶ ಚೌದರಿ, ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳಾದ ಅಂಶು ಮಲ್ಲಿಕ್, ಜೈಲಾ ನಾಗೀಜಡೆ, ನೈನಾ, ಸಭೀರಾ ಅಲಿಯೆವಾ ಅಲಹವರ್ಡಿ ಮೊದಲಾದ ಹೆಸರಾಂತ ಕುಸ್ತಿ ಪಟುಗಳು ಈ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.

Wretling competition Karnataka Kusti Habba to be held in Dharwad

ಎರಡನೇ ಕರ್ನಾಟಕ ಕುಸ್ತಿ ಹಬ್ಬ

ಕುಸ್ತಿ ಒಲಂಪಿಕ್ ಕ್ರೀಡೆಯಾಗಿದ್ದು, ಯುವ ಪ್ರತಿಭೆಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಕುಸ್ತಿ ಹಬ್ಬವನ್ನು ಆಚರಿಸುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿನಿಂದ "ಕರ್ನಾಟಕ ಕುಸ್ತಿ ಹಬ್ಬ"ವನ್ನುರಾಜ್ಯ ಮಟ್ಟದಲ್ಲಿ ಆಯೋಜಿಸಿಕೊಂಡು ಬರುತ್ತಿದೆ. 2019-20 ನೇ ಸಾಲಿನ ಈ ವರ್ಷದ ಎರಡನೇ ಕರ್ನಾಟಕ ಕುಸ್ತಿ ಹಬ್ಬವು ಸಾಂಸ್ಕøತಿಕ ನಗರಿ ಧಾರವಾಡದಲ್ಲಿ ಜರುಗುತ್ತಿದೆ.

ವಯೋಮಿತಿ ಎಷ್ಟು?

ಕರ್ನಾಟಕ ಕುಸ್ತಿ ಹಬ್ಬದಲ್ಲಿ 14, 17 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ವಿವಿಧ ತೂಕದ ವಿಭಾಗಗಳಲ್ಲಿ ಕುಸ್ತಿಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ಕುಸ್ತಿ ಹಬ್ಬದ ಕುಸ್ತಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ಆಸಕ್ತ ಕುಸ್ತಿಪಟುಗಳು ತಮ್ಮ ಜಿಲ್ಲೆಗಳಿಂದ ನೇರವಾಗಿ ಬಂದು ಭಾಗವಹಿಸಬಹುದು. ಕರ್ನಾಟಕದ ಎಲ್ಲ ಜಿಲ್ಲೆಗಳ ಕುಸ್ತಿಪಟುಗಳು ಈ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು.

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ, ಬೌಲ್ಟ್ ಸೇರ್ಪಡೆ

ಭತ್ಯೆ ಹಾಗೂ ವಸತಿ ಊಟೋಪಹಾರ ವ್ಯವಸ್ಥೆ

ಕರ್ನಾಟಕ ಕೇಸರಿ ವಿಭಾಗದಲ್ಲಿ ಭಾಗವಹಿಸುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಇತರೆ ತೂಕದ ವಿಭಾಗಗಳಲ್ಲಿ ಭಾಗವಹಿಸುವಂತಿಲ್ಲ. ಭಾಗವಹಿಸುವ ಕುಸ್ತಿಪಟುಗಳಿಗೆ ಪ್ರಯಾಣ ಭತ್ಯೆ ಹಾಗೂ ವಸತಿ ಊಟೋಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಕುಸ್ತಿ ಪಂದ್ಯದ ಸಮಯದಲ್ಲಿ ಗೈರುಹಾಜರಾಗುವ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಹಬ್ಬದ ಯಾವುದೇ ಸವಲತ್ತುಗಳನ್ನು ನೀಡಲಾಗುವುದಿಲ್ಲ. ಭಾಗವಹಿಸುವ ಕುಸ್ತಿಪಟುಗಳ ಉದ್ದೀಪನಾ ಮದ್ದು ಪರೀಕ್ಷೆಯನ್ನು NADA ಪರೀಕ್ಷಾ ತಂಡದಿಂದ ನಡೆಸಲಾಗುವುದು.

ನೋಂದಣಿ ಯಾವಾಗ? ಎಲ್ಲಿ?

ಫೆ. 22 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಕುಸ್ತಿಪಟುಗಳ ದೇಹ ತೂಕವನ್ನು ತೆಗೆದುಕೊಳ್ಳಲಾಗುವುದು. ವಯೋಮಿತಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಜನನ ನೋಂದಣಿ ಅಧಿಕಾರಿಗಳಿಂದ ಜನನ ಪ್ರಮಾಣ ಪತ್ರ, ಆಧಾರಕಾರ್ಡ್, 4 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹಾಗೂ ಬ್ಯಾಂಕ್ ಖಾತೆಯ ಪ್ರತಿಯನ್ನು ತರಬೇಕು. 90935,9964245769, 7892042714, 9481966245 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

For Quick Alerts
ALLOW NOTIFICATIONS
For Daily Alerts

Story first published: Monday, February 17, 2020, 21:50 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more