ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವರ್ಲ್ಡ್ ಟ್ರೇಡ್ ಸೆಂಟರಿನಲ್ಲಿ ದೇಶದ ಏಕೈಕ ಲಂಬ ಓಟ

By Mahesh

ಬೆಂಗಳೂರು, ಆಗಸ್ಟ್ 10: ನಗರದ ಕ್ರೀಡೋತ್ಸಾಹಿಗಳು ದೇಶದ ಏಕೈಕ ಲಂಬ ಓಟದಲ್ಲಿ ಪಾಲ್ಗೊಂಡು ಖುಷಿಯಲ್ಲಿ ನಲಿದಾಡಿದ್ದಾರೆ ಬ್ರಿಗೇಡ್ ಗೇಟ್ ವೇನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಬಳಿ ಎರಡನೇ ಆವೃತ್ತಿಯ ಡಬ್ಲ್ಯುಟಿಸಿ ಸ್ಕೈಸ್ಕ್ರಾಪರ್ ಡ್ಯಾಶ್ ಲಂಬ ಓಟ ಭಾನುವಾರ ಯಶಸ್ವಿಯಾಗಿ ನೆರವೇರಿತು.

ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಲಂಬ ಓಟವನ್ನು ಬ್ರಿಗೇಡ್ ಗ್ರೂಪ್ ಆಯೋಜಿಸಿತ್ತು. 850 ಕ್ಕೂ ಹೆಚ್ಚು ಮಂದಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಡಬ್ಲ್ಯುಟಿಸಿ ಸ್ಕೈಸ್ಕ್ರಾಪರ್ ಡ್ಯಾಶ್ ನಲ್ಲಿ ಸ್ಪರ್ಧಿಗಳು ಬ್ರಿಗೇಡ್ ಆವರಣ, ಶೆರಟಾನ್ ಹಾಗೂ ಓರಿಯಾನ್ ಮಾಲ್ ಸುತ್ತಲೂ 2.5 ಕಿ.ಮೀ. ವ್ಯಾಪ್ತಿಯಲ್ಲಿ ಓಟ ನಡೆಸಿದರು. 850 ಮೆಟ್ಟಿಲುಗಳನ್ನು ಹತ್ತುವ ಮೂಲಕ ಕಟ್ಟಡದ ತುತ್ತತುದಿಯಲ್ಲಿ ಡ್ಯಾಶ್ ಮುಕ್ತಾಯಗೊಂಡಿತು.

ಸ್ಕೈಸ್ಕ್ರಾಪರ್ ಡ್ಯಾಶ್ ನಲ್ಲಿಯೇ ಆಯೋಜಿಸಲಾಗಿದ್ದ ದಿ ಎವರೆಸ್ಟ್ ಚಾಲೆಂಜ್ ನಗರದ ಹಲವು ಮ್ಯಾರಥಾನ್ ಉತ್ಸಾಹಿಗಳ ಗಮನ ಸೆಳೆಯಿತು. ಸ್ಪರ್ಧಿಗಳು ವರ್ಲ್ಡ್ ಟ್ರೇಡ್ ಸೆಂಟರ್ ನ 850 ಮೆಟ್ಟಿಲುಗಳನ್ನು (31 ಅಂತಸ್ತು) ಅಂದರೆ ಮೌಂಟ್ ಎವರೆಸ್ಟ್ (8,848 ಮೀ.) ಎತ್ತರ ಸರಿಗಟ್ಟುವ ಒಟ್ಟು 70 ಪಟ್ಟು ಎತ್ತರ ಹತ್ತಬೇಕಿತ್ತು.

ಗುಂಪಿನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುವ ಅವಕಾಶದಿಂದ ಸ್ಪರ್ಧಿಗಳಿಗೆ ಇದು ಭಿನ್ನ ಅನುಭವವಾಗಿತ್ತು. ಸ್ಪರ್ಧಿಗಳು 10 ಜನರ ಗುಂಪಿನಲ್ಲಿ ಓಟ ಆರಂಭಿಸಬಹುದಾಗಿತ್ತು ಮತ್ತು ತಮ್ಮ ನಡುವೆಯೇ ಓಟವನ್ನು ಹಂಚಿಕೊಂಡು ಓಟ ಪೂರ್ಣಗೊಳಿಸಲು ಅಗತ್ಯವಿರುವ ಶ್ರೇಯಾಂಕ ಗಳಿಸಬಹುದಾಗಿತ್ತು.

ವೇದಾ ಬಲ್ದೋಟಾ- ದಿ ಎವರೆಸ್ಟ್ ಚಾಲೆಂಜ್

ವೇದಾ ಬಲ್ದೋಟಾ- ದಿ ಎವರೆಸ್ಟ್ ಚಾಲೆಂಜ್

ವೇದಾ ಬಲ್ದೋಟಾ (13 ನಿಮಿಷ 16 ಸೆಕೆಂಡ್ಸ್) ದಿ ಎವರೆಸ್ಟ್ ಚಾಲೆಂಜ್ ಗೆದ್ದಿದ್ದು, ಮೆಡಲ್ ಹಾಗೂ 25,000 ರು ನಗದು ಬಹುಮಾನ ಗಳಿಸಿದ್ದಾರೆ. ಭಾನುವಾರ ಕಳೆಯಲು ವಿನೂತನ ಮಾರ್ಗ ಎಂದು ಅಂದುಕೊಂಡೆವು. ನಾವೆಲ್ಲಾ ಓಟದ ಉತ್ಸಾಹಿಗಳಾಗಿದ್ದು ಒಟ್ಟಾಗಿ ಕಾರ್ಯನಿರ್ವಹಿಸುವ ಮಾರ್ಗ ರೂಪಿಸಲು ಇದು ಉತ್ತಮವಾಗಿದೆ. ಇದು ವಿಶಿಷ್ಟ ಸವಾಲಾಗಿತ್ತು, ನಾವು ಇದನ್ನು ಪೂರ್ಣಗೊಳಿಸಿರುವುದು ಹೆಮ್ಮೆ ತಂದಿದೆ ಎಂದು ವೇದಾ ತಿಳಿಸಿದರು

ಮೊದಲು ಹಾಗೂ ಎರಡನೇ ಸ್ಥಾನ ಪಡೆದವರು

ಮೊದಲು ಹಾಗೂ ಎರಡನೇ ಸ್ಥಾನ ಪಡೆದವರು

2K ಡ್ಯಾಶ್ ಕೆಟಗೆರಿ (ಮಹಿಳೆ)
ವೇದಾ ಬಲ್ದೋಟಾ -13 Min 16 Sec
ಅರ್ಪಿತಾ ನಾಗರಾಜ್ 17 Min 48 Sec

2K ಡ್ಯಾಶ್ ಕೆಟಗೆರಿ (ಪುರುಷ)
ಡಾನ್ ವರ್ಗೀಸ್ 11 Min 20 Sec
ಕಿರಣ್ 12 Min 02 Sec
ದಿ ಡ್ಯಾಶ್ ಕೆಟಗೆರಿ (ಪುರುಷ)
ಅಲ್ಫಿಯೂಸ್ ಮರಿಯಾ 5 Min
ರಾಜೀವ್ ಕೆಆರ್ 5 Min 45 Sec

ದಿ ಡ್ಯಾಶ್ ಕೆಟಗೆರಿ (ಮಹಿಳೆ)
ನೀರಾ ಕತ್ವಾಲ್ -7 Min 02 Sec
ಅಂಕಿತಾ ಗೌರ್ 7 Min 48 Sec

ಮೆಟ್ಟಿಲು ಓಟ ಸ್ಪರ್ಧೆಗೆ ಎಲ್ಲೆಡೆ ಪ್ರಶಂಸೆ

ಮೆಟ್ಟಿಲು ಓಟ ಸ್ಪರ್ಧೆಗೆ ಎಲ್ಲೆಡೆ ಪ್ರಶಂಸೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಮೆಟ್ಟಿಲು ಓಟ ಸ್ಪರ್ಧೆಗೆ ಎಲ್ಲೆಡೆ ಪ್ರಶಂಸೆ ಇದೆ. ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ ದಿ ಸ್ಕೈಸ್ಕ್ರಾಪರ್ ಡ್ಯಾಶ್ ಗೆ ದಿ ವರ್ಲ್ಡ್ ಟವರ್ ರನ್ನಿಂಗ್ ಅಸೋಸಿಯೇಷನ್ ಮನ್ನಣೆ ಇದೆ ಹಾಗೂ ಅವರ ವರ್ಲ್ಡ್ ಕಪ್ ಶ್ರೇಯಾಂಕಕ್ಕೆ ಇದು ಪರಿಗಣಿಸಲ್ಪಡುತ್ತದೆ. ಪ್ರತಿ ಸ್ಪರ್ಧಿಗೂ ಬಹುಮಾನಗಳೊಂದಿಗೆ ಕಾಲಪ್ರಮಾಣ ಪತ್ರ ನೀಡಲಾಗಿದೆ.

ದಿ ಎವರೆಸ್ಟ್ ಚಾಲೆಂಜ್ ಕೊಂಚ ಕಷ್ಟಕರ

ದಿ ಎವರೆಸ್ಟ್ ಚಾಲೆಂಜ್ ಕೊಂಚ ಕಷ್ಟಕರ

ಇದು ಅತ್ಯುತ್ತಮ ಕಾರ್ಯಕ್ರಮವಾಗಿತ್ತು ಮತ್ತು ಅದ್ಭುತವಾಗಿ ಇದನ್ನು ನಿರ್ವಹಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಓಟದ ವಿಭಾಗದಲ್ಲಿ ಬೆಂಗಳೂರು ತನ್ನ ಹೆಸರು ದಾಖಲಿಸುತ್ತಿರುವುದು ಶ್ರೇಷ್ಠವಾಗಿದೆ. ದಿ ಎವರೆಸ್ಟ್ ಚಾಲೆಂಜ್ ಕೊಂಚ ಕಷ್ಟಕರ ಹಾಗೂ ವಿದೇಶಗಳಲ್ಲಿ ಆಯೋಜಿಸಲಾಗುವ ಹಲವು ಸ್ಪರ್ಧೆಗಳನ್ನು ಮೀರಿಸದಿದ್ದರೂ ಅದಕ್ಕೆ ಸಮನಾಗಿದೆ.

ಬೆಂಗಳೂರಿನ ಹವಾಮಾನ ಲಂಬ ಓಟಕ್ಕೆ ಸೂಕ್ತ

ಬೆಂಗಳೂರಿನ ಹವಾಮಾನ ಲಂಬ ಓಟಕ್ಕೆ ಸೂಕ್ತ

ಬೆಂಗಳೂರಿನ ಹವಾಮಾನ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತವಾಗಿದೆ. ಜತೆಗೆ ಈ ನಗರದಲ್ಲಿ ಸದಾ ಮುಂದಿನ ಸವಾಲುಗಳಿಗಾಗಿ ಎದುರು ನೋಡುವ ಓಟದ ಉತ್ಸಾಹಿಗಳಿದ್ದಾರೆ. ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಕಾರ್ಯಕ್ರಮದಲ್ಲಿ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಮುಂದಿನ ಆವೃತ್ತಿಗಳಲ್ಲಿ ಇದು ಮತ್ತಷ್ಟು ಹೆಚ್ಚುವುದನ್ನು ನೋಡಬಹುದು ಎಂದು ಕಾರ್ಯಕ್ರಮದ ಆಯೋಜಕರು ಹಾಗೂ ಸ್ಪೋರ್ಟ್ 365 ಸಂಸ್ಥೆಯ ಸಂಸ್ಥಾಪಕರಾದ ಅಜಯ್ ಗುಪ್ತಾ ಹೇಳಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X