ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್ ದಿಗ್ಗಜ ಪೇಸ್‌ಗೆ 100ನೇ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಪಾಲ್ಗೊಳ್ಳುವಾಸೆ

100th Grand Slam appearance on Leander Paes’ mind

ನವದೆಹಲಿ, ಜೂನ್ 5: ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್‌ಗೆ 100ನೇ ಗ್ರ್ಯಾಂಡ್‌ಸ್ಲ್ಯಾಮ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಸೆಯಿದೆ. ಈಗಾಗಲೇ 97 ಗ್ರ್ಯಾಂಡ್‌ಸ್ಲ್ಯಾಮ್‌ ಪಂದ್ಯಗಳಲ್ಲಿ ಸ್ಪರ್ಧಿಸಿರುವ ಪೇಸ್‌, 100ನೇ ಪಂದ್ಯದಲ್ಲಿ ಪಾಲ್ಗೊಂಡು ಮೈಲಿಗಲ್ಲು ಸ್ಥಾಪಿಸುವ ಬಯಕೆಯನ್ನಿಟ್ಟುಕೊಂಡಿದ್ದಾರೆ. ಆದರೆ ಕೊರೊನಾವೈರಸ್‌ ಪೇಸ್ ಅವರ ಈ ಬಯಕೆ ಈಡೇರಲು ಅವಕಾಶ ಮಾಡಿಕೊಡುತ್ತೋ ಇಲ್ಲವೋ ಗೊತ್ತಿಲ್ಲ.

ಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆ

2020ರ ಸೀಸನ್‌ನ ಬಳಿಕ ತಾನು ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸುವುದಾಗಿ ಲಿಯಾಂಡರ್ ಪೇಸ್ ಹೇಳಿಕೊಂಡಿದ್ದರು. ಆದರೆ ಟೋಕಿಯೋ ಒಲಿಂಪಿಕ್ಸ್‌ ಕೂಡ ಮುಂದೂಡಲ್ಪಟ್ಟಿರುವುದರಿಂದ ಪೇಸ್ ನಿರ್ಧಾರ ಕೂಡ ಬದಲಾದಂತಿದೆ.

ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!

46ರ ಹರೆಯದ ಪೇಸ್, ಒಟ್ಟಿಗೆ 8 ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಹಿರಿಮೆ ಹೊಂದಿದ್ದಾರೆ. ಅಲ್ಲದೆ 8 ಬಾರಿ ಪುರುಷರ ಡಬಲ್ಸ್ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಮತ್ತು 10 ಬಾರಿ ಮಿಶ್ರ ಡಬಲ್ಸ್ ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ. ಟೆನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ವಿಶ್ವಖ್ಯಾತ ಆಟಗಾರರಾಗಿ ಗುರುತಿಸಿಕೊಂಡವರು ಪೇಸ್.

ಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರುಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರು

'ನಾನು 97 ಗ್ರ್ಯಾಂಡ್‌ಸ್ಲ್ಯಾಮ್‌ ಪಂದ್ಯಗಳಲ್ಲಿ ಆಡಿದ್ದೇನೆ. ಇನ್ನು 3 ಹೆಚ್ಚಿಗೆ ಪಂದ್ಯಗಳಲ್ಲಿ ಪಾಲ್ಗೊಂಡರೆ ಅಲ್ಲಿಗೆ 100 ಸ್ಪರ್ಧೆಗಳಲ್ಲಿ ಪಾಲ್ಗೊಂಡಂತೆ ಆಗುತ್ತದೆ. ಅಲ್ಲದೆ, ಎಂಟನೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವುದರಿಂದ ಒಲಿಂಪಿಕ್ಸ್‌ಗಳಲ್ಲಿ ಹೆಚ್ಚು ಬಾರಿ ಟೆನಿಸ್ ಆಟದಲ್ಲಿ ಪಾಲ್ಗೊಂಡ ದೇಶಗಳಲ್ಲಿ ಭಾರತ ಎಂದೆಂದಿಗೂ ಅಗ್ರಸ್ಥಾನದಲ್ಲಿದೆ ಎಂದು ಈ ಮೂಲಕ ಖಾತರಿಪಡಿಸುತ್ತೇನೆ,' ಚಾಟ್‌ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಪೇಸ್ ಹೇಳಿದ್ದಾರೆ.

Story first published: Saturday, June 6, 2020, 10:14 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X