ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2020ರಲ್ಲಿ ಟೋಕಿಯೋ ಒಲಿಂಪಿಕ್ಸ್‌ನಿಂದ ಟಿ20 ವಿಶ್ವಕಪ್‌ವರೆಗೆ ಕೊರೊನಾ ಬಲಿಯಾದ ಟೂರ್ನಿಗಳು

Year Ender 2020: Llist of mega sporting events, which got postponed in 2020 due to COVID-19 pandemic

ಸಾಲು ಸಾಲು ಕ್ರೀಡಾ ಟೂರ್ನಿಗಳನ್ನು ಎದುರು ನೋಡುತ್ತಾ ಆರಂಭವಾಗಿದ್ದ 2020 ಅಂತ್ಯವಾಗಿದ್ದು ಮಾತ್ರ ನೀರಸವಾಗಿ. ಕೊರೊನಾ ವೈರಸ್ ಕ್ರೀಡಾ ಲೋಕವನ್ನು ಇನ್ನಿಲ್ಲದಂತೆ ಕಾಡಿತ್ತು. ನಡೆದ ಟೂರ್ನಿಗಳಿಗಿಂತ ರದ್ದಾದ ಟೂರ್ನಿಗಳೇ ಹೆಚ್ಚಾಗಿದೆ. ಕ್ರೀಡಾಲೋಕ ಈ ವೈರಸ್‌ನ ಕಾರಣದಿಂದಾಗಿ ಇನ್ನೂ ಚೇತರಿಕೆಯನ್ನು ಕಂಡಿಲ್ಲವಾದರೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮತ್ತೆ ಚಾಲನೆ ಪಡೆದುಕೊಂಡಿದೆ.

ಒಲಿಂಪಿಕ್ಸ್‌ನಂತಾ ಅತ್ಯಂತ ಮಹತ್ವದ ಕ್ರೀಡಾಕೂಟದಿಂದ ಹಿಡಿದು ಟಿ20 ವಿಶ್ವಕಪ್‌ವರೆಗೆ ಸಾಕಷ್ಟು ಕ್ರೀಡಾ ಟೂರ್ನಿಗಳನ್ನು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಅದೆಲ್ಲವನ್ನೂ ರದ್ದುಗೊಳಿಸುವ ಅನಿವಾರ್ಯತೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಬಂದಿತ್ತು.

ಭಾರತದಿಂದಲೇ ಆಡಿ, 520 ಮಿ ಡಾಲರ್ ಪವರ್‌ಬಾಲ್ ಜಾಕ್‌ಪಾಟ್‌ ಗೆಲ್ಲಿಭಾರತದಿಂದಲೇ ಆಡಿ, 520 ಮಿ ಡಾಲರ್ ಪವರ್‌ಬಾಲ್ ಜಾಕ್‌ಪಾಟ್‌ ಗೆಲ್ಲಿ

ಹಾಗಾದರೆ ಈ ವರ್ಷ ಕೊರೊನಾ ವೈರಸ್‌ನ ಕಾರಣದಿಂದಾಗಿ ರದ್ದಾದ ಪ್ರಮುಖ ಕ್ರೀಡಾ ಟೂರ್ನಿಗಳು ಯಾವುದು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

ಟೋಕಿಯೋ ಒಲಿಂಪಿಕ್ಸ್ 2020

ಟೋಕಿಯೋ ಒಲಿಂಪಿಕ್ಸ್ 2020

ವಿಶ್ವದ ಅತಿ ದೊಡ್ಡ ಕ್ರೀಡಾಕೂಟ ಎನಿಸಿರುವ ಒಲಿಂಪಿಕ್ಸ್ ಗೇಮ್ಸ್ ಈ ವರ್ಷದ ಜುಲೈ 24ರಿಂದ ಆಗಸ್ಟ್ 9ರ ಆವಧಿಯಲ್ಲಿ ಆಯೋಜನೆ ಮಾಡಲು ನಿಗದಿಗೊಳಿಸಲಾಗಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಮಹತ್ವದ ಟೂರ್ನಿಯನ್ನು 2021ಕ್ಕೆ ಅನಿವಾರ್ಯವಾಗಿ ಮುಂದೂಡಬೇಕಾಯಿತು. ಮಾರ್ಚ್ 24ರಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಾಗೂ ಟೀಕಿಯೋ ಆರ್ಗನೈಸಿಂಗ್ ಕಮಿಟಿ ಜಂಟಿಯಾಗಿ 2021ಕ್ಕೆ ಒಲಿಂಪಿಕ್ಸ್ ಆಯೋಜನೆ ಮಾಡುವ ನಿರ್ಧಾರವನ್ನು ಪ್ರಟಿಸಿತು. ಈಗ ಟೋಕಿಯೋ ಒಲಿಂಪಿಕ್ಸ್ಅನ್ನು 2021ರ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಆಯೋಜನೆ ಮಾಡಲು ದಿನಾಂಕವನ್ನು ಮರು ನಿಗದಿಗೊಳಿಸಲಾಗಿದೆ.

ಯುರೋ 2020

ಯುರೋ 2020

ಈ ವರ್ಷದ ಮತ್ತೊಂದು ಮಹತ್ವದ ಟೂರ್ನಿ ಯುರೋ 2020 ಪುಟ್ಬಾಲ್ ಪಂದ್ಯಾಟ. ಯುರೋಪ್‌ನ 12 ರಾಷ್ಟ್ರಗಳು ಈ ಮಹತ್ವದ ಟೂರ್ನಿಯಲ್ಲಿ ಭಾಗಿಯಾಗಬೇಕಿತ್ತು. ಈ ವರ್ಷದ ಜೂನ್ 12ರಿಂದ ಈ ಟೂರ್ನಿ ನಡೆಯಬೇಕಾಗಿತ್ತು. ಆದರೆ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಅತಿಯಾದ ಕಾರಣ ಈ ಟೂರ್ನಿಯನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಯಿತು. 2021ರ ಜೂನ್ 11 ರಿಂದ ಜುಲೈ 11ರ ವರೆಗೆ ಈ ಟೂರ್ನಿಯನ್ನು ಆಯೋಜಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ. ಆದರೆ ಇದು ಇನ್ನಷ್ಟೇ ಖಚಿತಗೊಳ್ಳಬೇಕಿದೆ.

ವಿಂಬಲ್ಡನ್ 2020

ವಿಂಬಲ್ಡನ್ 2020

ಒಲಿಂಪಿಕ್ಸ್ ಹಾಗೂ ಯುರೋ 2020 ಕ್ರೀಡಾಕೂಟಗಳು ಮುಂದಿನ ವರ್ಷಕ್ಕೆ ಮುಂದೂಡಿಕೆಯಾದ ನಂತರ ಆಲ್‌ಇಂಡಿಯಾ ಲಾನ್ ಟೆನ್ನಿಸ್ ಕ್ಲಬ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿತ್ತು. 2020ರ ವಿಂಬಲ್ಡನ್ ಟೆನ್ನಿಸ್ ಗ್ರ್ಯಾಂಡ್‌ಸ್ಲ್ಯಾಮ್‌ಅನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಕೆಲ ತಿಂಗಳಕಾಲ ವಿಂಬಲ್ಡನ್ ಟೆನ್ನಿಸ್ ಮುಂದೂಡಿಕೆಯಾಗಬಹುದು ಎಂದುಕೊಂಡಿದ್ದ ಟೆನ್ನಿ್ ಅಭಿಮಾನಿಗಳಿಗೆ ಈ ನಿರ್ಧಾರ ಆಘಾತ ನೀಡಿತ್ತು. ಮುಂದಿನ ವರ್ಷದ ವಿಂಬಲ್ಡನ್ ಟೆನ್ನಿಸ್ ಟೂರ್ನಿ 2021ರ ಜೂನ್ 28ರಿಂದ ಜುಲೈ 11ರ ಮಧ್ಯೆ ನಡೆಯಲಿದೆ.

ಯುರೋಪಿನ ಫುಟ್ಬಾಲ್‌ ಲೀಗ್‌ಗಳು ಮುಂದೂಡಿಕೆ

ಯುರೋಪಿನ ಫುಟ್ಬಾಲ್‌ ಲೀಗ್‌ಗಳು ಮುಂದೂಡಿಕೆ

ಕೊರೊನಾ ವೈರಸ್ ದಾಳಿಗೆ ಫುಟ್ಬಾಲ್ ಲೋಕದಲ್ಲಿ ಸಾಕಷ್ಟು ಲೀಗ್ ಟೂರ್ನಿಗಳು ಮುಂದೂಡಿಕೆಯಾದವು. ಮಾರ್ಚ್ ಅಂತ್ಯದ ವೇಳೆಗೆ ಯುರೋಪ್‌ನ ದೇಶಗಳಾದ ಇಟೆಲಿ ಸ್ಪೇನ್ ಹಾಗೂ ಫ್ರಾನ್ಸ್‌ನಲ್ಲಿ ವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆಯಾದವು. ಜರ್ಮನಿಯ ಬಂಡೆಸ್‌ಲೀಗಾ ಫುಟ್ಬಾಲ್ ಟೂರ್ನಿ ಪುನಾರಂಭ ಮಾಡಿದ ಮೊದಲ ಲೀಗ್ ಎನಿಸಿತು. ಮೇ 16ರ ನಂತರ ಕಠಿಣ ಆರೋಗ್ಯ ನೀತಿಸಂಹಿತೆಯಲ್ಲಿ ಆಯೋಜಿಸಲಾಯಿತು. ಸ್ಪೇನ್‌ನಲ್ಲಿ ಕೆಲ ಫುಟ್ಬಾಲ್ ಲೀಗ್‌ಗಳು ಇಂಗ್ಲೆಂಡ್ ಹಾಗೂ ಇಟೆಲಿಯ ಫುಟ್ಬಾಲ್ ಲೀಗ್‌ಗಳು ಕೂಡ ಕೆಲ ತಿಂಗಳ ಕಾಲ ಮುಂದೂಡಿಕೆಯಾದವು.

ಟಿ20 ವಿಶ್ವಕಪ್ 2020

ಟಿ20 ವಿಶ್ವಕಪ್ 2020

ಕೊರೊನಾ ವೈರಸ್ ಕ್ರಿಕೆಟ್‌ನ ಸಾಕಷ್ಟು ಟೂರ್ನಿಗಳು ಮುಂದೂಡಿಕೆಯಾದವು. ಅದರಲ್ಲಿ ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗಬೇಕಿತ್ತು. ಅಕ್ಟೋಬರ್ 18ರಿಂದ ನವೆಂಬರ್ ತಿಂಗಳ ಮಧ್ಯದಲ್ಲಿ ಈ ವಿಶ್ವಕಪ್ ಆಯೋಜನೆ ಮಾಡಲು ಸಿದ್ಧತೆಗಳು ಆಗಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಟೂರ್ನಿಯನ್ನು ಐಸಿಸಿ 2022ಕ್ಕೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿತು. ಭಾರತದಲ್ಲಿ ಮುಂದಿನ ವರ್ಷ ಈ ಹಿಂದೆಯೇ ನಿಗದಿಯಾಗಿರುವಂತೆ 2021ವ ಟಿ20 ವಿಶ್ವಕಪ್ ಆಯೋಜನೆಯಾಗಲಿದೆ.

ಐಪಿಎಲ್ 2020

ಐಪಿಎಲ್ 2020

ವಿಶ್ವಕ್ರಿಕೆಟ್‌ನ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಕೊರೊನಾವೈರಸ್‌ನ ಕಾರಣದಿಂದಾಗಿ ಅಂತಿಮ ಹಂತದಲ್ಲಿ ಅನಿರ್ಧಾರಷ್ಟಾವಧಿಗೆ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಟಿ20 ವಿಶ್ವಕಪ್ ಈ ವರ್ಷ ಮುಂದೂಡಿಕೆಯಾದ ಕಾರಣ ಆ ಸಂದರ್ಭವನ್ನು ಐಪಿಎಲ್ ಆಯೋಜಿಸಲು ಬಿಸಿಸಿಐ ನಿರ್ಧರಿಸಿತು. ಹೀಗಾಗಿ ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿಯನ್ನು ಪ್ರೇಕ್ಷಕರ ಗೈರು ಹಾಜರಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಯುಎಇನಲ್ಲಿ ಆಯೋಜನೆ ಮಾಡಲಾಯಿತು.

Story first published: Saturday, December 12, 2020, 10:19 [IST]
Other articles published on Dec 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X