ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೋಮನ್ ರೇನ್ಸ್ ಉಳಿಸಲು ರಿಂಗ್‌ಗೆ ಮರಳಿದ ಅಂಡರ್ ಟೇಕರ್: ವಿಡಿಯೋ

WWE RAW Results: The Undertaker returns to save Roman Reigns

ವಾಷಿಂಗ್ಟನ್, ಜೂನ್ 27: ವಾಷಿಂಗ್ಟನ್‌ನ ಎವೆರೆಟ್ ನಲ್ಲಿರುವ ಏಂಜಲ್ ಆಫ್ ದ ವಿಂಡ್ಸ್ ಅರೇನಾ ರೋಮಾಂಚಕ ರಸ್ಲಿಂಗ್ ಕಾಳಗವೊಂದಕ್ಕೆ ಸಾಕ್ಷಿಯಾಯ್ತು. ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಸ್ಟಾರ್ ರೋಮನ್ ರೇನ್ಸ್ ಅವರನ್ನು ಉಳಿಸಲು ಡಬ್ಲ್ಯೂಡಬ್ಲ್ಯೂಇ ದಂತಕತೆ ಅಂಡರ್ ಟೇಕರ್ ಆಗಮಿಸಿ ರಸ್ಲಿಂಗ್ ಪ್ರೇಮಿಗಳ ಮನಸೂರೆಗೊಳಿಸಿದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಂಗಳವಾರ (ಜೂನ್ 25) ನಡೆದ ಡಬ್ಲ್ಯೂಡಬ್ಲ್ಯೂಇ ರಾ ಸೆಣಸಾಟದ 'ಟು ಆನ್ ವನ್ ಹ್ಯಾಂಡಿಕ್ಯಾಪ್' ಪಂದ್ಯದಲ್ಲಿ ಶೇನ್ ಮೆಕ್ ಮಹೊನ್ ಮತ್ತು ಡ್ರೂ ಮ್ಯಾಕ್‌ಇಂಟೈರ್ ಜೋಡಿ ರೋಮನ್ ರೇನ್ಸ್ ವಿರುದ್ಧ ಕಾದಾಟಕ್ಕಿಳಿದಿತ್ತು. ಪಂದ್ಯದಲ್ಲಿ ಮಹೊನ್-ಮ್ಯಾಕ್‌ಇಂಟೈರ್ ಮೇಲುಗೈ ಸಾಧಿಸಿದರು.

ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವ ಆಟಗಾರನ ಹೆಸರಿಸಿದ ಮೈಕಲ್ ಕ್ಲಾರ್ಕ್!ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವ ಆಟಗಾರನ ಹೆಸರಿಸಿದ ಮೈಕಲ್ ಕ್ಲಾರ್ಕ್!

ಹಿನ್ನಡೆ ಅನುಭವಿಸಿದ ರೋಮನ್ ರೇನ್ಸ್ ಅವರ ಮೇಲೆ ಎದುರಾಳಿ ಜೋಡಿಯ ದಾಳಿ ಮುಂದುವರೆಯಿತು. ಪಂದ್ಯದ ರೆಫರಿಗಳ ನಿಯಂತ್ರಣಕ್ಕೂ ಬಾರದೆ ಮಹೊನ್-ಮ್ಯಾಕ್‌ಇಂಟೈರ್ ಜೋಡಿ ರೋಮನ್ ರೇನ್ಸ್ ಜೊತೆ ಬಡಿದಾಟ ಮುಂದುವರೆಸಿತ್ತು. ರೋಮನ್ ರೇನ್ಸ್ ಸಂಪೂರ್ಣ ಶಕ್ತಹೀನ ಸ್ಥಿತಿಯಲ್ಲಿದ್ದರು.

ಐಸಿಸಿ ವಿಶ್ವಕಪ್ 2019: ವಿಶ್ವದಾಖಲೆ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ!ಐಸಿಸಿ ವಿಶ್ವಕಪ್ 2019: ವಿಶ್ವದಾಖಲೆ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ!

ಶೇನ್ ಮೆಕ್ ಮಹೊನ್ ರಿಂಗ್‌ನ ಹಗ್ಗದ ಮೇಲೇರಿ ರೋಮನ್ ರೇನ್ಸ್ ಮೇಲೆ ಜಿಗಿದು ದಾಳಿ ನಡೆಸಲು ಮುಂದಾಗಿದ್ದರು. ಆಗ ಲೈಟ್‌ಗಳು ಆಫ್‌ ಆದವು. ಅರೇನಾದಲ್ಲಿ ಕತ್ತಲಾವರಿಸಿತು. ಚರ್ಚ್ ಬೆಲ್ ಬಾರಿಸುವ ಫೇಮಸ್ ಮ್ಯೂಸಿಕ್ ಕೇಳಿಬಂತು. 'ಡೆಡ್ ಮ್ಯಾನ್ ವಾಕಿಂಗ್' ಖ್ಯಾತಿಯ ಅಂಡರ್ ಟೇಕರ್ ಬರುವ ಮುನ್ಸೂಚನೆಯದು.

ಸುಮಾರು 3 ವಾರಗಳ ಬಳಿಕ ರಿಂಗ್‌ಗೆ ಮರಳಿದ್ದ ಟೇಕರ್, ಶೇನ್ ಮೆಕ್ ಮಹೊನ್ ಎದುರು ನಿಂತಿದ್ದರು. ಶೇನ್ ಮೆಕ್ ಮಹೊನ್ ಮತ್ತು ಡ್ರೂ ಮ್ಯಾಕ್‌ಇಂಟೈರ್ ಜೋಡಿಯನ್ನು ಸದೆಬಡಿದ ಅಂಡರ್ ಟೇಕರ್ ಇಬ್ಬರನ್ನೂ ರಿಂಗ್‌ನಿಂದಲೇ ಹೊರದಬ್ಬಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವಕಪ್ ಇತಿಹಾಸ ನಿರ್ಮಿಸಿದ ಆ್ಯರನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ!ವಿಶ್ವಕಪ್ ಇತಿಹಾಸ ನಿರ್ಮಿಸಿದ ಆ್ಯರನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ!

ಅಂದ್ಹಾಗೆ 1984ರಿಂದಲೇ ಡಬ್ಲ್ಯೂಡಬ್ಲ್ಯೂಇ ವೃತ್ತಿ ಬದುಕಿಗಿಳಿದ ಅಂಡರ್ ಟೇಕರ್ (ಮಾರ್ಕ್ ವಿಲಿಯಂ ಕ್ಯಾಲವೇ-ನಿಜ ಹೆಸರು) ಬಹಳಷ್ಟು ಡಬ್ಲ್ಯೂಡಬ್ಲ್ಯೂಇ ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ಗೆದ್ದಿದ್ದಾರೆ. 54ರ ಹರೆಯದವರಾಗಿರುವ ಅಂಡರ್ ಟೇಕರ್ ರಿಂಗ್‌ಗೆ ಮರಳಿದರೆ ಈಗಲೂ ಹಿಂದಿನ ಅದೇ ಡಬ್ಲ್ಯೂಡಬ್ಲ್ಯೂಇ ಕ್ರೇಜ್ ಅರೆನಾವನ್ನಾವರಿಸುತ್ತೆ.

Story first published: Sunday, September 1, 2019, 21:06 [IST]
Other articles published on Sep 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X