ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಯುವ ರೇಸರ್ ಯಶ್ ಆರಾಧ್ಯ ಸಾಧನೆ

By Mahesh
Yash Aradhya the young racer from Namma Bengaluru

ಬೆಂಗಳೂರು ಜೂನ್ 21 : ಬಹುರಾಷ್ಟ್ರೀಯ ಚಾಂಪಿಯನ್‍ಷಿಪ್‍ನಲ್ಲಿ ಸುಮಾರು 6 ವರ್ಷ ಗೋ ಕಾರ್ಟಿಂಗ್‍ನಲ್ಲಿ ಪ್ರಾಬಲ್ಯ ಹೊಂದಿದ್ದ, ಜೆ.ಕೆ ಟೈರ್ ನ್ಯಾಷನಲ್ ಚಾಂಪಿಯನ್‍ಷಿಪ್‍ನಲ್ಲಿ ಸ್ಪರ್ಧಿಸಿದ ಮೊದಲ ಬಾರಿಯೇ ನ್ಯಾಷನಲ್ ಚಾಂಪಿಯನ್ (ರೂಪಿ) ಕಿರೀಟ ಧರಿಸಿದ ಯಶ್ ಆರಾಧ್ಯ ಬೆಂಗಳೂರು ಬಾಲಕ. ಈತ ಬಿಷಪ್ ಕಾಟನ್ಸ್ ಬಾಯ್ಸ್ ಸ್ಕೂಲ್ ವಿದ್ಯಾರ್ಥಿ. ಟೀಂ ಎಂಸ್ಪೋರ್ಟ್ ರೇಸರ್. ಈಗ ಯಶ್ ಇನ್ನೂ ದೊಡ್ಡ ಲೀಗ್‍ನಲ್ಲಿ ತನ್ನ ಸಾಮಥ್ರ್ಯ ಪರೀಕ್ಷಿಸಲಿದ್ದಾರೆ.

ಪ್ರತಿಷ್ಠಿತ ಜೆಕೆ ಟೈರ್ ಫಾರ್ಮುಲಾ 4ಬಿಎಂಡಬ್ಲ್ಯು-ಎಫ್‍ಬಿ02 ಸ್ಪರ್ಧೆಯಲ್ಲಿ ಭಾಗವಹಿಸುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಜೆಕೆ ಬಿಎಂಡಬ್ಲ್ಯು ಟೈರ್ಸ್ ನಡೆಸಿದ ಅನೇಕ ರಾಷ್ಟ್ರೀಯ ಚಾಂಪಿಯನ್‍ಷಿಪ್‍ನಲ್ಲಿ ಗೆಲುವು ಸಾಧಿಸಿರುವುದರಿಂದ ಸ್ಕಾಲರ್‍ಷಿಪ್ ಡ್ರೈವ್ ಪಡೆದಿದ್ದಾರೆ. ಅಲ್ಲದೆ ಎಂಆರ್‍ಎಫ್ ಫಾರ್ಮುಲಾ 4:1600, 2018 (ಬಾಲಕನ 7ನೇ ಋತು) ಭಾಗವಹಿಸಲು ಜೆಎ ಮೋಟಾರ್ ಸ್ಪೋರ್ಟ್ಸ್ ಜತೆ ಸಹಿ ಹಾಕಿದ್ದಾರೆ. ಇದೆಲ್ಲದರ್ಲೂ ಇವರಿಗೆ ಮಾರ್ಗದರ್ಶಕ ಅಕ್ಬರ್ ಇಬ್ರಾಹಿಂ ಹಾಗೂ ಎಂಸ್ಪೋರ್ಟ್.

ಮುಂಬರುವ ಋತುವಿಗೆ ಸಜ್ಜಾಗಲು ಯಶ್ ಇತ್ತೀಚೆಗೆ ಕೊಯಮತ್ತೂರಿನಲ್ಲಿ ಫಾರ್ಮುಲಾ 4:1600 ಚಾಲನೆಯನ್ನು ಆರ್ಮಾನ್ ಇಬ್ರಾಹಿಂ ಮತ್ತು ಆದಿತ್ಯ ಪಟೇಲ್ ಅವರ ಹದ್ದಿನಗಣ್ಣಿನಡು ನಡೆಸಿದರು. ಯಶ್ ಇದೇ ಮೊದಲ ಬಾರಿಗೆ ಈ ರೇಸಿಂಗ್ ಕಾರನ್ನು ಚಾಲನೆ ಮಾಡಿದರು. ಅದಕ್ಕೆ ಬೇಗನೆ ಹೊಂದಿಕೊಂಡರು.

Yash Aradhya the young racer from Namma Bengaluru

ಚಿಕ್ಕ ವಯಸ್ಸಿನಿಂದಲೂ ಯಶ್‍ಗೆ ಗುರು ಆಗಿರುವ ಆರ್ಮಾನ್ ಹೇಳಿದ್ದು. 'ಯಶ್ ಮೋಟಾರ್ ಸ್ಪೋರ್ಟ್ ವೃತ್ತಿಜೀವನ ಆರಂಭ ಮಾಡಿದ ದಿನದಿಂದ ನಮ್ಮ ತಂಡದೊಂದಿಗೆ ಇದ್ದಾರೆ. ನಮ್ಮ ತಂಡ ಅವರಿಗಾಗಿ ಹಂತಹಂತದ ಕಾರ್ಯಕ್ರಮ ರೂಪಿಸಿದೆ. ಅದರಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಯಶ್ ಶ್ರಮಜೀವಿ. ಗಮನಹರಿಸುವ ಬಾಲಕ. ಈ ಋತುವಿನಲ್ಲಿ ಸಹ ಗುರಿ ತಲುಪಲು ಅವರು ಶ್ರಮಿಸುತ್ತಾರೆ.'

ಈ ಚಾಂಪಿಯನ್‍ಷಿಪ್‍ಗಳನ್ನು ಗಮನದಲ್ಲಿಟ್ಟುಕೊಂಡೇ ಯಶ್, ಶಾಲಾ ರಜಾ ದಿನಗಳನ್ನು ಅಭ್ಯಾಸಕ್ಕಾಗಿ ಬಳಸಿಕೊಂಡು, ಸುಮಾರು 45 ದಿನ ರಾಂಜಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಚೆನೈನಲ್ಲಿ ಕಠಿಣ ಅಭ್ಯಾಸ ನಡೆಸಿದರು. ಯಶ್, ಫಿಟ್ನೆಸ್ ಸಿದ್ಧತೆ ಕುರಿತು ಮಾತನಾಡಿದ ರಾಂಜಿ ಶ್ರೀನಿವಾಸನ್ ಹೇಳಿದ್ದು, 'ಯಾವುದೇ ಸಮಯದಲ್ಲಿ ಅತ್ಯುತ್ತಮ ಸಾಧನೆ ತೋರಲು ನಮ್ಮ ಸ್ಪರ್ಧಿಗಳು ಸಿದ್ಧರಿರುವಂತೆ ಮಾಡುತ್ತೇವೆ. ಯಶ್ ಅವರಲ್ಲಿ ಇದನ್ನು ಕರಗತ ಮಾಡಿಕೊಂಡಿದ್ದಾರೆ. 4 ವರ್ಷದಿಂದ ಅವರು ನಮ್ಮ ಜತೆ ಇದ್ದಾರೆ. ಈ ಅವಧಿಯಲ್ಲಿ ಅವರು ಬಲ, ವೇಗ ಹಾಗೂ ಮಿಂಚಿನ ರಿಪ್ಲೆಕ್ಸ್, ಸ್ಥಿರತೆಗೆ ಗಮನ ಹರಿಸಿದ್ದರೆ. ಅಂತಹ ಬದ್ಧ, ಕಿರಿಯ ವಯಸ್ಸಿನಲ್ಲೇ ಪ್ರಬುದ್ಧತೆ ಹೊಂದಿರುವ, ಗುರಿಯ ಬಗ್ಗೆ ದೃಷ್ಟಿ ಹೊಂದಿರುವ ಸ್ಪರ್ಧಿ ಅಪರೂಪ. ಮುಂದಿನ ದಿನಗಳಲ್ಲಿ ಅವರು ಗಮನ ಸೆಳೆಯುತ್ತಾರೆ.

Story first published: Thursday, June 21, 2018, 15:32 [IST]
Other articles published on Jun 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X