ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2020 ನನ್ನ ವಿದಾಯದ ವರ್ಷವಾಗಲಿದೆ ಎಂದ ಲೆಜೆಂಡ್!

 2020 Will Be My Farewell Year As Pro Tennis Player: Leander Paes

ಭಾರತದ ಟೆನಿಸ್ ಲೆಜೆಂಡ್ ಲಿಯಾಂಡರ್ ಫೇಸ್ ತಮ್ಮ ನಿವೃತ್ತಿಯ ಬಗ್ಗೆ ಮಾತುಗಳನ್ನಾಡಿದ್ದಾರೆ. 1991 ರಲ್ಲಿ ಅಂತರಾಷ್ಟ್ರೀಯ ಟೆನಿಸ್ ಲೋಕಕ್ಕೆ ಪದಾರ್ಪಣೆ ಮಾಡಿದ ಪೇಸ್ ಕಳೆದ 28 ವರ್ಷಗಳ ಕಾಲ ಭಾರತವನ್ನು ಟೆನಿಸ್ ಲೋಕದಲ್ಲಿ ಮಿನುಗುವಂತೆ ಮಾಡಿ ಹಲವಾರು ಗ್ರ್ಯಾಂಡ್‌ ಸ್ಲ್ಯಾಮ್‌ಗಳನ್ನು ಭಾರತದ ಮುಡಿಗೇರಿಸಿದ್ದಾರೆ.

ಲಿಯಾಂಡರ್ ಪೇಸ್ ನಿನ್ನ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ. ಕ್ರಿಸ್ಮಸ್ ಶುಭಾಷಯಗಳನ್ನು ತಿಳಿಸಿದ ಲಿಯಾಂಡರ್ ಪೇಸ್ ಅದರ ಜೊತೆಯಲ್ಲೇ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. 2020 ಅನುಭವಿ ಟೆನಿಸ್ ಆಟಗಾರನಾಗಿ ನನಗೆ ವಿದಾಯದ ವರ್ಷವಾಗಲಿದೆ ಎಂದಿದ್ದಾರೆ.

ಸರಿ ಸುಮಾರು ಮೂರು ದಶಕ ಟೆನಿಸ್ ಕೋರ್ಟ್‌ನಲ್ಲಿ ರಾಕೆಟ್ ಬೀಸಿರುವ ಲಿಯಾಂಡರ್ ಪೇಸ್ ನೂರಾರು ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅದರಲ್ಲಿ 18 ಡಬಲ್ಸ್‌ ಗ್ರಾಂಡ್‌ ಸ್ಲ್ಯಾಮ್‌ಗಳು ಒಳಗೊಂಡಿದೆ. ಮಾರ್ಟಿನಾ ಹಿಂಗಿಸ್ ಅವರೊಂದಿಗೆ 2016ರಲ್ಲಿ ಫ್ರೆಂಚ್ ಮಿಕ್ಸೆಡ್ ಡಬಲ್ಸ್ ಪೇಸ್ ಗೆದ್ದಿರುವ 18ನೇ ಮತ್ತು ಕೊನೆಯ ಗ್ರಾಂಡ್ ಸ್ಲ್ಯಾಮ್ ಆಗಿದೆ.

48 ವರ್ಷದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಲಿಯಾಂಡರ್ ಪೇಸ್ ಡೇವಿಸ್ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸುಗಳಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 44 ಗೆಲುವುಗಳೊಂದಿಗೆ ಅತಿ ಹೆಚ್ಚು ಗೆಲುವುಕಂಡ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಕಳೆದ 19 ವರ್ಷದಲ್ಲಿ ಇದೇ ಮೊದಲ ಬಾರಿಗೆ ಲಿಯಾಂಡರ್ ಪೇಸ್ ಟಾಪ್ 100 ರಿಂದ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಒಲಿಂಪಿಕ್ ಇತಿಹಾಸದಲ್ಲಿ ಟೆನಿಸ್ ಸಿಂಗಲ್ಸ್‌ನಲ್ಲಿ ಪದಕ ಗೆದ್ದಿರುವ ಏಕೈಕ ಭಾರತೀಯ ಎಂಬ ಖ್ಯಾತಿಯೂ ಲಿಯಾಂಡರ್ ಪೇಸ್‌ಗಿದೆ. 1996ರಲ್ಲಿ ಪೇಸ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು.

ಸುದೀರ್ಘವಾದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಲಿಯಾಂಡರ್ ಪೇಸ್ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ಧನ್ಯವಾದವನ್ನು ಹೇಳುವುದರ ಜೊತೆಗೆ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನೂ ಬರೆದಿದ್ದಾರೆ.

Story first published: Thursday, December 26, 2019, 14:56 [IST]
Other articles published on Dec 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X